ಬೆಂಗಳೂರಿನಲ್ಲಿ 5 ವರ್ಷಗಳಲ್ಲಿ ರಸ್ತೆ ಅಪಘಾತ 70% ಏರಿಕೆ; 2026ರ ಸಾವು, ಅಂಕಿ ಅಂಶ ಇಲ್ಲಿದೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ವಾಹನ ದಟ್ಟಣೆ ಮಾತ್ರವೇ ಹೆಚ್ಚುತ್ತಿಲ್ಲ. ವಾಹನಗಳ ಬಳಕೆ ಹೆಚ್ಚಿದಂತೆಲ್ಲ ನಗರದಲ್ಲಿ ರಸ್ತೆ ಅಪಘಾತ ಮತ್ತು ಸಾವು ನೋವುಗಳ ಪ್ರಮಾಣವು ಹೆಚ್ಚಾಗಿದೆ. ಕಳೆದ 5 ವರ್ಷಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ರಸ್ತೆ ಅಪಘಾತ ಪ್ರಮಾಣ ಶೇ.70ರಷ್ಟು ಏರಿಕೆ ಆಗಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಮಾಹಿತಿ ನೀಡಿವೆ.

ಸಂಚಾರ ಪೊಲೀಸರು ಕಳೆದ ಐದು ವರ್ಷಗಳ ಮಾಹಿತಿ ನೀಡಿದ್ದಾರೆ. ರಸ್ತೆ ಅಪಘಾತಗಳ ಸಂಖ್ಯೆ 2021ರಲ್ಲಿ 3,213 ರಸ್ತೆ ಅಪಘಾತವಾಗಿವೆ. 2025ರ ಹೊತ್ತಿಗೆ ಅದು 5,459ಕ್ಕೆ ಹೆಚ್ಚಾಗಿದೆ. ಅಪಘಾತ ಹೆಚ್ಚಾಗುತ್ತಿದ್ದಂತೆ ಸಹಜವಾಗಿ ಸಾವುಗಳ ಸಂಖ್ಯೆಯು ಶೇಕಡಾ 53ರಷ್ಟು ಹೆಚ್ಚಾಗಿದೆ ಎಂದು 'ದಿ ಹೆನ್ಸ್ ಇಂಡಿಯಾ' ವರದಿ ಮಾಡಿದೆ.

Bengaluru Road Accidents Rise

2024ರಲ್ಲಿ ಇಳಿಕೆ ನಂತರ ಮತ್ತೆ ಹೆಚ್ಚಳ!

ನಂತರ 2022ರಲ್ಲಿ 3822 ಮತ್ತು 2023ರಲ್ಲಿ 4,974 ರಸ್ತೆ ಅಪಘಾತಗಳು ಜರುಗಿವೆ. ಇನ್ನೂ 2024ರಲ್ಲಿ ರಸ್ತೆ ಅಪಘಾತ 4,769 ರಷ್ಟು ಘಟಿಸುವ ಮೂಲಕ ಇಳಿಕೆ ಆಯಿತು. ಮತ್ತೆ ಮಾರನೇ ವರ್ಷ 2025ರಲ್ಲಿ 5,459 ಅಪಘಾತ ಸಂಭವಿಸುವ ಮೂಲಕ ಹೆಚ್ಚಾಯಿತು. ಇದರಿಂದ ಸಾವು, ನೋವುಗಳ ಪ್ರಮಾಣದಲ್ಲೂ ಏರಿಕೆ ಕಂಡು ಬಂತು.

