Bengaluru Rent: ಮನೆ ಸಿಗುವ ಮುನ್ನವೇ ₹20,000 ಅಡ್ವಾನ್ಸ್‌ಗೆ ಕುತ್ತು; ಹಣ ವಾಪಸ್ ಕೊಡಲು ಆಸ್ತಿದಾರನ ಕಿರಿಕ್!

Bengaluru Rent: ಬೆಂಗಳೂರು - ಕರ್ನಾಟಕದಲ್ಲಿ ಬಾಡಿಗೆ ಹಾಗೂ ಮುಂಗಡ ಹಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಹೊಸ ಕಾನೂನು ರೂಪಿಸಿದೆ. ಆದರೆ, ಈ ಕಾನೂನು ಇನ್ನೂ ಕಾಗದದ ಹುಲಿಯಾಗಿಯೇ ಉಳಿದಿದೆ. ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರವು ಆಸ್ತಿದಾರರು / ಮನೆಯ ಮಾಲೀಕರು ಬಾಡಿಗೆದಾರರಿಂದ ನಿರ್ದಿಷ್ಟ ಬಾಡಿಗೆ ಮೊತ್ತವನ್ನು ಪಡೆದುಕೊಳ್ಳಬೇಕು. ಮುಂಗಡ ಹಣ (Rent advance amount)ವನ್ನು ಕೇವಲ 2 ತಿಂಗಳಿನದ್ದು ಮಾತ್ರ ಮಾಡಬೇಕು. ಅಲ್ಲದೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು ಎನ್ನುವುದು ಸೇರಿದಂತೆ ಹಲವು ನಿಯಮಗಳನ್ನು ರೂಪಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ಇರುವವರು ಇನ್ನೂ ಸಮಸ್ಯೆ ಎದುರಿಸುವುದು ಮುಂದುವರಿದಿದೆ.

ಇದೀಗ ಬೆಂಗಳೂರು ನಗರದ ಇಂದಿರಾನಗರದಲ್ಲಿ ಫ್ಲಾಟ್ ಪಡೆಯಲು ಮುಂಗಡವಾಗಿ ಪಾವತಿಸಲಾಗಿದ್ದ 20,000 ರೂ.ಗಳನ್ನು ಹಿಂದಿರುಗಿಸಲು ಮನೆ ಮಾಲೀಕರು ನಿರಾಕರಿಸಿದ್ದಾರೆ ಎಂಬ ಆರೋಪವನ್ನು ಬಾಡಿಗೆದಾರರೊಬ್ಬರು ಮಾಡಿದ್ದಾರೆ. ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ರೆಡ್ಡಿಟ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಮನೆಯ ಮಾಲೀಕರು ಸ್ಥಳಾಂತರ ದಿನಾಂಕಕ್ಕೆ ಒಪ್ಪಿಕೊಂಡಿದ್ದಾರೆ. ಆದರೆ ಮುಂಗಡ ಹಣ ಪಾವತಿ ಮಾಡಿದ ನಂತರ ಫ್ಲಾಟ್‌ನಲ್ಲಿ ಇರುವವರು ಮನೆ ಖಾಲಿ ಮಾಡುವುದಕ್ಕೆ ಇನ್ನೂ 20 ದಿನಗಳಾಗಲಿವೆ ಅಂತ ಹೇಳಿದ್ದಾರೆ. ಮನೆಯ ಮಾಲೀಕರು ಹೇಳಿದ ದಿನದಂದು ಫ್ಲಾಟ್ ಖಾಲಿ ಇಲ್ಲದ ಕಾರಣ ಮತ್ತು ಲಿಖಿತ ಬಾಡಿಗೆ ಒಪ್ಪಂದವಿಲ್ಲದ ಕಾರಣ, ಬಾಡಿಗೆದಾರರು ಈಗ ಮತ್ತೊಂದು ಮನೆಯನ್ನು ಹುಡುಕುವಂತಾಗಿದ್ದು, ಹಣ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

Bengaluru Rent Tenant Pays 20 000 Advance but Gets No Flat Landlord Refuses Refund

ಬಳಕೆದಾರರು ರೆಡ್ಡಿಟ್‌ನ ಸಬ್‌ರೆಡಿಟ್ ಆರ್/ಬೆಂಗಳೂರು ರೆಂಟಲ್ಸ್‌ನಲ್ಲಿ ಬಾಡಿಗೆ ಮನೆಗೆ ಮುಂಗಡ ಹಣ ಕೊಟ್ಟು ಸಂಕಷ್ಟಕ್ಕೆ ಒಳಗಾಗಿರುವುದನ್ನು ಹಂಚಿಕೊಂಡಿದ್ದಾರೆ. ಸಹಾಯ ಮತ್ತು ಕಾನೂನು ಸಲಹೆ ಕೊಡಿ ಅಂತ ಮನವಿ ಮಾಡಿದ್ದಾರೆ. ಮುಖ್ಯವಾಗಿ ಮನೆ ಮಾಲೀಕರು ಸ್ಥಳಾಂತರ ದಿನಾಂಕವನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಹೊಸ ಮನೆ ಮಾಲೀಕರು ನನ್ನ ಠೇವಣಿಯ ಅರ್ಧವನ್ನು ತೆಗೆದುಕೊಂಡರು ಆದರೆ, ಇನ್ನೂ ಮನೆ ಕೊಟ್ಟಿಲ್ಲ. ಈಗ ನನಗೆ ಮರುಪಾವತಿ ಮಾಡುವುದಕ್ಕೆ ನಿರಾಕರಿಸುತ್ತಿದ್ದಾರೆ. ಬಾಡಿಗೆದಾರರು ಉದ್ಯೋಗ ಬದಲಾಯಿಸಿರುವುದಾಗಿ ಮತ್ತು ಇಂದಿರಾನಗರದಲ್ಲಿರುವ ತಮ್ಮ ಕಚೇರಿಯ ಬಳಿ ಮನೆಯನ್ನು ಹುಡುಕಲು ಬಯಸಿದ್ದಾಗಿ ಹೇಳಿದ್ದಾರೆ. ಹಲವು ಬಾಡಿಗೆ ಮನೆಗಳನ್ನು ಭೇಟಿ ಮಾಡಿದ ನಂತರ, ಅವರು ಆ್ಯಪ್‌ವೊಂದರಲ್ಲಿ ಮನೆಯ ಮಾಲೀಕರು ಅಪ್ಲೋಡ್ ಮಾಡಿದ್ದ ಫೋಟೋ ನೋಡಿ ಅವರಿಗೆ ಕರೆ ಮಾಡಿದ್ದರು.

ಫ್ಲಾಟ್ ಮಾಲೀಕರೊಂದಿಗೆ ಫ್ಲಾಟ್‌ಗೆ ಸ್ಥಳಾಂತರ ಆಗುವ ದಿನಾಂಕದ ಬಗ್ಗೆ ಚರ್ಚಿಸಲಾಗಿತ್ತು. ಆದರೆ ಮನೆ ಮಾಲೀಕರು ಬಾಡಿಗೆ ಒಪ್ಪಂದವನ್ನು /Rent Agreement ಹಸ್ತಾಂತರಿಸುವ ಮೊದಲು ಪೂರ್ಣ ಮುಂಗಡ ಹಣ ಪಾವತಿ ಮಾಡುವಂತೆ ಕೇಳಿದ್ದಾರೆ. ಬಾಡಿಗೆದಾರರು ಮಾತುಕತೆ ನಡೆಸಿ ಒಂದು ತಿಂಗಳಿಗೆ ಸಮಾಮನವಾದ ಬಾಡಿಗೆ ಮೊತ್ತ 20,000 ರೂ. ಪಾವತಿಸಿದ್ದೇವೆ ಮತ್ತು ಸ್ಥಳಾಂತರಗೊಂಡ ನಂತರ ಬಾಕಿ ಉಳಿದ ಮೊತ್ತವನ್ನು ಪಾವತಿಸಿದ್ದೇವೆ ಎಂದು ಹೇಳಿದ್ದೆವು. ಆದಾಗ್ಯೂ, ಅವರು ಒಪ್ಪಿದ ದಿನಾಂಕದಂದು ಬಂದಾಗ, ಈಗಾಗಲೇ ಇರುವ ಬಾಡಿಗೆದಾರರು ಇನ್ನೂ ಮನೆ ಖಾಲಿ ಮಾಡಿರಲಿಲ್ಲ. ಇನ್ನೂ 20 ದಿನಗಳವರೆಗೆ ಇರುವುದಾಗಿ ಮನೆ ಮಾಲೀಕರು ಹೇಳಿದ್ದಾರೆ.

ಪ್ರಕರಣ ದಾಖಲಿಸುವುದಕ್ಕೆ ನಿರ್ಧರಿಸಿದರೂ ಸಹ ಬಾಡಿಗೆ ಮನೆಯ ಮಾಲೀಕರು ಇದನ್ನು ಮುಂಗಡ ಹಣ ಅಂತ ವಾದಿಸುವ ಸಾಧ್ಯತೆ ಇದೆ ಎಂದು ಭಯಪಟ್ಟರು. ಮನೆಯ ಮಾಲೀಕರು ಮೌಖಿಕವಾಗಿ ಅಷ್ಟೇ ಹೇಳಿದ್ದು, ಯಾವುದೇ ಒಪ್ಪಂದವಿಲ್ಲದ ಕಾರಣ ಈ ವಿಷಯದಲ್ಲಿ ಹೇಗೆ ಮುಂದುವರಿಯಬೇಕು ಎಂದು ತಿಳಿಯುತ್ತಿಲ್ಲ ಎಂದೂ ಬಾಡಿಗೆದಾರರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+