Bengaluru Rental Row: ಬೆಂಗಳೂರು ಬಾಡಿಗೆದಾರರಿಗೆ ಶಾಕ್: ಪೇಂಟಿಂಗ್, ಕ್ಲೀನಿಂಗ್ ಹೆಸರಲ್ಲಿ 51,000 ರೂ. ಕಡಿತ
Bengaluru Rental Row: ಬೆಂಗಳೂರಿನಲ್ಲಿ ಆಸ್ತಿದಾರರು, ಬಾಡಿಗೆದಾರರಿಂದ ಮನೆ ಬಿಟ್ಟು ಹೋಗುವ ಸಂದರ್ಭದಲ್ಲಿ ಹೆಚ್ಚು ಹಣ ಪಡೆದುಕೊಳ್ಳುತ್ತಿರುವುದು ಹಾಗೂ ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಚರ್ಚೆ ಜೋರಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಮನೆ ಬಾಡಿಗೆದಾರರಿಂದ ದುಬಾರಿ ಮೊತ್ತವನ್ನು ಮನೆ ಬಿಡುವಾಗ ತೆಗೆದುಕೊಂಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದ್ದು, ಆಸ್ತಿದಾರರ ಈ ಶೋಷಣೆಗೆ ಕಡಿವಾಣ ಹಾಕಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
ಬೆಂಗಳೂರಿನಲ್ಲಿ ಫ್ಲಾಟ್ ಖಾಲಿ ಮಾಡಿದ ನಂತರ ಮನೆಮಾಲೀಕರೊಬ್ಬರು ಭದ್ರತಾ ಠೇವಣಿಯಿಂದ 51,000 ರೂ. ಹೆಚ್ಚು ಹಣ ಕಡಿತ ಮಾಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಕಡಿತ ಮಾಡಿರುವುದರಿಂದ ನಾನು ಆಘಾತಕ್ಕೆ ಒಳಗಾದೆ ಎಂದು ಮನೆ ಬಾಡಿಗೆದಾರರು ಹೇಳಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ Reddit ನಲ್ಲಿ ಈ ಪೋಸ್ಟ್‌ನ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ.

ಮನೆ ಬಾಡಿಗೆದಾರರು ಹೇಳುವಂತೆ, ಮನೆಮಾಲೀಕನು 36,000 ರೂಪಾಯಿ ಮೊತ್ತವನ್ನು ಅಪಾರ್ಟ್‌ಮೆಂಟ್‌ನ ಬಣ್ಣ ಬಳಿಯುವುದಕ್ಕ (ಪೇಂಟಿಂಗ್), 10,000 ರೂಪಾಯಿ ಮೊತ್ತವನ್ನು ಡೀಪ್ ಕ್ಲೀನಿಂಗ್ ಮಾಡುವುದಕ್ಕೆ ಕಡಿತ ಮಾಡಿದ್ದಾರೆ. ಅಲ್ಲದೆ 5,000 ರೂಪಾಯಿ ಮೊತ್ತವನ್ನು ಹೆಚ್ಚುವರಿಯಾಗಿ ಸೇಫ್ಟಿ ಬಫರ್ ಎಂದು ಹಿಡಿದುಕೊಂಡಿದ್ದು, ಹೊಸ ಬಾಡಿಗಾರರು ಮನೆಗೆ ಬಂದು ಎರಡು ವಾರ ಇದ್ದರಷ್ಟೇ ಅದನ್ನು ಹಿಂತಿರುಗಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಬಾಡಿಗೆದಾರರು ದೂರಿದ್ದಾರೆ. ಬೆಂಗಳೂರಿನಲ್ಲಿ ಕೆಲವು ಆಸ್ತಿದಾರರು ಈ ರೀತಿ ಹಗಲು ದರೋಡೆ ಮಾಡುತ್ತಿದ್ದು, ಈ ರೀತಿ ಮಾಡುವ ಆಸ್ತಿದಾರರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈ ಶೋಷಣೆ ತಪ್ಪಬೇಕು ಎಂದು ಹಲವರು ಆಗ್ರಹಿಸಿದ್ದಾರೆ.