2021ರಲ್ಲಿ ರಸ್ತೆ ಅಪಘಾತಗಳಿಂದ 654 ಮಂದಿ ಸಾವಿಗೀಡಾದರೆ, 2022ರಲ್ಲಿ 772 ಮತ್ತು 2023ರಲ್ಲಿ 900 ಅಧಿಕ ಜನ ಜೀವ ಕಳೆದುಕೊಂಡಿದ್ದಾರೆ. ಇನ್ನೂ 2024ರ ವರ್ಷದಲ್ಲಿ ಅಪಘಾತದಲ್ಲಿ 894 ಜನ ಸಾವಿಗೀಡಾಗಿದ್ದರೆ, 2025ರಲ್ಲಿ ಅದು 999 ಮಂದಿ ರಸ್ತೆಯಲ್ಲಿ ಉಸಿರೆ ಚೆಲ್ಲಿದ್ದಾರೆ. ಅಂದರೆ ಕಳೆದ ಐದು ವರ್ಷಗಳಲ್ಲಿ ಸಾವುಗಳ ಸಂಖ್ಯೆ ಶೇ.12ರಷ್ಟು ಏರಿಕೆ ಆಯಿತು ಎಂದು ಮೂಲಗಳು ತಿಳಿಸಿವೆ.

2026ರ ಪರಿಸ್ಥಿತಿ ಹೇಗಿದೆ?

ಪ್ರಸ್ತಕ ವರ್ಷ (2026 ರಲ್ಲಿ) ಯಾವುದೇ ಇಳಿಕೆಯ ಸ್ಥಿತಿ ಕಂಡು ಬಂದಿಲ್ಲ. ಕಳೆದ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಒಟ್ಟು 4,702 ರಸ್ತೆ ಅಪಘಾತಗಳಾಗಿದ್ದು, ಅದರಲ್ಲಿ 808 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಬರೋಬ್ಬರಿ 836 ಮಂದಿ ಸಾವಿಗೀಡಾಗಿದ್ದು, 4,111 ಮಂದಿ ಗಾಯಗೊಂಡಿದ್ದಾರೆ ಎಂದು ಸಂಚಾರಿ ಪೊಲೀಸರು ಅಂಕಿ ಸಂಖ್ಯೆ ನೀಡಿದ್ದಾರೆ.

ಅಪಘಾತ ಹೆಚ್ಚಳಕ್ಕೆ ಕಾರಣಗಳೇನು?

ಬೆಂಗಳೂರಿನಲ್ಲಿ ಈ ರೀತಿಯಾಗಿ ರಸ್ತೆ ಅಪಘಾತಳು ಹೆಚ್ಚಲು ಪ್ರಮುಖ ಕಾರಣಗಳೇಂದರೆ, ಅತೀಯಾದ ವೇಗದ ಚಾಲನೆ. ಒಂದು ರಸ್ತೆ ಪಥದಿಂದ ಇನ್ನೊಂದು ರಸ್ತೆ ಬದಲಾವಣೆ ವೇಳೆ ಎಚ್ಚರ ತಪ್ಪುವುದು, ತಪ್ಪು ದಿಕ್ಕಿನಲ್ಲಿ ಸಂಚಾರವು ಅಪಘಾತಗಳ ಹೆಚ್ಚಳಕ್ಕೆ ಕಾರಣಗಳಾಗಿವೆ. ಸಾರ್ವಜನಿಕ ಸಾರಿಗೆಗಿಂತಲೂ ಜನರು ಖಾಸಗಿ ವಾಹನಗಳನ್ನು ಹೆಚ್ಚಾಗಿ ಬಳಸುತ್ತಾರೆ. ರಸ್ತೆ ಜಾಲ, ಮೂಲಸೌಕರ್ಯ ಜೊತೆಗೆ ಬೈಕ್‌ಗಳ ಹೆಚ್ಚಿನ ಸಂಚಾರವು ಕಾರಣವಾಗಿದೆ. ಬೈಕ್ ಸವಾರರು ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಸಂಚಾರಿ ನಿಯಮ ಪಾಲಿಸಬೇಕು. ನಿಯಮ ಉಲ್ಲಂಘನೆಯಿಂದಲೇ ಅಪಘಾತಗಳು ಜರುಗಿವೆ ಎಂದು ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+