ನಿಮಗಿನ್ನೂ 35 ವರ್ಷ ಆಗಿಲ್ಲ ಅಂತಾದ್ರೆ ಈಗಲೇ ಈ ಸುದ್ದಿ ನೋಡಿ: ಫೆಡರಲ್ ಬ್ಯಾಂಕ್‌ನಲ್ಲಿ ಉದ್ಯೋಗ, ಕೈತುಂಬಾ ಸಂಬಳ
ಪ್ರತಿಷ್ಠಿತ ಫೆಡರಲ್ ಬ್ಯಾಂಕ್ ಸೇಲ್ಸ್ ಪ್ರೊಫೆಷನಲ್ (Sales Professional) ಹಾಗೂ ರಿಲೇಶನ್‌ಶಿಪ್ ಮ್ಯಾನೇಜರ್ (Relationship Manager) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅರ್ಹ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಏಪ್ರಿಲ್ 13ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್ 26 ಕೊನೆಯ ದಿನಾಂಕವಾಗಿದೆ.
ಹುದ್ದೆಯ ವಿವರಗಳು:
ಈ ನೇಮಕಾತಿ ರೀಟೇಲ್ ಅಸೆಟ್ಸ್ (Retail Assets) ವಿಭಾಗಕ್ಕೆ ಸಂಬಂಧಿಸಿದೆ. ಗೃಹ ಸಾಲ, ಆಸ್ತಿ ಮೇಲಿನ ಸಾಲ ಹಾಗೂ ವಾಹನಗಳ ಮೇಲಿನ ಸಾಲಗಳನ್ನು ನಿರ್ವಹಿಸುವ ಜವಾಬ್ದಾರಿ ಈ ಹುದ್ದೆಗೆ ಸೇರಿದೆ. ಜೊತೆಗೆ DSA ಚಾನೆಲ್ ಮೂಲಕವೂ ಸಾಲ ಸಂಬಂಧಿತ ಕಾರ್ಯಗಳನ್ನು ನೋಡಿಕೊಳ್ಳಬೇಕು.

ಅರ್ಹತೆಗಳು:
ಶೈಕ್ಷಣಿಕ ವಿದ್ಯಾರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ಅನುಭವ: ಗೃಹ ಸಾಲ ಅಥವಾ ಆಸ್ತಿ ಮೇಲಿನ ಸಾಲದಂತಹ ಅಡಮಾನ ಉತ್ಪನ್ನಗಳಲ್ಲಿ ಕನಿಷ್ಠ ಎರಡು
ವರ್ಷಗಳ ಅನುಭವ ಹೊಂದಿರುವುದು ಕಡ್ಡಾಯವಾಗಿದೆ.
ವಯೋಮಿತಿ: ವಯೋಮಿತಿ ಏಪ್ರಿಲ್ 1, 2026ರಂತೆ 35 ವರ್ಷಗಳೊಳಗಿರಬೇಕು.(ಏಪ್ರಿಲ್ 1, 1991ರ ನಂತರ ಜನಿಸಿರಬೇಕು).
ರಾಷ್ಟ್ರೀಯತೆ: ಭಾರತೀಯ ನಾಗರಿಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಫೆಡರಲ್ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನ federalbank.co.in/careers ವಿಭಾಗದ ಮೂಲಕ ಮಾತ್ರ ಸಲ್ಲಿಸಬೇಕು. ಯಾವುದೇ ಅರ್ಜಿ ಶುಲ್ಕವಿಲ್ಲ. ನೋಂದಣಿ ಪೂರ್ಣಗೊಂಡ ನಂತರ ಅಗತ್ಯ ದಾಖಲೆಗಳನ್ನು Fed-Recruit App ಮೂಲಕ ಅಪ್‌ಲೋಡ್ ಮಾಡಬೇಕಾಗುತ್ತದೆ.
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸೂಕ್ತವಾದ ಅಭ್ಯರ್ಥಿಗಳನ್ನು ನಂತರ ವೈಯಕ್ತಿಕ ಸಂದರ್ಶನದ ಮೂಲಕ ನಡೆಯಲಿದೆ. ಬ್ಯಾಂಕ್ ಅಗತ್ಯವಿದ್ದರೆ ಹೆಚ್ಚುವರಿ ಆಯ್ಕೆ ವಿಧಾನಗಳನ್ನು ಕೂಡ ಬಳಸಬಹುದು. ಆಯ್ಕೆ ಹಂತಗಳ ಅಂಕಗಳನ್ನು ಗೌಪ್ಯವಾಗಿಡಲಾಗುತ್ತದೆ.
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ವರ್ಷಕ್ಕೆ ಸುಮಾರು ರೂ. 4.64 ಲಕ್ಷದಿಂದ ರೂ. 10.06 ಲಕ್ಷದವರೆಗೆ (CTC) ವೇತನ ದೊರೆಯಲಿದೆ. ಜೊತೆಗೆ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕಗಳು, NPS, ಆರೋಗ್ಯ ವಿಮೆ, ಗ್ರಾಚ್ಯುಟಿ ಮತ್ತು ರಿಯಾಯಿತಿ ಸಾಲ ಸೌಲಭ್ಯಗಳಂತಹ ಹೆಚ್ಚುವರಿ ಪ್ರಯೋಜನಗಳು ಲಭ್ಯವಿರುತ್ತವೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಸೂಚನೆಗಳನ್ನು ಗಮನದಿಂದ ಓದಿಕೊಳ್ಳಬೇಕು. ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಹಕ್ಕು ಬ್ಯಾಂಕಿಗೆ ಇರುತ್ತದೆ. ಅರ್ಜಿಯನ್ನು ಯಾವುದೇ ಹಂತದಲ್ಲಿ ತಿರಸ್ಕರಿಸುವ ಅಧಿಕಾರವೂ ಬ್ಯಾಂಕ್ ಹೊಂದಿರುತ್ತದೆ.
ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆ, ಪೊಲೀಸ್ ಪರಿಶೀಲನೆ ಹಾಗೂ ಕ್ರೆಡಿಟ್ ಸ್ಕೋರ್ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ಯಾವುದೇ ರೀತಿಯ ಪ್ರಭಾವ ಬೀರುವ ಪ್ರಯತ್ನಗಳನ್ನು ಅನರ್ಹತೆಯಾಗಿ ಪರಿಗಣಿಸಲಾಗುತ್ತದೆ.














Click it and Unblock the Notifications