ಜೆಡಿಎಸ್ ವಿರುದ್ಧ ಕುಟುಂಬ ರಾಜಕಾರಣ ಆರೋಪ: ಕಾಂಗ್ರೆಸ್ ನಾಯಕರಿಗೆ ದೇವೇಗೌಡರ ಅಳಿಯನಿಂದ ಉತ್ತರ ಹೀಗಿತ್ತು!
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗೆಲ್ಲಲು ಕಾಂಗ್ರೆಸ್ & ಬಿಜೆಪಿ-ಜೆಡಿಎಸ್ ನಾಯಕರು, ಭರ್ಜರಿ ಫೈಟಿಂಗ್ ಶುರು ಮಾಡಿದ್ದಾರೆ. ಅದರಲ್ಲೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ವಿರುದ್ಧ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜಯದೇವ ಆಸ್ಪತ್ರೆಯ ಮಾಜಿ ಮುಖ್ಯಸ್ಥ, ಸಿ.ಎನ್. ಮಂಜುನಾಥ್ ಅವರು ಕಣಕ್ಕೆ ಇಳಿದಿದ್ದಾರೆ. ಈ ಸಮಯದಲ್ಲೇ ತಮ್ಮ ಸ್ಪರ್ಧೆ ಬಗ್ಗೆ ಡಾ. ಮಂಜುನಾಥ್ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗೆದ್ದೇ ಗೆಲ್ಲಬೇಕು ಎನ್ನುವುದು ಬಿಜೆಪಿ ಹೈಕಮಾಂಡ್ ಗುರಿ. ಅದರಲ್ಲೂ ಡಿ.ಕೆ. ಸುರೇಶ್ ಅವರನ್ನು ಟಾರ್ಗೆಟ್ ಮಾಡಿಯೆ ಜಯದೇವ ಹೃದ್ರೋಗ ಆಸ್ಪತ್ರೆಯ, ಮಾಜಿ ಮುಖ್ಯಸ್ಥ ಸಿ.ಎನ್. ಮಂಜುನಾಥ್ ಅವರನ್ನೀಗ ಚುನಾವಣೆಗೆ ನಿಲ್ಲಿಸಿದ್ದಾರೆ ಎಂಬ ಮಾತೂ ಇದೆ. ಹೀಗಿದ್ದಾಗ ಸಿ.ಎನ್. ಮಂಜುನಾಥ್ ಈಗ ಮಹತ್ವದ ಹೇಳಿಕೆ ನೀಡಿದ್ದಾರೆ. ಹಾಗಾದರೆ ದೇವೇಗೌಡರ ಅಳಿಯ ಹೇಳಿದ್ದೇನು? ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಕಾಂಗ್ರೆಸ್ ನಾಯಕರ ಆರೋಪಕ್ಕೆ ಮಂಜುನಾಥ್ ಅವರಿಂದ ಬಂದ ರಿಯಾಕ್ಷನ್ ಏನು? ಮುಂದೆ ಓದಿ.

ಜೆಡಿಎಸ್ ಕುಟುಂಬ ರಾಜಕಾರಣ..
ಬಿಜೆಪಿ & ಜೆಡಿಎಸ್ ಮೈತ್ರಿ ಅಭ್ಯರ್ಥಿ ಚುನಾವಣೆ ಬಗ್ಗೆ ರಾಮನಗರದಲ್ಲಿ ಮಾತನಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರನ್ನು ಒಗ್ಗೂಡಿಸುವುದು ಸವಾಲಿನ ಕೆಲಸ ಅಲ್ಲ, ಇಬ್ಬರ ಹೃದಯಗಳು ಈಗಾಗಲೇ ಒಟ್ಟಾಗಿ ಇದೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಎಲ್ಲರೂ ಖುಷಿಯಾಗಿಯೇ ಕೆಲಸ ಮಾಡುತ್ತಿದ್ದಾರೆ. ಭಿನ್ನಾಭಿಪ್ರಾಯ ಜೀರೋ ಅಂತಾ ಹೇಳಿರುವ ಡಾ. ಸಿ.ಎನ್. ಮಂಜುನಾಥ್ ಅವರು, ಕಾಂಗ್ರೆಸ್ ನಾಯಕರು ಇದೀಗ ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಮಾಡಿದ ಆರೋಪದ ಕುರಿತು ರಿಯಾಕ್ಷನ್ ಕೂಡ ಕೊಟ್ಟಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿಗಾಗಿ, ಮುಂದೆ ಓದಿ.
ರಾಜಕೀಯ ಮಾಡಲು ಬಂದಿಲ್ಲ!
ಅಂದಹಾಗೆ ಈ ಕುರಿತಾಗಿ ರಾಮನಗರದಲ್ಲಿ ಮಾತನಾಡಿರುವ ಡಾ. ಸಿ.ಎನ್. ಮಂಜುನಾಥ್ ಅವರು, ನಾನು ರಾಜಕಿಯಕ್ಕೆ ಬಂದಿರುವುದು ರಾಜಕೀಯ ಮಾಡಲು ಅಲ್ಲ. ನಾನು 40 ವರ್ಷ ಹೃದ್ರೋಗ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಅಲ್ಲಿಂದ ನಿರ್ಗಮಿಸಿದ ಬಳಿಕ ಇದೀಗ ರಾಜಕೀಯಕ್ಕೂ ಬಂದಿದ್ದೀನಿ. ಹಲವು ತಜ್ಞರು & ನನ್ನ ಹಿತೈಷಿಗಳು ನನ್ನ ಕ್ರಾಂತಿಕಾರಿ ಬದಲಾವಣೆಯನ್ನ ಯಾಕೆ ರಾಷ್ಟ್ರ ಮಟ್ಟದಲ್ಲಿ ತರಬಾರದು? ಅಂತಾ ಕೇಳಿದ್ದರು.
ಹೀಗಾಗಿ ಅದಕ್ಕೆಲ್ಲಾ ಒಂದು ವೇದಿಕೆಯ ಅಗತ್ಯತೆ ಇತ್ತು. ಇದೇ ಕಾರಣಕ್ಕೆ ನಾನೀಗ, ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು. ಅಲ್ಲದೆ ಈ ವೇಳೆ ಜೆಡಿಎಸ್ ಕುಟುಂಬ ರಾಜಕಾರಣದ ಬಗ್ಗೆ ಕಾಂಗ್ರೆಸ್ ಟೀಕೆ ವಿಚಾರಕ್ಕೆ ಕೂಡ ರಿಯಾಕ್ಷನ್ ಕೊಟ್ಟ ಅವರು, ಅದರ ಬಗ್ಗೆ ನಾನೇನು ಹೇಳಲ್ಲ ಎಂದರು.
ಈಗಾಗಲೇ ಬಿಜೆಪಿ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಅಲರ್ಟ್ ಆಗಿರುವ ಡಾ. ಮಂಜುನಾಥ್ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಾಲು ಸಾಲು ಸಭೆಗಳನ್ನೀಗ ನಡೆಸುತ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ನಾಯಕರು ಕೂಡ ರಣತಂತ್ರ ಹೆಣೆಯುತ್ತಿದ್ದು, ಈಗ ಎರಡೂ ಪಕ್ಷಗಳ ನಡುವೆ ಭರ್ಜರಿ ರಾಜಕೀಯ ಯುದ್ಧ ನಿರೀಕ್ಷೆ ಮಾಡಲಾಗಿದೆ.












Click it and Unblock the Notifications