Bengaluru Rent: ಬೆಂಗಳೂರಲ್ಲಿ ಮನೆಗಳ ಬಾಡಿಗೆ ವಿಚಾರಕ್ಕೆ ಅಮೆರಿಕನ್ಸ್ ಶಾಕ್, ವೈರಲ್ ವಿಡಿಯೋ
Bengaluru Rent: ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ವಿಚಾರದ ಚರ್ಚೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಆಸ್ತಿದಾರರು ಬಾಡಿಗೆದಾರರಿಂದ ವಿಪರೀತವಾದ ಬಾಡಿಗೆ ಹಣ ತೆಗೆದುಕೊಳ್ಳುತ್ತಿರುವುದು ಹಾಗೂ ಬಾಡಿಗೆ ಕಾನೂನುಗಳ ಬಗ್ಗೆ ಮತ್ತೊಮ್ಮೆ ತೀವ್ರ ಚರ್ಚೆ ಶುರುವಾಗಿದೆ.
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಅಮೆರಿಕನ್ ಪ್ರಜೆಗಳ ವಿಡಿಯೋ ವೈರಲ್ ಆಗಿದ್ದು, ಬೆಂಗಳೂರಿನ ಮನೆ ಬಾಡಿಗೆ ವಿಚಾರದ ಬಗ್ಗೆ ಅವರು ಪ್ರಸ್ತಾಪಿಸಿರುವ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅವರು ಬೆಂಗಳೂರಿನ ಬಾಡಿಗೆ ಮನೆಗಳ ಬಾಡಿಗೆ ದರವು ತೀವ್ರ ಏರಿಕೆ, ಬಾಡಿಗೆ ಕಾನೂನುಗಳ ಜಾರಿ ಆಗಿದೆ ಇರುವುದು ಹಾಗೂ ಭಾರೀ ಮೊತ್ತದಲ್ಲಿ ಅಡ್ವಾನ್ಸ್ ಹಣ ತೆಗೆದುಕೊಳ್ಳುತ್ತಿರುವ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.

ಆನ್‌ಲೈನ್‌ನಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಬೆಂಗಳೂರಿನ ಅನೇಕ ಬಾಡಿಗೆದಾರರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆದಾರರು ಈ ವಿಚಾರದಲ್ಲಿ ಸಮಸ್ಯೆ ಎದುರಿಸುತ್ತಿರುವುದು ನಿಜ ಎಂದು ಹೇಳಿದ್ದಾರೆ. "ನನ್ನ ಮನೆ ಮಾಲೀಕರು ನನ್ನ ಬಾಡಿಗೆಯನ್ನು ಶೇ. 33% ಹೆಚ್ಚಿಸಲು ಮುಂದಾಗಿದ್ದಾರೆ". ಅಲ್ಲದೆ ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಬಾಡಿಗೆಯ ಬಾಡಿಗೆ ಹೆಚ್ಚಿಸುವುದನ್ನು ಒಪ್ಪದಿದ್ದರೆ ಬೇರೆಯವರು ಬಾಡಿಗೆಗೆ ಬರುವುದಕ್ಕೆ ಸಿದ್ಧರಿದ್ದಾರೆ ಎಂದು ಆಸ್ತಿದಾರರು ಹೇಳುತ್ತಿದ್ದಾರೆ ಎಂದೂ ಅವರು ವಿಡಿಯೋದಲ್ಲಿ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಆಸ್ತಿ ಮಾಲೀಕರು ಬಾಡಿಗೆ ಮನೆಗಳ ಬಾಡಿಗೆ ಹಾಗೂ ಅಡ್ವಾನ್ಸ್ ಮೊತ್ತವನ್ನು ವಿಪರೀತವಾಗಿ ಹೆಚ್ಚಿಸುತ್ತಿದ್ದಾರೆ. ಆದರೆ ಇದನ್ನು ನಿಯಂತ್ರಿಸುವುದಕ್ಕೆ ಯಾವುದೇ ಕಾನೂನು ರೂಪಿಸಿಲ್ಲ ಅಥವಾ ರೂಪಿಸಿದ್ದರೂ ಆ ಕಾನೂನು ಕಾರ್ಯರೂಪಕ್ಕೆ ಬಂದಿಲ್ಲ. ಇದು ಒಂದು ಸಮಸ್ಯೆ ಎಂದಿದ್ದಾರೆ. ಅಮೆರಿಕದಲ್ಲಿ ಬಾಡಿಗೆ ಮನೆಗಳನ್ನು ಬಾಡಿಗೆ ನೀಡುವ ವಿಚಾರದಲ್ಲಿ ಹಲವು ಕಾನೂನುಗಳು ಇವೆ. ಇಲ್ಲಿನಂತೆ ಅಲ್ಲಿನ ಆಸ್ತಿ ಮಾಲೀಕರು ಮನಸ್ಸಿಗೆ ಬಂದಂತೆ ಬಾಡಿಗೆ ಹೆಚ್ಚಿಸಲ್ಲ ಎಂದಿದ್ದಾರೆ.
ಕೆಲವು ಕಡೆಗಳಲ್ಲಿ ಯುಎಸ್‌ನಲ್ಲಿ, ಇದು ಅನೇಕ ಸ್ಥಳಗಳಲ್ಲಿ ಕಾನೂನುಬದ್ಧವಾಗಿರುವುದಿಲ್ಲ ಎಂದು ನಿಮಗೆ ತಿಳಿದಿದೆಯೇ? ಅವರು ವಾರ್ಷಿಕವಾಗಿ 10% ನಂತಹ ಬಾಡಿಗೆ ಮಿತಿಗಳನ್ನು ಹೊಂದಿದ್ದಾರೆ. ನೀವು ಅದಕ್ಕಿಂತ ಹೆಚ್ಚು ಹೆಚ್ಚಿಸಲು ಸಾಧ್ಯವಿಲ್ಲ. ಮತ್ತು ಜನರು ವಾಸ್ತವವಾಗಿ ಕಾನೂನನ್ನು ಅನುಸರಿಸುತ್ತಾರೆ ಎಂದು ಹೇಳಿದ್ದಾರೆ.
ಮನೆ ಬಾಡಿಗೆಗೆ ಸಂಬಂಧಿಸಿದಂತೆ ಕರ್ನಾಟಕ - ಬೆಂಗಳೂರಿನಲ್ಲೂ ಕಾನೂನುಗಳು ಇವೆ. ಆದರೆ ಅದು ಕಾಗದಲ್ಲಷ್ಟೇ ಉಳಿದಿದೆ ಎಂದು ಅವರು ಹೇಳಿದ್ದಾರೆ.
An American living in Bengaluru complains that her rent has increased by 33% when US sets rent cap at 10% and the 4-6 months advance kept by owners when it should be just 1-2 months pic.twitter.com/u25PQFNPXa
— Lord Immy Kant (@KantInEastt) May 6, 2026












Click it and Unblock the Notifications