Bengaluru Rent Crisis: ಬೆಂಗಳೂರಲ್ಲಿ ಬಾಡಿಗೆ ಮನೆ ಡಿಮ್ಯಾಂಡ್ ಬಗ್ಗೆ ಯುವತಿ ವಿಡಿಯೋ ವೈರಲ್
Bengaluru Rent Crisis: ಬೆಂಗಳೂರಿನಲ್ಲಿ ಮನೆ ಹುಡುಕುವುದು ಸರ್ಕಸ್. ಆದರೆ ಒಂದೇ ಒಂದು ಗಂಟೆ ತಡವಾಗಿ ಬಂದರೂ ಬಾಡಿಗೆ ಮನೆ ಸಿಗುವುದಿಲ್ಲ ಎನ್ನುವುದನ್ನು ನಂಬುತ್ತೀರಾ ಹೌದು ಅಂತಹದೊಂದು ವಿಚಿತ್ರವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಯುವತಿಯೊಬ್ಬರು ಇತ್ತೀಚೆಗೆ ತಾವು ನೋಡಿದ್ದ ಬಾಡಿಗೆ ಮನೆಯನ್ನು ಕಳೆದುಕೊಂಡ ನಂತರ ನಗರದ ಸ್ಪರ್ಧಾತ್ಮಕ ಬಾಡಿಗೆ ಮಾರುಕಟ್ಟೆಯ ಬಗ್ಗೆ ತಮ್ಮ ಹತಾಶೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆ ಮನೆಗಳನ್ನು ಹುಡುಕುವುದು ಇಷ್ಟೊಂದು ಸವಾಲಿನ ಕೆಲಸವಾಗಿದೆ ಎಂದು ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ Instagram ನಲ್ಲಿ @namma_rants ಎನ್ನುವ ಖಾತೆಯ ಬಳಕೆದಾರರಾದ ಯುವತಿ ತಾನು ಇಷ್ಟಪಟ್ಟಿದ್ದ ಸಂಪೂರ್ಣವಾಗಿ ಸುಸಜ್ಜಿತವಾಗಿದ್ದ 1BHK ಬಾಡಿಗೆ ಮನೆಯನ್ನು ಕೆಲವೇ ಗಂಟೆಗಳಲ್ಲಿ ಬೇರೆಯವರಿಗೆ ಬಾಡಿಗೆಗೆ ನೀಡಲಾಯಿತು ಎನ್ನುವುದನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ.

ವೀಡಿಯೊದಲ್ಲಿ ಬೆಂಗಳೂರು ನಗರದಲ್ಲಿ ಬಾಡಿಗೆ ಮನೆಗೆ ಇರುವ ಭಾರೀ ಡಿಮ್ಯಾಂಡ್ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರು ನಗರಕ್ಕೆ ಬಂದ ಮೇಲೆ ಮನೆ ಹುಡುಕುತ್ತಿದ್ದ ಅನುಭವದ ಬಗ್ಗೆ ಅವರು ಪ್ರಾಮಾಣಿಕವಾಗಿ ಮಾತನಾಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಎಲ್ಲರಿಗೂ ನಮಸ್ಕಾರ, ನಾನು ಇತ್ತೀಚೆಗೆ ಬೆಂಗಳೂರಿನಲ್ಲಿ ನನ್ನ ಜೀವನವನ್ನು ಪ್ರಾರಂಭಿಸಿದ್ದೇನೆ ಮತ್ತು ನಿಮ್ಮ ಜೀವನದಿಂದ ಯಾರನ್ನಾದರೂ ಕಳೆದುಕೊಳ್ಳುವುದಕ್ಕಿಂತ ಹೆಚ್ಚು ನೋವುಂಟುಮಾಡುವ ಒಂದು ವಿಷಯವೆಂದರೆ ಸಂಭಾವ್ಯ ಮನೆಯನ್ನು ಕಳೆದುಕೊಳ್ಳುವುದು ಎಂದು ಹೇಳಿದ್ದಾರೆ.
ಹೌದು, ನಾನು ತಮಾಷೆ ಮಾಡುತ್ತಿಲ್ಲ, ಸಂಪೂರ್ಣವಾಗಿ ಸುಸಜ್ಜಿತ 1BHK ಬಾಡಿಗೆ ಮನೆಯನ್ನು ನೋಡಿದ್ದೆ. ಸುಮಾರು ಒಂದು ತಿಂಗಳಿನಿಂದ, ಇಂದು ಅಂತಿಮವಾಗಿ, ನನಗೆ ಇಷ್ಟವಾಯಿತು. ನಾನು ಅನೇಕ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದೆ, ಆದರೆ ಬಾಡಿಗೆಗೆ ಸಂಬಂಧಿಸಿದಂತೆ ಅವರು ಯಾವುದರಲ್ಲೂ ರಾಜಿ ಮಾಡಿಕೊಳ್ಳಲಿಲ್ಲ. ಮನೆ ಮಾಲೀಕರು ನಿಗದಿಪಡಿಸಿದ ಹಲವಾರು ಷರತ್ತುಗಳಿಗೆ ಒಪ್ಪಿಕೊಂಡಿದ್ದರೂ, ಒಪ್ಪಂದವನ್ನು ದೃಢೀಕರಿಸುವ ಮೊದಲು ಅವರು ಸ್ವಲ್ಪ ಸಮಯ ಕೇಳಿದರು. ಆದರೆ ಕೆಲವೇ ಗಂಟೆಗಳಲ್ಲಿ ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ಕೊಟ್ಟಿದ್ದಾರೆ.
ಬಾಡಿಗೆ ಮನೆಗೆ ಅಡ್ವಾನ್ ಹಣ - ಮುಂಗಡ ಹಣ ನೀಡುವ ಮುಂಚೆ ಈ ವಿಷಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸುಮಾರು ಒಂದು ಗಂಟೆ ಕೇಳಿಕೊಂಡೆ ಎಂದು ಯುವತಿ ವಿಡಿಯೋದಲ್ಲಿ ವಿವರಿಸಿದ್ದಾರೆ. ಆದಾಗ್ಯೂ, ಅವರು ಮತ್ತೆ ಕರೆ ಮಾಡುವ ಹೊತ್ತಿಗೆ, ಆ ಕಟ್ಟಡದಲ್ಲಿನ ಮನೆಯನ್ನು ಈಗಾಗಲೇ ಬಾಡಿಗೆಗೆ ನೀಡಲಾಗಿದೆ ಎಂದು ಮಾಲೀಕರು ಹೇಳಿದ್ದಾರೆ. ಏನೇ ರಾಜಿ ಮಾಡಿಕೊಳ್ಳಬೇಕಾಗಿದ್ದರೂ, ನಾನು ಅದನ್ನು ಮಾಡಬೇಕಾಗಿತ್ತು. ಆದರೆ ಮನೆಯನ್ನು ಅಂತಿಮಗೊಳಿಸುವ ಮೊದಲು ನಾನು ಸುಮಾರು ಒಂದೂವರೆ ಗಂಟೆ ಸಮಯ ಕೇಳಿದೆ ಅಷ್ಟೇ ಆದರೆ ಮನೆ ಮಾಲೀಕರು ಬೇರೆಯವರಿಗೆ ಮನೆ ಬಾಡಿಗೆ ಕೊಟ್ಟಿದ್ದಾರೆ ಎಂದು ಯುವತಿ ಆ ವೈರಲ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
Bengaluru Rent Crisis ಬೆಂಗಳೂರಲ್ಲಿ ಬಾಡಿಗೆ ಮನೆ ಹುಡುಕುವ ಸಾಹಸ
ಇನ್ನು ಬೆಂಗಳೂರಿನಲ್ಲಿ ಬಾಡಿಗೆ ಮನೆಗಳನ್ನು ಹುಡುಕುವುದು ಸವಾಲಾಗಿ ಪರಿಣಮಿಸುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಅಥವಾ ನಮ್ಮ ಬಜೆಟ್‌ನಲ್ಲಿ ಬಾಡಿಗೆ ಮನೆಗಳು ಸಿಗುವುದು ಸವಾಲಿನ ಕೆಲಸವಾಗಿದೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಬಾಡಿಗೆ ಮನೆಗಳ ಡಿಮ್ಯಾಂಡ್ ಬಗ್ಗೆಯೂ ಹಲವರು ಅಸಮಾಧಾನ ಹೊರ ಹಾಕಿದ್ದಾರೆ.













Click it and Unblock the Notifications