Bengaluru Rent: ನೀನು ಯುವತಿ; ಮನೆಗೆ ಬರುವವರ ಐಡಿ ಕಾರ್ಡ್ ತೋರಿಸಬೇಕು ಎಂದ ಮನೆ ಮಾಲೀಕ, ವೈರಲ್ ಪೋಸ್ಟ್
Bengaluru Rent: ಬೆಂಗಳೂರು - ದೆಹಲಿಯಂತಹ ಮಹಾನಗರಗಳಲ್ಲಿ ಮನೆಯ ಮಾಲೀಕರ ಕಿರಿಕಿರಿ ಇರುವುದಿಲ್ಲ. ಬೆಂಗಳೂರಿನಂತಹ ಮುಂದುವರಿದ ನಗರಗಳಲ್ಲಿ ಮನೆಯಲ್ಲಿ ಏನಾದರೂ ಆದರೆ ಯಾರೂ ಕೇಳುವುದಕ್ಕೂ ಇರುವುದಿಲ್ಲ ಎನ್ನುವ ಮಾತುಗಳು ತುಂಬಾನೇ ಜಾಸ್ತಿ ಇದೆ. ಆದರೆ ಬೆಂಗಳೂರಿನಲ್ಲಿ ಮನೆಯ ಮಾಲೀಕರೊಬ್ಬರು ವಿಚಿತ್ರವಾಗಿ ನಡೆದುಕೊಂಡಿದ್ದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ ದೊಡ್ಡನೆಕ್ಕುಂಡಿಯಲ್ಲಿ 14,000 ರೂ.ಗೆ 1BHK ಗೆ ಸ್ಥಳಾಂತರಗೊಂಡ ಬಾಡಿಗೆದಾರರ ಪ್ರಕಾರ, ಅವರು ನೆಲೆಸಿರುವ ಅಪಾರ್ಟ್ಮೆಂಟ್ ಆರಂಭದಲ್ಲಿ ಉತ್ತಮ ಡೀಲ್ ಆಗಿ ಕಾಣುತ್ತಿತ್ತು. ಇದು ಕೈಗೆಟುಕುವ ಬೆಲೆಯಲ್ಲಿಯೂ ಇತ್ತು. ಅಲ್ಲದೆ ಕಚೇರಿಗೆ ಹತ್ತಿರದಲ್ಲಿತ್ತು ಮತ್ತು ಉತ್ತಮ ಪ್ರದೇಶದಲ್ಲಿತ್ತು. ಆದರೆ ಸ್ನೇಹಿತರ ಅಪಾರ್ಟ್‌ಮೆಂಟ್‌ಗೆ ಬರುವುದು ಯಾವುದೇ ಸಮಸ್ಯೆ ಇಲ್ಲ ಅಂತಲೂ ಇಲ್ಲಿಗೆ ಶಿಫ್ಟ್ ಆಗುವುದಕ್ಕಿಂತ ಮುಂಚೆ ಆ ಅಪಾರ್ಟ್‌ಮೆಂಟ್‌ನ ಮಾಲೀಕರು ಹೇಳಿದರು ಎಂದು ಅವರು ಹೇಳಿಕೊಂಡಿದ್ದಾರೆ.

