Bengaluru: ಹಿಂಗೂ ವ್ಯಾಪಾರ ಮಾಡಬಹುದು! ಬೆಂಗಳೂರು ಬೀದಿ ಬದಿ ವ್ಯಾಪಾರಿಯ ಬುದ್ಧಿವಂತಿಕೆಗೆ ಮನಸೋತ ನೆಟ್ಟಿಗರು
ಉದ್ಯೋಗ ಮಾಡುವುದು ಒಂದು ರೀತಿಯ ಬುದ್ದಿವಂತಿಕೆ ಮತ್ತು ಕೌಶಲ್ಯವಾದರೆ, ವ್ಯಾಪಾರ ಮಾಡುವುದು ಕೂಡ ಮತ್ತೊಂದು ರೀತಿಯ ಕಲೆ. ಪೆನ್ನಿನಿಂದ ಹಿಡಿದು ಕೋಟ್ಯಂತರ ರೂಪಾಯಿ ಮೌಲ್ಯದ ಕಾರು ಮಾರಲು ಕೂಡ ಕೌಶಲ್ಯ ಬೇಕಾಗುತ್ತದೆ.
ಬೆಂಗಳೂರಿನ ಬೀದಿ ಬದಿಯ ವ್ಯಾಪಾರಿಯೊಬ್ಬರು ಕೂಡ ಗ್ರಾಹಕರನ್ನು ಸೆಳೆಯಲು ವಿಭಿನ್ನ ಪ್ರಯತ್ನ ಮಾಡುತ್ತಿದ್ದು ನೆಟ್ಟಿಗರು ಮನಸೋತಿದ್ದಾರೆ. ಕಡಲೆಬೀಜ (ಶೇಂಗಾ) ಮಾರಲು ಬೆಂಗಳೂರಿನ ಬೀದಿ ಬದಿ ವ್ಯಾಪಾರಿಯೊಬ್ಬ ಮಾಡುತ್ತಿರುವ ಐಡಿಯಾ ಈಗ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಪಡೆದುಕೊಂಡಿದೆ.

ಎಕ್ಸ್ (ಟ್ವಿಟರ್) ನಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ತಳ್ಳುವ ಗಾಡಿಯ ಮೇಲೆ ವ್ಯಾಪಾರಿ ಬರೆದುಕೊಂಡಿರುವ ಸಾಲುಗಳು ಈಗ ಗಮನ ಸೆಳೆಯುತ್ತಿದೆ.
ಮೊದಲ ಪೋಸ್ಟರ್ ವಿಶ್ವದ ಪ್ರಸಿದ್ಧ ಷೇರು ಮಾರುಕಟ್ಟೆ ಹೂಡಿಕೆದಾರ ವಾರೆನ್ ಬಫೆಟ್ ಅವರ ಪ್ರಸಿದ್ಧ ಹೇಳಿಕೆಯನ್ನು ಒಳಗೊಂಡಿದೆ: "ನಿಯಮ 1: ಗ್ರಾಹಕರನ್ನು ಎಂದಿಗೂ ಕಳೆದುಕೊಳ್ಳಬೇಡಿ, ನಿಯಮ 2: ನಿಯಮ ನಂ.1 ಅನ್ನು ಮರೆಯಬೇಡಿ." ಎಂದು ಬರೆದಿದ್ದಾರೆ.
ಕಡಲೆಬೀಜ ಸೇವನೆಯ ಪ್ರಯೋಜನಗಳು!
ಮತ್ತೊಂದು ಪೋಸ್ಟರ್ ನಲ್ಲಿ ಕಡಲೆಬೀಜ (ಶೇಂಗಾ) ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳ ಪಟ್ಟಿ ಮಾಡಿದ್ದಾರೆ. ಇದು ಕಡಲೆಬೀಜದಲ್ಲಿರುವ ವಿಟಮಿನ್‌ಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳ ಕುರಿತು ವಿವರಿಸುತ್ತದೆ, ಹೃದಯದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಜೀವ ರಕ್ಷಕರನ್ನಾಗಿ ಇರಿಸುತ್ತದೆ ಎಂದು ಕೂಡ ಬರೆದಿದ್ದಾರೆ.
ಈ ಫೋಟೊವನ್ನು @vishnubogi ಎನ್ನುವ ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾಗಿದ್ದು, "ನನ್ನ ಪೀಕ್ ಬೆಂಗಳೂರಿನ ಕ್ಷಣ, ಉತ್ಪನ್ನದ ವೈಶಿಷ್ಟ್ಯಗಳು - ಪ್ರಯೋಜನಗಳು. ಪರಿಪೂರ್ಣ ಪಟ್ಟಿಯನ್ನು ನೋಡಿ" ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್‌ಗೆ ನೂರಾರು ಜನ ಮೆಚ್ಚುಗೆ ನೀಡಿದ್ದರೆ, 2377 ಜನ ವೀಕ್ಷಣೆ ಮಾಡಿದ್ದಾರೆ.












Click it and Unblock the Notifications