ಬಾಡಿಗಾರರು ಹೇಳುವಂತೆ ನಾನು ಬೆಂಗಳೂರಿನಲ್ಲಿ 2.5 BHK ಫ್ಲಾಟ್ ಖಾಲಿ ಮಾಡುವ ಮುನ್ನ ಮನೆಮಾಲೀಕರು ಮನೆ ಸಂಪೂರ್ಣವಾಗಿ, ಬಾಗಿಲುಗಳಿಗೂ ಬಣ್ಣ ಬಳಿಯಬೇಕಾಗಿದೆ ಎಂದಿದ್ದಾರೆ. ಮನೆಗೆ ಪೇಯಿಂಟಿಗ್ ಮಾಡುವ ಪೇಂಟರ್ ಮೊದಲು ಸುಮಾರು 20,000 ಕ್ಕಿಂತ ಕಡಿಮೆ ಖರ್ಚಾಗಬಹುದು ಎಂದು ಅಂದಾಜಿಸಿದ್ದರು. ಆದರೆ ಮನೆ ಖಾಲಿ ಮಾಡಿದ ನಂತರ ಮನೆಮಾಲೀಕನು 36,000 ರೂಪಾಯಿ ಬಿಲ್ ಕೊಟ್ಟಿದ್ದಾರೆ. ಈ ವಿಷಯವಾಗಿ ನನ್ನೊಂದಿಗೆ ಯಾವುದೇ ಚರ್ಚೆ ಮಾಡಲಿಲ್ಲ, ಬೇರೆ ಕೊಟೇಷನ್‌ಗಳನ್ನು ಕೂಡ ತೋರಿಸಲಿಲ್ಲ. ಕೆಲಸ ಮುಗಿದ ಮೇಲೆ ಹೇಳಿದ್ದಾರೆ.
ಇನ್ನು ಇದರೊಂದಿಗೆ 10,000 ರೂ. ಡೀಪ್ ಕ್ಲೀನಿಂಗ್‌ಗೆ ಕೂಡ ಕಡಿತ ಮಾಡಲಾಗಿದೆ. ಆದರೆ ಬೆಂಗಳೂರಿನಲ್ಲಿ 3BHK ಮನೆಗೆ ಸಾಮಾನ್ಯವಾಗಿ ಕ್ಲೀನಿಂಗ್ ಸೇವೆಗಳು 4,500 ರೂಪಾಯಿಯಿಂದ 5,000 ರೂಪಾಯಿ ಮಾತ್ರ ಆಗುತ್ತದೆ. ಇದಲ್ಲದ್ದಕ್ಕಿಂತಲೂ ಮನೆ ಮಾಲೀಕರು 5,000 ಅಡ್ವಾನ್ಸ್ ಹಣವನ್ನೂ ಹಿಡಿದುಕೊಂಡಿದ್ದಾರೆ. ಈ ಬಗ್ಗೆ ನಾನು ಎಲ್ಲಿಯೂ ಕೇಳಿಯೇ ಇಲ್ಲ ಎಂದಿದ್ದಾರೆ. ಹೊಸ ಬಾಡಿಗಾರರು ಎರಡು ವಾರ ವಾಸಿಸಿದ ನಂತರ ಯಾವುದೇ ಸಮಸ್ಯೆ ಇಲ್ಲ ಎಂದು ಖಚಿತವಾದರೆ ಮಾತ್ರ ಹಣ ನೀಡುತ್ತೇವೆ ಎಂದು ಮನೆಮಾಲೀಕ ಹೇಳಿದ್ದಾರೆ. ಮನೆ ಸಂಪೂರ್ಣ ಹಸ್ತಾಂತರವಾದ ನಂತರ ಇಂತಹ ಷರತ್ತು ಕೇಳುತ್ತಿರುವುದು ಇದೇ ಮೊದಲು ಎಂದು ಅವರು ಬರೆದುಕೊಂಡಿದ್ದಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ಬಾಡಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿದೆ.
Bengaluru Rental Row: ನೋಟಿಸ್ ಅವಧಿ ಬಗ್ಗೆ ಎಚ್ಚರ
ಇನ್ನು ಬೆಂಗಳೂರಿನಲ್ಲಿ ಕೆಲವು ಮನೆ ಬಾಡಿಗೆದಾರರು ಮನೆಗಳನ್ನು ಬಿಡುವುದಕ್ಕೆ ನಿಗದಿ ಮಾಡಿರುವ ನೋಟಿಸ್ ಅವಧಿಯನ್ನೂ ಬದಲಾಯಿಸುತ್ತಿದ್ದಾರೆ ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ. ಬಾಡಿಗೆದಾರರೊಬ್ಬರು Redditನಲ್ಲಿ "ಸಿಹಿಯಾಗಿರುವಂತೆ ಕಾಣುವ ಬೆಂಗಳೂರು ಮನೆಮಾಲೀಕರನ್ನು ಅಂಧವಾಗಿ ನಂಬಬೇಡಿ" ಎಂದು ಎಚ್ಚರಿಸಿದ್ದಾರೆ.
ನಾನು 2022ರಿಂದ ಬಸವನಗರದಲ್ಲಿರುವ ಒಂದು ಫ್ಲಾಟ್‌ನಲ್ಲಿ ಬಾಡಿಗೆಗೆ ವಾಸಿಸುತ್ತಿದ್ದೇನೆ. ಈವರೆಗೆ ಒಂದು ದಿನವೂ ಬಾಡಿಗೆ ತಡವಾಗಿಲ್ಲ, ಯಾವುದೇ ಸಮಸ್ಯೆಯೂ ಮಾಡಿರಲಿಲ್ಲ. ಆದರೆ 2026ರ ಬಾಡಿಗೆ ಒಪ್ಪಂದ ನವೀಕರಣ ಸಮಯ ಬಂದಾಗ, ಯಾವುದೇ ಷರತ್ತುಗಳಲ್ಲಿ ಬದಲಾವಣೆ ಇದೆಯೇ ಎಂದು ಮನೆಮಾಲೀಕರನ್ನು ಕೇಳಿದೆ. ಅವರು 'ಯಾವುದೂ ಬದಲಾವಣೆ ಇಲ್ಲ' ಎಂದಷ್ಟೇ ಹೇಳಿದ್ದರು. ಆದರೆ ಹೊಸ ಒಪ್ಪಂದದ ಕರಡನ್ನು ಪೂರ್ತಿ ಓದಿದಾಗ ಅವರು ಸುಳ್ಳು ಹೇಳಿರುವುದು ಗೊತ್ತಾಯಿತು.
Don’t trust your "sweet" Bangalore landlord. Mine tried to trap me with a 2-month notice period during renewal.
byu/dj989 inbangalore
ಮನೆಮಾಲೀಕನು ಮೌನವಾಗಿ ಒಂದು ದೊಡ್ಡ ಬದಲಾವಣೆ ಮಾಡಿದ್ದರು. ಅದೇನೆಂದರೆ ಮೊದಲು 1 ತಿಂಗಳ ನೋಟಿಸ್ ಅವಧಿ ಇತ್ತು. ಅದನ್ನು ಇದೀಗ 2 ತಿಂಗಳ ನೋಟಿಸ್ ಅವಧಿಗೆ ಬದಲಿಸಿದ್ದಾರೆ. ಹೀಗಾಗಿ ಮನೆ ಮಾಲೀಕರನ್ನು ಕಣ್ಮುಚ್ಚಿ ನಂಬಬೇಡಿ ಎಂದು ಅವರು ಎಚ್ಚರಿಸಿದ್ದಾರೆ.












Click it and Unblock the Notifications