ಅಪಾರ್ಟ್‌ಮೆಂಟ್‌ನ ಮಾಲೀಕರಿಂದ ಯಾವುದೇ ಸಮಸ್ಯೆ ಇರುವುದಿಲ್ಲ, ಅವರು ಉಳಿದವರಂತೆ ಕಿರಿಕಿರಿ ಮಾಡುವುದಿಲ್ಲ ಅಂತಲೂ ಈ ಮನೆಯನ್ನು ತೋರಿಸಿದ್ದ ಬ್ರೋಕರ್ ಅವರಿಗೆ ಭರವಸೆ ನೀಡಿದರು. ಸ್ಥಳಾಂತರಗೊಳ್ಳುವ ಮೊದಲು ಸ್ನೇಹಿತರು ಭೇಟಿ ನೀಡುವ ಬಗ್ಗೆ ಮಾಲೀಕರು ಮತ್ತು ಬಾಡಿಗೆ ಒಪ್ಪಂದವನ್ನು ನೋಡಿಕೊಳ್ಳುತ್ತಿದ್ದ ಅವರ ಮಗ ಇಬ್ಬರಿಂದಲೂ ಪರಿಶೀಲಿಸಿ, ಖಚಿತಪಡಿಸಿಕೊಳ್ಳಲಾಗಿತ್ತು. ಇಬ್ಬರೂ ಪರವಾಗಿಲ್ಲ ಅಂತಲೇ ಹೇಳಿದ್ದರು. ಆದರೆ ಮನೆಯ ಮಾಲೀಕನ ಮಗ ಗೆಸ್ಟ್ ಎರಡು ಮೂರು ದಿನಗಳಿಗಿಂತ ಹೆಚ್ಚು ಕಾಲ ಇರಲು ಸಾಧ್ಯವಿಲ್ಲ ಎಂದಿದ್ದಾರೆ ಅಂತ ಹೇಳಲಾಗಿದೆ.
Bengaluru Rent: 20 ದಿನಗಳಲ್ಲಿ ಮನೆ ಮಾಲೀಕರಿಂದ ಕಿರಿಕಿರಿ
ಬಾಡಿಗೆದಾರರು ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆದ ಕೇವಲ 20 ದಿನಗಳಲ್ಲೇ ಕಿರಿಕಿರಿ ಶುರುವಾಗಿದೆ. ಮೊದಲನೆಯದು ವಿದ್ಯುತ್ ಬಿಲ್‌ನಿಂದ ಸಮಸ್ಯೆ ಪ್ರಾರಂಭವಾಯಿತು. ಈ ಹಿಂದಿನ ಬಾಡಿಗೆದಾರರು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಅವರ ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ ಸುಮಾರು ಎರಡು ವಾರಗಳ ಹಿಂದೆಯೇ ಬಂದಿದ್ದರಿಂದ ಅವರು ವಿದ್ಯುತ್ ಅಷ್ಟೇನೂ ಬಳಸಿಲ್ಲ ಎಂದರು. ಆದರೆ ಸಂಪೂರ್ಣ ಬಿಲ್ ಪಾವತಿ ಮಾಡುವಂತೆ ಒತ್ತಾಯಿಸಿದರು ಅಂತ ಮನೆಯ ಬಾಡಿಗೆದಾರರು ದೂರಿದ್ದಾರೆ.
ಮನೆಗೆ ಫ್ರೆಂಡ್ಸ್ ಬರುವುದಕ್ಕೆ ಭಾರೀ ವಿರೋಧ !
ಇನ್ನು ಮನೆಗೆ ಫ್ರೆಂಡ್ಸ್ ಬರುವುದಕ್ಕೆ ಮನೆಯ ಮಾಲೀಕರು ನಿರಂತರ ಕಿರಿಕಿರಿ ಮಾಡಿದ್ದಾರೆ ಎಂದು ಬಾಡಿಗೆದಾರರು ದೂರಿದ್ದಾರೆ. ಮನೆಯಲ್ಲಿ ಬಾಡಿಗೆಗೆ ಇರುವ ಯುವತಿಯ ಗೆಳಯ ಭೇಟಿ ನೀಡಿದಾಗ ದೊಡ್ಡ ಸಮಸ್ಯೆ ಎದುರಾಗಿದೆ. ಮಾಲೀಕರು ತಮ್ಮ ಅಪಾರ್ಟ್‌ಮೆಂಟ್‌ಗೆ ಯಾರು ಬರುತ್ತಿದ್ದಾರೆಂದು ಪ್ರಶ್ನಿಸಿದರು ಎಂದು ಬಾಡಿಗೆದಾರರು ಹೇಳಿದ್ದಾರೆ.
ಏನಾದರೂ ಸಮಸ್ಯೆ ಇದೆಯೇ ಎಂದು ಬಾಡಿಗೆದಾರರು ಕೇಳಿರುವುದಕ್ಕೆ ಈ ರೀತಿ ಜನ ಬರುವುದನ್ನು "ಅನುಮತಿಸಲಾಗುವುದಿಲ್ಲ' ಎಂದು ಹೇಳಿದ್ದಾರೆ. ಅಲ್ಲದೆ ವಿಶೇಷವಾಗಿ ಆಕೆ ಅವಿವಾಹಿತ ಯುವತಿ ಎನ್ನುವ ಕಾರಣ ಮನೆಯ ಮಾಲೀಕರು ಕೊಟ್ಟಿದ್ದಾರೆ. ಮನೆಗೆ ಬಂದವರು ತಮ್ಮ ಸಹೋದರನೇ ಎಂದು ಅವರು ಕೇಳಿದರು, ಹಾಗಿದ್ದಲ್ಲಿ ತಮ್ಮ ಗುರುತಿನ ಚೀಟಿಯನ್ನು ತೋರಿಸುವಂತೆಯೂ ಮನೆಯ ಮಾಲೀಕರು ಕೇಳಿದ್ದಾರೆ ಎಂದು ಬಾಡಿಗೆದಾರರು ದೂರಿದ್ದಾರೆ.
ಬಾಡಿಗೆದಾರರು ತಾವು ಇಲ್ಲಿಗೆ ಬರುವುದಕ್ಕಿಂತ ಮುಂಚೆ ಈ ಬಗ್ಗೆ ನಿರ್ದಿಷ್ಟವಾಗಿ ಕೇಳಿದ್ದೆ ಮತ್ತು ಅದಕ್ಕೆ ಯಾವುದೇ ಸಮಸ್ಯೆ ಇಲ್ಲ ಅಂತಲೂ ನೀವು ಹೇಳಿದ್ದಿರಿ ಎಂದೂ ಯುವತಿ ಪ್ರಶ್ನೆ ಮಾಡಿದ್ದಾಳೆ. "ಅನುಮತಿಸಲಾಗುವುದಿಲ್ಲ, ವಿಶೇಷವಾಗಿ ನೀನು ಹುಡುಗಿ. ಅವಿವಾಹಿತ. ಇದು ಒಳ್ಳೆಯದಲ್ಲ. ಅವನು ನಿನ್ನ ಸಹೋದರನಾಗಿದ್ದರೆ, ಅವನು ತನ್ನ ಗುರುತಿನ ಚೀಟಿಯನ್ನು ತೋರಿಸಲಿ. ಅವನು ಬರುವ ಬಗ್ಗೆ ನೀವು ಇಲ್ಲಿ ಯಾರಿಗಾದರೂ ಹೇಳಿದ್ದೀರಾ. ಯಾರಾದರೂ ನೋಡಿದರೆ ಅವರು ಏನು ಹೇಳುತ್ತಾರೆ' ಅಂತಲೂ ಮನೆಯ ಮಾಲೀಕರು ಪ್ರಶ್ನೆ ಮಾಡಿರುವುದಾಗಿ ಯುವತಿ ದೂರಿದ್ದಾಳೆ.
ಮನೆಗೆ ಬಾಡಿಗೆಗೆ ಬಂದು ಒಂದು ತಿಂಗಳಾದರೂ ಬಾಡಿಗೆ ಒಪ್ಪಂದವನ್ನು ಇನ್ನೂ ಕೊಟ್ಟಿಲ್ಲ. ಬಾಡಿಗೆ ಒಪ್ಪಂದದ ಡ್ರಾಫ್ಟ್ ಅನ್ನು ಹಂಚಿಕೊಂಡಾಗ, ಸಂಬಂಧಿಕರು ಅಥವಾ ಸ್ನೇಹಿತರು ಬಾಡಿಗೆ ಮನೆಯಲ್ಲಿ ಉಳಿಯಲು ಲಿಖಿತ ಅನುಮತಿಯನ್ನು ಪಡೆಯಬೇಕಾದ ಷರತ್ತನ್ನು ಅದರಲ್ಲಿ ಸೇರಿಸಿದ್ದಾರೆ ಎಂದೂ ಹೇಳಿದ್ದಾರೆ. ಈ ವಿಷಯವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.


Click it and Unblock the Notifications
