Bengaluru Rent: ಬೆಂಗಳೂರಿನಲ್ಲಿ ಏಕಾಏಕಿ ಮನೆ ಬಾಡಿಗೆ ದುಬಾರಿ: ಸೋಶಿಯಲ್ ಮೀಡಿಯಾದಲ್ಲಿ ತಮಿಳು ನಿರ್ಮಾಪಕನ ಪೋಸ್ಟ್‌

Bengaluru Rent: ಬೆಂಗಳೂರಿನಲ್ಲಿ ಆಸ್ತಿ ಮಾಲೀಕರೊಬ್ಬರು ಬಾಡಿಗೆಗೆ ಇದ್ದವರೊಂದಿಗೆ ನಡೆದುಕೊಂಡ ರೀತಿಯು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ದುಬಾರಿ ಬಾಡಿಗೆ ಹೆಚ್ಚಳವನ್ನು ಪ್ರಶ್ನೆ ಮಾಡಿದ್ದಕ್ಕೆ ಬಾಡಿಗೆ ಮನೆದಾರರನಿಗೆ ಮನೆ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ. ಬೆಂಗಳೂರು ಮೂಲದ ಉದ್ಯಮಿ, ನಿರ್ಮಾಪಕ ಈ ವಿಷಯವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಬಾಡಿಗೆಗೆ ಇರುವ ಉದ್ಯಮಿಯು ತಮ್ಮ ಮನೆ ಮಾಲೀಕರು ಶೇ50% ಬಾಡಿಗೆ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಾಡಿಗೆ ಒಪ್ಪಂದದ ಬಗ್ಗೆ ಮಾತನಾಡಿದಾಗ ಮನೆಯನ್ನು ಖಾಲಿ ಮಾಡುವಂತೆ ಹೇಳಿದ್ದಾರೆ ಎಂದು ಬಾಡಿಗೆದಾರರು ಹೇಳಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಬಾಡಿಗೆ ಒಪ್ಪಂದ, ಮನೆ ಮಾಲೀಕರ ಕಿರುಕುಳ ಹಾಗೂ ಬಾಡಿಗೆ ಮನೆಗಳ ಅಡ್ವಾನ್ಸ್‌ ವಿಷಯದ ಬಗ್ಗೆ ಮತ್ತೊಮ್ಮೆ ಚರ್ಚೆ ಶುರುವಾಗಿದೆ.

Bengaluru Rent

ತಮಿಳು ಸಿನಿಮಾದ ನಿರ್ಮಾಪಕ ಹಾಗೂ ಉದ್ಯಮಿ ವಸಂತ್ ಮಾರಿಮುತ್ತು ಅವರು ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ಆಗಿರುವ ಇವರು ತಮ್ಮ ಮನೆ ಮಾಲೀಕರು ಮನೆ ಖಾಲಿ ಮಾಡುವಂತೆ ಹೇಳಿದ್ದಾರೆ. ಇದಕ್ಕೆ ಮುಖ್ಯ ಕಾರಣ ನಾನು ಹೆಚ್ಚು ಬಾಡಿಗೆ ನೀಡುವ ಮುಂಚೆ ಬಾಡಿಗೆ ಒಪ್ಪಂದದ ಬಗ್ಗೆ ಪ್ರಶ್ನೆ ಮಾಡಿದ್ದು. ಮನೆಯ ಮಾಲೀಕರು ಶೇ.50% ಬಾಡಿಗೆ ಹೆಚ್ಚಳ ಮಾಡುವ ಬೇಡಿಕೆ ಇರಿಸಿದ್ದಾರೆ. ಈ ಬಗ್ಗೆ ಟೀಸ್ಟ್ರಾ ಲೈಫ್‌ಸ್ಟೈಲ್‌ನ ಸಂಸ್ಥಾಪಕ ಮತ್ತು ಸಿಇಒ ವಸಂತ್ ಮಾರಿಮುತ್ತು ಅವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಧಿಕೃತ ಬಾಡಿಗೆ ಒಪ್ಪಂದವನ್ನು ಕೇಳಿದ್ದಕ್ಕೆ ಮನೆ ಖಾಲಿ ಮಾಡುವಂತೆ ಹೇಳಿದ್ದಾರೆ ಎಂದು ದೂರಿದ್ದಾರೆ.

ಮಾರಿಮುತ್ತು ಅವರ ಪ್ರಕಾರ ಬಾಡಿಗೆ ಮನೆಯನ್ನು ನವೀಕರಣ ಮಾಡುವಾಗಲೂ ಸಹ ಮನೆಯ ಬಾಡಿಗೆಯನ್ನು ಹೆಚ್ಚಿಸಿದ್ದರು. ಆಗಾಗ್ಗೆ ಸಾಮಾನ್ಯವಾಗಿ ಬಾಡಿಗೆ ಹೆಚ್ಚಳ ಮಾಡುತ್ತೇವೆ ಅಂತ ಮನೆಯ ಮಾಲೀಕರು ಹೇಳುತ್ತಿದ್ದಾರೆ. ಮನೆ ಬಾಡಿಗೆ ಹೆಚ್ಚಳವು ಸಾಮಾನ್ಯವಾಗಿ ಹಾಗೂ ಕಾನೂನಿನ ಅನ್ವಯ ವಾರ್ಷಿಕ ಶೇ. 5ರಿಂದ 10% ಹೆಚ್ಚಳ ಆಗಬೇಕು. ಆದರೆ ನಮ್ಮ ಮನೆಯ ಮಾಲೀಕರು ಹೆಚ್ಚು ಬಾಡಿಗೆ ಹೆಚ್ಚಳ ಮಾಡುವುದಕ್ಕೆ ಮುಂದಾಗಿದ್ದಾರೆ. ಅದೂ ಸಹ ಶೇ.50% ಇದು ಭಾರೀ ದುಬಾರಿ ಮೊತ್ತವಾಗಿದೆ ಎಂದು ಅವರು ದೂರಿದ್ದಾರೆ.

Bengaluru Rent: ಬಾಡಿಗೆ ಒಪ್ಪಂದದ ಪತ್ರ ಕೇಳಿದರೆ ಮನೆ ಖಾಲಿ ಮಾಡು ಅಂದ್ರು!

ಇನ್ನು ದುಬಾರಿ ಬಾಡಿಗೆ ಹೆಚ್ಚಳವನ್ನು ವಿರೋಧಿಸಿ ಹಾಗೂ ಬಾಡಿಗೆ ಮನೆಯ ಒಪ್ಪಂದ ಪತ್ರವನ್ನು ಕೊಡಿ ಅಂತ ಕೇಳಿದ್ದಕ್ಕೆ ಮನೆ ಖಾಲಿ ಮಾಡಿ ಅಂತ ಮನೆಯ ಮಾಲೀಕರು ಹೇಳಿದ್ದಾರೆ. ಮನೆ ಮಾಲೀಕ ಇದಕ್ಕೆ ಕೊಟ್ಟ ಕಾರಣವೂ ವಿಚಿತ್ರವಾಗಿದೆ. ತನ್ನ ಸಹೋದರಿಗೆ ಆಸ್ತಿಯ ಅಗತ್ಯವಿದೆ. ಹೀಗಾಗಿ ಮನೆ ಖಾಲಿ ಮಾಡಿ ಅಂತ ಹೇಳಿದ್ದಾರೆ. ಕಳೆದ ಐದು ವರ್ಷಗಳಿಂದ ನಾನು ಈ ಬಾಡಿಗೆ ಮನೆಯಲ್ಲಿ ಇದ್ದೇನೆ ಆದರೆ ಮನೆ ಖಾಲಿ ಮಾಡುವುದಕ್ಕೆ ನನಗೆ ಕೇವಲ 30 ದಿನ ಮಾತ್ರ ಗಡುವು ಕೊಡಲಾಗಿದೆ ಎಂದು ಮಾರಿಮುತ್ತು ಅವರು ದೂರಿದ್ದಾರೆ.

ನಾನು ಹೊಸ ಬಾಡಿಗೆ ಒಪ್ಪಂದ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದ ಕೂಡಲೇ ಮನೆ ಖಾಲಿ ಮಾಡುವಂತೆ ಹೇಳಿದ್ದಾರೆ. "ದುರಾಶೆಗೆ ಯಾವುದೇ ಮಿತಿಯಿಲ್ಲ." ತಮ್ಮ ಮನೆ ಮಾಲೀಕರು ವೈದ್ಯರ ಕುಟುಂಬಕ್ಕೆ ಸೇರಿದವರು. ಅವರು ಆರ್ಥಿಕವಾಗಿ ಶಕ್ತಿವಂತರು ಹಾಗೂ ವಿದ್ಯಾವಂತರು ಆದರೂ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+