ಶಾರ್ಟ್ಸ್ ವಿಡಿಯೋ ಅಡಿಕ್ಷನ್‌ನಿಂದ ಹೊರಬರಬೇಕಾ? ಇಲ್ಲಿದೆ ನೋಡಿ ಐಡಿಯಾ : ಕುಟುಂಬಕ್ಕೆ ಅತಿ ಉಪಯುಕ್ತ ಮಾಹಿತಿ
ಯುಟ್ಯೂಬ್ ಶಾರ್ಟ್ಸ್ ವಿಡಿಯೋಗಳಿಂದಾಗಿ ನಿಮಗೆ ಸಮಸ್ಯೆಯಾಗುತ್ತಿದೆಯಾ? ಯುಟ್ಯೂಬ್ ಶಾರ್ಟ್ ವಿಡಿಯೋಗಳಿಗೆ ನಿಮ್ಮ ಮಕ್ಕಳು ಅಡಿಕ್ಟ್ ಆಗಿದ್ದಾರೆ ಎಂದು ಅನ್ನಿಸುತ್ತಿದೆಯಾ?. ಮೊಬೈಲ್‌ನಲ್ಲಿ ಅಥವಾ ಮನೆಯ ಟೀವಿಯಲ್ಲಿ ಶಾರ್ಟ್ ವಿಡಿಯೋಗಳನ್ನು ಸಂಪೂರ್ಣ ಬಂದ್ ಮಾಡಿಸಬೇಕು ಎಂದನ್ನಿಸುತ್ತಿದೆಯಾ? ಮೊಬೈಲ್‌ನಲ್ಲಿ ಶಾರ್ಟ್ ವಿಡಿಯೋಗಳನ್ನು ನಿರ್ಬಂಧಿಸಬೇಕಾ? ನಿಮಗೆ ಅತ್ಯಂತ ಉಪಯುಕ್ತ ಮಾಹಿತಿಯನ್ನು ನಾವಿಂದು ಹಂಚಿಕೊಳ್ಳುತ್ತಿದ್ದೇವೆ. ಶಾರ್ಟ್ಸ್ ವಿಡಿಯೋ ಬಿಟ್ಟು, ಬರೀ ಸಂಪ್ರದಾಯಿಕ, ಅಧಿಕ ಅವಧಿಯ ದೊಡ್ಡ ವಿಡಿಯೋಗಳ ಮೇಲೆ ಹೆಚ್ಚು ಫೋಕಸ್ ಮಾಡುವುದು ಹೇಗೆ ಎಂಬುದನ್ನು ನಾವಿಂದು ಹೇಳುತ್ತಿದ್ದೇವೆ.
ಮೊಬೈಲ್ ಆಪ್‌ನಲ್ಲಿ ಶಾರ್ಟ್ ಫೀಡ್‌ಗಳನ್ನು ನಿರ್ಬಂಧಿಸುವುದಕ್ಕೆ ಅವಕಾಶ ಮಾಡಿಕೊಡುವ ಸೆಟ್ಟಿಂಗ್‌ನ್ನು ಯುಟ್ಯೂಬ್ ಈಗ ಹೊರತಂದಿದೆ. ಅದನ್ನ ತಿಳಿದುಕೊಂಡರೆ ನಿಮ್ಮ ಮೊಬೈಲ್‌ನಲ್ಲಿ ಶಾರ್ಟ್ಸ್ ಫೀಡ್‌ಗಳನ್ನು ನಿರ್ಬಂಧಿಸಬಹುದು. ಶಾರ್ಟ್ಸ್ ಫೀಡ್ ವಿಡಿಯೋಗಳನ್ನು ಸೊನ್ನೆ ನಿಮಿಷಗಳಿಂದ ನಮಗೆ ಬೇಕಾದಷ್ಟು ಅವಧಿಗೆ ಮೊಬೈಲ್‌ನಲ್ಲಿ ನಿರ್ಬಂಧಿಸಬಹುದು. ಯೂಸರ್ಸ್ ಈಗ ತಮ್ಮ ಮೊಬೈಲ್‌ನಲ್ಲಿ ಶಾರ್ಟ್ಸ್ ಫೀಡ್‌ಗಳನ್ನು ಹೈಡ್ ಮಾಡಬಹುದು. ಈ ಫೀಚರ್ ಈಗ ಎಲ್ಲಾ ಬಳಕೆದಾರರಿಗೆ ಲಭ್ಯವಿದೆ ಎಂದು ಯುಟ್ಯೂಬ್ ಹೇಳಿದೆ. ಈ ಹಿಂದೆ, ಈ ಫೀಚರನ್ನು ಪ್ರಯೋಗಾತ್ಮಕವಾಗಿ ಜಾರಿಗೆ ತರಲಾಗಿತ್ತು.

ಹೊಸ ಸೆಟ್ಟಿಂಗ್ ಅಳವಡಿಸಿಕೊಂಡ ಮೇಲೆ, ಒಂದು ಸಮಯದ ಮಿತಿಯ ನಂತರ ನಿಮ್ಮ ಯುಟ್ಯೂಬ್‌ನಲ್ಲಿ ಶಾರ್ಟ್ಸ್ ಟ್ಯಾಬ್ ಕಾಣಿಸಿಕೊಳ್ಳುವುದಿಲ್ಲ. ಉದಾಹರಣೆಗೆ 30 ನಿಮಿಷಕ್ಕೆ ನೀವು ಶಾರ್ಟ್ಸ್ ಸೆಟ್ ಮಾಡಿದ್ದರೆ, 30 ನಿಮಿಷಗಳ ನಂತರ ಶಾರ್ಟ್ಸ್ ನಿಮ್ಮ ಮೊಬೈಲ್‌ನಲ್ಲಿ ಕಾಣಿಸುವುದಿಲ್ಲ. ಬದಲಿಗೆ ನಿಮ್ಮ ಅವಧಿ ಮುಗಿದಿದೆ ಎಂಬ ಸಂದೇಶ ನಿಮಗೆ ಕಾಣುತ್ತಿರುತ್ತದೆ. ಸಮಯದ ಸೆಟ್ಟಿಂಗ್‌ನ್ನು ನಿಮಗೆ ಬೇಕಾದ ಅವಧಿಗೆ ಅಡಜಸ್ಟ್ ಮಾಡಿಟ್ಟುಕೊಳ್ಳಬಹುದು.
ಶಾರ್ಟ್ ವಿಡಿಯೋಗಳನ್ನು ಮಕ್ಕಳು ನೋಡುವುದಕ್ಕೆ ಕಡಿವಾಣ ಹಾಕಲು ಈ ಫೀಚರ್ ಅತ್ಯಂತ ಉಪಯೋಗಿ. ಮಕ್ಕಳ ಸುರಕ್ಷತೆ ಹಾಗೂ ದೈಹಿಕ ಆರೋಗ್ಯದ ದೃಷ್ಟಿಯಿಂದಲೂ ಇದು ಅನಿವಾರ್ಯ. ಮಕ್ಕಳ ಸ್ಕ್ರೀನ್ ವಾಚ್ ಟೈಮ್ ಕುರಿತಂತೆ ಯುಟ್ಯೂಬ್ ತನ್ನ ಪೇರೆಂಟಲ್ ಕಂಟ್ರೋಲ್ ಫೀಚರ್‌ನಲ್ಲಿ ಬದಲಾವಣೆ ತಂದಿದೆಯಾದರೂ, ಅದು ಪರಿಣಾಮಕಾರಿಯಾಗಿಲ್ಲ.
ಕೇವಲ ಟೈಮರ್ ಸೆಟ್ ಮಾಡುವುದು ಅಷ್ಟೇ ಅಲ್ಲ. ಪೋಷಕರು ಬಯಸಿದರೆ, ಶಾರ್ಟ್ಸ್ ನೋಡುವ ಖಾತೆಗಳನ್ನೇ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ಬ್ಲಾಕ್ ಮಾಡಿ ಬಿಡಬಹುದು. ಶಾರ್ಟ್ಸ್‌ಗಳನ್ನು ಕೇವಲ ಕಲಿಕೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳಿಗೂ ಸೀಮಿತಗೊಳಿಸಬಹುದು.
ಯುಟ್ಯೂಬ್ ಶಾರ್ಟ್ಸ್ ಬಂದ್ ಮಾಡುವುದು ಹೇಗೆ?. ಈ ಕೆಳಗೆ ಹೇಳಿದ ಕ್ರಮಗಳನ್ನು ಯಥಾವತ್ತಾಗಿ ಅನುಸರಿಸಿ.
* ಯುಟ್ಯೂಬ್ ಸೆಟ್ಟಿಂಗ್‌ಗೆ ಹೋಗಿ
* ಟೈಮ್ ಮ್ಯಾನೇಜ್‌ಮೆಂಟ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ
* ನಂತರ ಡೈಲಿ ಲಿಮಿಟ್ ಆಪ್ಶನ್ ಪಿಕ್ ಮಾಡಿ
* ಬಳಿಕ ಶಾರ್ಟ್ಸ್ ಫೀಡ್ ಲಿಮಿಟ್ ಆನ್ ಮಾಡಿ
* ನಿಮ್ಮ ಬಳಕೆಗೆ ಬೇಕಾದ ಟೈಮ್ ಲಿಮಿಟ್ ಆಯ್ಕೆ ಮಾಡಿ.
* ನಿಮಗೆ ಸಂಪೂರ್ಣ ಬ್ಲಾಕ್ ಮಾಡಬೇಕಾದರೆ ಟೈಮ್ ಲಿಮಿಟ್ ೦ ಆಯ್ಕೆ ಮಾಡಿ
ಶಾರ್ಟ್ಸ್ ವಿಡಿಯೋ ಯುಟ್ಯೂಬ್‌ನ ಅತ್ಯಂತ ಜನಪ್ರಿಯ ಮಾಧ್ಯಮವಾಗಿದೆ. ಶಾರ್ಟ್ಸ್ ವಿಡಿಯೋಗಳಿಗೆ ದಿನಕ್ಕೆ 200 ಶತಕೋಟಿ ವೀವ್ಸ್ ಬರುತ್ತಿದೆ. ಶಾರ್ಟ್ಸ್ ವಿಡಿಯೋಗಳ AI ಅವತರಣಿಕೆಗಳೂ ಈಗ ಲಭ್ಯ ಇವೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications