ಕ್ರಿಸ್‌ಮಸ್‌ ಹಬ್ಬಕ್ಕೆ ಬೆಂಗಳೂರಿಗರಿಗೆ ಟ್ರಾಫಿಕ್ ಶಾಕ್: ವಾಹನ ಸವಾರರ ಪರದಾಟ

ಕ್ರಿಸ್‌ಮಸ್ ಹಬ್ಬದ ಮುನ್ನಾದಿನವಾದ ಭಾನುವಾರ ನಗರದ ಹಲವು ಭಾಗಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಕ್ರಿಸ್‌ಮಸ್ ಹಬ್ಬದ ದಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿದ ಕಾರಣ ಟ್ರಾಫಿಕ್ ಪ್ರಮಾಣ ತೀವ್ರವಾಗಿತ್ತು.

ಭಾನುವಾರ ಪಶ್ಚಿಮದಲ್ಲಿ ರಾಜಾಜಿನಗರದ ಓರಿಯನ್ ಮಾಲ್, ಪೂರ್ವದಲ್ಲಿ ಮಹದೇವಪುರದ ಫೀನಿಕ್ಸ್ ಮಾರ್ಕೆಟ್‌ಸಿಟಿ ಮತ್ತು ಉತ್ತರದಲ್ಲಿ ಬ್ಯಾಟರಾಯನಪುರದ ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಹೊರಗೆ ಟ್ರಾಫಿಕ್ ತೀವ್ರವಾಗಿತ್ತು. ಮಾಲ್‌ಗಳಿಗೆ ಭೇಟಿ ನೀಡುವ ಸಂಖ್ಯೆ ಭಾರಿ ಹೆಚ್ಚಾಗಿತ್ತು.

Traffic

ಬಳ್ಳಾರಿ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರವಾಗಿದ್ದು, ವಾಹನಗಳು ಗಂಟೆಗಟ್ಟಲೆ ರಸ್ತೆಯಲ್ಲಿ ನಿಂತಲ್ಲೇ ನಿಂತಿದ್ದವು. ಈ ಭಾಗದಲ್ಲಿ ಭಾನುವಾರ ಟ್ರಾಫಿಕ್ ಹೆಚ್ಚಾಗಿದೆ ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ.

ಜಂಟಿ ಪೊಲೀಸ್ ಕಮಿಷನರ್ (ಸಂಚಾರ), ಎಂ ಎನ್ ಅನುಚೇತ್ ಮತ್ತು ಬೆಂಗಳೂರು ಟ್ರಾಫಿಕ್ ಪೊಲೀಸ್‌ನ ಎಕ್ಸ್‌ನಲ್ಲಿನ ಅಧಿಕೃತ ಹ್ಯಾಂಡಲ್‌ಗಳು ಟ್ರಾಫಿಕ್ ಸಲಹೆಯನ್ನು ನೀಡಿದ್ದು, ಮಾಲ್‌ಗೆ ಸಾರ್ವಜನಿಕರ ಹೆಚ್ಚಿನ ಒಳಹರಿವು ಮತ್ತು ಪಾರ್ಕಿಂಗ್ ತುಂಬಿರುವುದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಹೇಳಿದ್ದಾರೆ.

ಮಾಲ್ ಆಫ್ ಏಷ್ಯಾದಲ್ಲಿ ಭಾರಿ ಜನ

ಫೀನಿಕ್ಸ್ ಮಾಲ್‌ ಆಫ್ ಏಷ್ಯಾದಲ್ಲಿ ಪಾರ್ಕಿಂಗ್ ಸಂಜೆಯ ಹೊತ್ತಿಗೆ ಪೂರ್ಣವಾಯಿತು, 2 ಕಿಮೀ ವಾಹನಗಳು ನಿಂತಿದ್ದವು. ವಾಹನಗಳು ಒಳಗೆ ಬರಲು ಸುಮಾರು 90 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಜನಸಂದಣಿ ಭಾರಿ ಹೆಚ್ಚಾಗಿದ್ದು ಪಾರ್ಕಿಂಗ್ ಸ್ಥಳವು ಅಸಮರ್ಪಕವಾಗಿದೆ ಎಂದು ಹೇಳಲಾಗಿದೆ.

ಮಾಲ್ ಅಧಿಕಾರಿಗಳು ಟ್ರಾಫಿಕ್ ಪರಿಣಾಮದ ಮೌಲ್ಯಮಾಪನವನ್ನು ನಡೆಸಿಲ್ಲ ಅಥವಾ ಟ್ರಾಫಿಕ್ ಪೊಲೀಸರಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದಿಲ್ಲ ಎಂದು ಹೇಳಲಾಗಿದೆ.

ತುಮಕೂರು ರಸ್ತೆ, ಹೊಸೂರು ರಸ್ತೆ ಮತ್ತು ಬಳ್ಳಾರಿ ರಸ್ತೆಯಲ್ಲಿ ಭಾನುವಾರ ಸಂಜೆ ಹೊರಹೋಗುವ ಸಂಚಾರ ನಿಧಾನವಾಗಿ ಸಾಗಿದರೂ, ಶನಿವಾರದಂದು ಹೊರಹೋಗುವ ದಟ್ಟಣೆಯು ಭಾನುವಾರಷ್ಟು ಸಮಸ್ಯೆಯಾಗಿರಲಿಲ್ಲ ಮತ್ತು ಪ್ರತಿ ವರ್ಷ ಕ್ರಿಸ್‌ಮಸ್ ಸಮಯದಲ್ಲಿ ಇದೇ ರೀತಿ ಆಗುತ್ತಿದೆ.

ಎಂಜಿ ರಸ್ತೆ, ರಿಚ್‌ಮಂಡ್‌ ರಸ್ತೆ ಮತ್ತು ಚರ್ಚ್‌ ಸ್ಟ್ರೀಟ್‌ನಲ್ಲಿ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿದ್ದು, ಕಸ್ತೂರಬಾ ರಸ್ತೆಯಲ್ಲಿ ಕಂಠೀರವ ಕ್ರೀಡಾಂಗಣದಿಂದ ಟ್ರಿನಿಟಿ ಕಡೆಗೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬ್ರಿಗೇಡ್ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ಸಂಚಾರ ಪೊಲೀಸರು ನಿಷೇಧಿಸಿದ್ದು ಮತ್ತು ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸಲು ವಿನಂತಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+