ಬೆಂಗಳೂರು: ಅಪಾರ್ಟ್‌ಮೆಂಟ್ ಮನೆಗಳಿಗೆ ಅಶುದ್ಧ ನೀರು ಪೂರೈಕೆ; ವಿಡಿಯೋ ವೈರಲ್
ಟ್ಯಾಪ್‌ನಿಂದ ಕೆಸರಿನ ಬಣ್ಣದ ನೀರು ಹೊರಬರುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ. ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಕುಡಿಯಲು ಬಳಸುವ ಟ್ಯಾಪ್‌ನಿಂದ ಕೆಂಪು ಬಣ್ಣದ ನೀರು ಹೊರಬರುವುದನ್ನು ತೋರಿಸುವ ವೀಡಿಯೊವನ್ನು ಎಕ್ಸ್ ಬಳಕೆದಾರರು ಹಂಚಿಕೊಂಡಿದ್ದಾರೆ.
ಶೋಭಾ ಅರೆನಾ ಅಪಾರ್ಟ್‌ಮೆಂಟ್‌ನಲ್ಲಿ ನಾವು ಕುಡಿಯುವ ನೀರಿನ ಗುಣಮಟ್ಟವನ್ನು ದಯವಿಟ್ಟು ನೋಡಿ. ದಯಮಾಡಿ ಜುಡಿಶಿಯಲ್ ಲೇಔಟ್, ತಲಗಟ್ಟಾಪುರ, ಕನಕಪುರ ಮುಖ್ಯರಸ್ತೆಯಲ್ಲಿ ಕಾವೇರಿ ನೀರು ಕೊಡಿ ಎಂದು ಎಕ್ಸ್ ಬಳಕೆದಾರ ಧನಂಜಯ ಪದ್ಮನಾಭಾಚಾರ್ ಬರೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬೆಂಗಳೂರು ಪೊಲೀಸರು ಸೇರಿದಂತೆ ಹಲವಾರು ಜನರು ಮತ್ತು ಸಂಸ್ಥೆಗಳನ್ನು ಟ್ಯಾಗ್ ಮಾಡಿದ್ದು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
Dear @CMofKarnataka, @DKShivakumar, @BBMPCOMM, Please see the quality of water we are getting in Sobha Arena Apartment for Drinking. Please give us Cauvery Water at Judicial Layout, Thalagattapura, Kanakapura Main Road. @KA_HomeBuyers @chairmanbwssb @BlrCityPolice @SobhaLtd pic.twitter.com/rn8yUzSuWz
— Dhananjaya Padmanabhachar (@Dhananjaya_Bdvt) February 7, 2024
ಹಲವು ಮನೆಗಳಲ್ಲಿ ಇದೇ ಸಮಸ್ಯೆ
ನಂತರದ ಟ್ವೀಟ್‌ನಲ್ಲಿ ಪದ್ಮನಾಭಾಚಾರ್ ಅವರು ಹಲವಾರು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಮಣ್ಣಿನ ಕಂದು ನೀರಿನಿಂದ ತುಂಬಿದ ವಿವಿಧ ಅಡಿಗೆ ಪಾತ್ರೆಗಳ ಚಿತ್ರಗಳನ್ನು ನೋಡಬಹುದು. ಈ ಚಿತ್ರಗಳನ್ನು ಅಪಾರ್ಟ್ಮೆಂಟ್‌ನಲ್ಲಿ ವಾಸಿಸುವ ಇತರ ನಿವಾಸಿಗಳು ಹಂಚಿಕೊಂಡಿದ್ದಾರೆ ಎಂದು ಅವರು ಬರೆದಿದ್ದಾರೆ.
ಪದ್ಮನಾಭಾಚಾರ್ ಅವರ ಪೋಸ್ಟ್ 89,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ವಿಡಿಯೋಗೆ ಸಾಕಷ್ಟು ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.
"ಇದು ಟ್ಯಾಂಕ್ ಸ್ವಚ್ಛಗೊಳಿಸಿದ ನಂತರ ನೀರು. ಆದ್ದರಿಂದಲೇ ನೀರಿನ ಬಣ್ಣ ಕಂದು ಬಣ್ಣದಿಂದ ಬಿಳಿ ಬಣ್ಣಕ್ಕೆ ಬದಲಾಗುತ್ತಿತ್ತು. ವೀಡಿಯೊವನ್ನು ಸ್ವಲ್ಪ ಹೆಚ್ಚು ವಿಸ್ತರಿಸಿದ್ದರೆ, ನೀರಿನ ಬಣ್ಣವು ಸ್ಪಷ್ಟವಾಗುತ್ತಿತ್ತು" ಎಂದು ಎಕ್ಸ್ ಬಳಕೆದಾರರು ಬರೆದಿದ್ದಾರೆ.
"ಇದು ಬೋರ್‌ವೆಲ್ ನೀರಾ ಅಥವಾ ಟ್ಯಾಂಕರ್ ನೀರಾ ಎಂಬ ಕುತೂಹಲವೇ?" ಎಂದು ಮತ್ತೊಬ್ಬರು ಕೇಳಿದರು. ಅದಕ್ಕೆ ಪದ್ಮನಾಭಾಚಾರ್, "ಗೊತ್ತಿಲ್ಲ. ಇದು ಕುಡಿಯಲು ಅಡುಗೆಮನೆಯಲ್ಲಿ ಆರ್ ಒ- ಫಿಲ್ಟರ್ ಮಾಡಿದ ನೀರಿನಂತೆ ಬರುತ್ತದೆ!" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮೂರನೆಯವರು, "ಬೇಸಿಗೆಯು ನಮಗೆ ಕಠಿಣವಾಗಿರುತ್ತದೆ. ನಾವು ನೀರನ್ನು ಎಚ್ಚರಿಕೆಯಿಂದ ಬಳಸಬೇಕು, ಕೊಳವೆ ಬಾವಿಗಳು ಬತ್ತಿ ಹೋಗಿವೆ." ಎಂದು ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications