Bengaluru Rent: ಬೆಂಗಳೂರಲ್ಲಿ 60,000 ಸಾವಿರ ಬಾಡಿಗೆ ಮನೆ ವಿಡಿಯೋ ವೈರಲ್, ಇಷ್ಟೊಂದು ಬಾಡಿಗೆ ಕೊಡ್ತೀರಾ ಎಂದ ನೆಟ್ಟಿಗರು
Bengaluru Rent: ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಾಗೂ ಬಾಡಿಗೆದಾರರ ಚರ್ಚೆ ಮುಂದುವರಿದಿದೆ. ಬೆಂಗಳೂರಿನ ಬಾಡಿಗೆ ಮನೆಗಳು ದುಬಾರಿಯಾಗಿವೆ. ಕೆಲವು ಆಸ್ತಿದಾರರು ಬಾಡಿಗೆದಾರರಿಂದ ವಿಪರೀತ ಬಾಡಿಗೆಯನ್ನು ಪಡೆಯುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಬಾಡಿಗೆದಾರರೊಬ್ಬರು ತಿಂಗಳಿಗೆ ₹60,000 ಬಾಡಿಗೆ ಕೊಡುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ ಇಷ್ಟೊಂದು ದೊಡ್ಡ ಮಟ್ಟದ ಬಾಡಿಗೆ ಕೊಟ್ಟ ಬಾಡಿಗೆದಾರರು ವಿಶೇಷವಾದ ಪೋಸ್ಟ್‌ವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ
ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮನೆಯ ಮೇಲಿನಿಂದ ಫೋಟೋವೊಂದನ್ನು ಹಂಚಿಕೊಂಡಿರುವ ಅವರು ಹೊಸ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಕೆಲವು ನೆಟ್ಟಿಗರು ಇಷ್ಟೊಂದು ದುಬಾರಿ ಮೊತ್ತದ ಬಾಡಿಗೆ ನೀಡುವ ಅವಶ್ಯಕತೆ ಇದೆಯೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನ ಬಾಡಿಗೆ ಮನೆದಾರರು ಹಂಚಿಕೊಂಡಿರುವ ಪೋಸ್ಟ್ ನೋಡಿ ಹಲವು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದರೂ, ಈ ಸುಂದರ ನೋಟವನ್ನು ನೋಡುವುದಕ್ಕೆ ದುಬಾರಿ ಮೊತ್ತದ ಬಾಡಿಗೆ ಪಾವತಿ ಮಾಡುವುದರಲ್ಲಿ ತಪ್ಪೇನು ಇಲ್ಲ ಅಂತ ಕೆಲವರು ಹೇಳಿದ್ದಾರೆ. ಬೆಂಗಳೂರಿನ ಹೆಚ್ಚುತ್ತಿರುವ ವಸತಿ ವೆಚ್ಚಗಳ ಬಗ್ಗೆ ಹಾಗೂ ದುಬಾರಿ ಅಡ್ವಾನ್ಸ್ ಬಗ್ಗೆಯೇ ಹೆಚ್ಚು ಚರ್ಚೆ ಆಗುತ್ತಿರುತ್ತವೆ. ಈ ರೀತಿ ಇರುವಾಗ ಸ್ವಾರಸ್ಯಕರ ವಿಷಯವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಗಳೂರು ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ದುಬಾರಿ ಬಾಡಿಗೆ ನೀಡುತ್ತಿರುವ ಮಹಿಳೆ ಮಾಡಿರುವ ಪೋಸ್ಟ್ ಇದೀಗ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಯುವತಿಯು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕರಿಷ್ಮಾ ಎನ್ನುವ ಯುವತಿಯು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ತಾವು ವಾಸಿಸುತ್ತಿರುವುದಾಗಿ ಹೇಳಿಕೊಂಡಿರುವ ಯುವತಿಯು, ಈ ಅಪಾರ್ಟ್‌ಮೆಂಟ್‌ನ ಮಾಸಿಕ ಬಾಡಿಗೆಯೇ 60,000 ರೂಪಾಯಿ ಇದೆ. ಮನೆಯಿಂದ ಕೆಳಗೆ ನೋಡಿದರೆ ಸುಂದರವಾದ ದೃಶ್ಯ ಕಾಣಿಸುತ್ತದೆ. ಈಜುಕೊಳ, ಜನ ವಾಕಿಂಗ್ ಹೋಗುತ್ತಿರುವುದು ಹಾಗೂ ಗ್ರೀನರಿ ತುಂಬಿರುವ ದೃಶ್ಯಗಳು ಈ ವೈರಲ್ ವಿಡಿಯೋದಲ್ಲಿದೆ. ಈ ವೈರಲ್ ವಿಡಿಯೋವನ್ನು ನೋಡಿರುವ ಹಲವರು ಇಷ್ಟೊಂದು ಸೌಲಭ್ಯ ಇರುವ ಅಪಾರ್ಟ್‌ಮೆಂಟ್‌ಗೆ ಬೆಂಗಳೂರಿನಲ್ಲಿ 60,000 ರೂಪಾಯಿ ಕೊಡುವುದು ದೊಡ್ಡ ವಿಷಯವೇನಲ್ಲ ಬಿಡಿ ಅಂತ ಹೇಳಿದ್ದಾರೆ. ಮುಖ್ಯವಾಗಿ ಬೆಂಗಳೂರಿನಲ್ಲಿ 2BHK ಹಾಗೂ 3BHKಗೆ ದುಬಾರಿ ಮೊತ್ತದ ಬಾಡಿಗೆ ಇದೆ ಅಂತಲೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ವೈರಲ್ ವಿಡಿಯೋದಲ್ಲಿ ಯುವತಿಯು ನಮಸ್ಕಾರ ಗೆಳೆಯರೇ ನಾನು ಈ ಹಿಂದೆ ಮಾಡಿದ ವಿಡಿಯೋದಲ್ಲಿ ನಾನು ಇರುವ ಮನೆಯ ಬಾಡಿಗೆ ₹60,000 ಎಂದು ನಿಮಗೆ ಹೇಳಿದ್ದೆ. ಇಂದು 60,000 ರೂ. ಬಾಡಿಗೆ ಮನೆಯಿಂದ ನೋಡುವ ದೃಶ್ಯ ಮತ್ತು ನನ್ನ ಕೋಣೆಯಿಂದ ಅದು ಹೇಗೆ ಕಾಣುತ್ತದೆ ಎಂಬುದನ್ನು ನಾನು ನಿಮಗೆ ತೋರಿಸಲಿದ್ದೇನೆ. ಈ ನೋಟ 60,000 ಮೌಲ್ಯದ್ದಾಗಿದೆ ಎಂದು ನೀವು ಭಾವಿಸುತ್ತೀರಾ ಅಥವಾ ನಾನು ಹೆಚ್ಚು ಪಾವತಿಸುತ್ತಿದ್ದೇನೆಯೇ ಎಂದು ದಯವಿಟ್ಟು ಕಾಮೆಂಟ್‌ಗಳಲ್ಲಿ ನನಗೆ ತಿಳಿಸಿ ಅಂತ ಕೇಳಿದ್ದಾರೆ. ಇನ್ನು ಕೆಲವು ನೆಟ್ಟಿಗರು ಈ ಬಾಡಿಗೆ ಮನೆಗೆ ನೀವು ಒಂದು ಲಕ್ಷ ರೂಪಾಯಿ ಬಾಡಿಗೆ ಕೊಟ್ಟರೂ ಸಹ ಕಡಿಮೆಯೇ ಅಂತಲೂ ಕೆಲವರು ಹೇಳಿದ್ದಾರೆ.


Click it and Unblock the Notifications
