Bengaluru Rent: ಫ್ಲಾಟ್ ಕೀಲಿ ಕೈಯಲ್ಲಿದ್ದರೂ ಬ್ಯಾಚುಲರ್‌ಗೆ ಮನೆ ಖಾಲಿ ಮಾಡುವಂತೆ ಸೂಚನೆ; ವೈರಲ್ ಆಯ್ತು ಪೋಸ್ಟ್!

Bengaluru Rent: ಬೆಂಗಳೂರು ನಗರದಲ್ಲಿ ಕೆಲವು ಮನೆಯ ಮಾಲೀಕರ ಕಿರುಕುಳದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಏಕಾಏಕಿ ಮನೆ ಖಾಲಿ ಮಾಡುವಂತೆ ಹೇಳುವುದು, ದುಬಾರಿ ಬಾಡಿಗೆ ಹಾಗೂ ದುಬಾರಿ ಅಡ್ವಾನ್ಸ್‌ ಹಣ ಪಡೆಯುವುದು ಸೇರಿದಂತೆ ಮನೆ ಮಾಲೀಕರ ಬಗ್ಗೆ ಒಂದಿಲ್ಲೊಂದು ಆರೋಪಗಳು ಕೇಳಿ ಬರುತ್ತಿವೆ. ಇದೀಗ ಮನೆಯ ಹುಡುಕಾಟಕ್ಕೆ ತಿಂಗಳುಗಳೇ ತೆಗೆದುಕೊಂಡರೂ, ಕೆನೆಗೂ ಮನೆ ಸಿಗದೆ ಹೇಗೆ ಸಮಸ್ಯೆ ಎದುರಿಸಿದರು ಎನ್ನುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

"ನಾನು ತುಂಬಾ ಕಷ್ಟಪಟ್ಟು ಇಲ್ಲಿಯವರೆಗೆ ಬಂದಿದ್ದೇನೆ. ಆದರೆ ಕೊನೆಯಲ್ಲಿ, ಈ ಹುಡುಕಾಟಕ್ಕೆ ಯಾವುದೇ ಅರ್ಥವೇ ಇಲ್ಲ' ಬೆಂಗಳೂರಿನ ಬಾಡಿಗೆ ಮನೆ ಹುಡುಕಾಟವು ಸಾಹಸಮಯವಾಗಿದೆ ಎಂದು ಬ್ಯಾಚುಲರ್‌ವೊಬ್ಬರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

Bengaluru Rent Bachelor Asked to Vacate Despite Holding the Flat Keys Viral Post Sparks Debate

ಅವಿವಾಹಿತ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಬಾಡಿಗೆ ಮನೆ, ಫ್ಲಾಟ್ ಹುಡುಕಾಟದ ಅನುಭವವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಫ್ಲಾಟ್‌ನ ಕೀಲಿ ಕೈಯಲ್ಲಿದ್ದರೂ, ಏಕಾಏಕಿ ಮನೆಯಿಂದ ಹೊರಹೋಗುವಂತೆ ಹೇಳಲಾಗಿದೆ ಅಂತ ಅವರು ಹೇಳಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಈ ಪೋಸ್ಟ್‌ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

ಬೆಂಗಳೂರಿನ ಬಾಡಿಗೆ ಮನೆ ಹುಡುಕಾಟಕ್ಕೆ ಸಂಬಂಧಿಸಿದಂತೆ ನಿಖಿಲ್ ಶಿಯೋರನ್ ಎನ್ನುವವರು ಸೋಷಿಯಲ್ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ಒಂದು ಫ್ಲಾಟ್ ಹುಡುಕಿಕೊಂಡರು, ಸೆಪ್ಟೆಂಬರ್ 25 ರಂದು ಈ "ಯುದ್ಧ ಮುಗಿದಿದೆ' ಎಂಬ ಭರವಸೆಯ ಶೀರ್ಷಿಕೆಯೊಂದಿಗೆ ಅವರು ಹೊಸ ಮನೆಯ ಫೋಟೋವನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮೊದಲು ಪೋಸ್ಟ್‌ ಮಾಡಿದರು. ಆದರೆ, ಬೆಂಗಳೂರಿನಲ್ಲಿ ಪರಿಪೂರ್ಣ ಫ್ಲಾಟ್‌ಗಾಗಿ ಅವರ ಹುಡುಕಾಟ ಎಂದಿಗೂ ಮುಗಿಯುವುದಿಲ್ಲ ಎನ್ನುವುದು ಅವರಿಗೆ ತಡವಾಗಿ ಅರ್ಥವಾಯ್ತು.

ನಿಖಿಲ್ ಅವರು ಇದಾದ ನಂತರ ನಡೆದ ಘಟನೆಗಳ ಬಗ್ಗೆಯೂ ಪೋಸ್ಟ್‌ ಹಂಚಿಕೊಂಡಿದ್ದಾರೆ. ಅವರು ಅವಿವಾಹಿತರು ಎಂಬ ಕಾರಣಕ್ಕಾಗಿ ಮಾಲೀಕರೊಂದಿಗೆ ಸರಿಯಾದ ಮನೆ ಒಪ್ಪಂದವನ್ನು ಹೊಂದಿದ್ದರೂ ಫ್ಲಾಟ್ ಅನ್ನು ಖಾಲಿ ಮಾಡಲು ಹೇಗೆ ಕೇಳಲಾಯಿತು ಎಂಬುದನ್ನು ವಿವರಿಸಿದ್ದಾರೆ.

ಅವರು ಸೊಸೈಟಿಯ ಅಧ್ಯಕ್ಷರೊಂದಿಗಿನ ತಮ್ಮ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್‌ಶಾಟ್ ಸಹ ಹಂಚಿಕೊಂಡಿದ್ದಾರೆ. ಬೆಂಗಳೂರಿನ ಮನೆಮಾಲೀಕರು ತುಂಬಾ ದ್ವೇಷಿಗಳು, ನೀವು ಅವಿವಾಹಿತರು ಎಂದು ಅವರಿಗೆ ತಿಳಿದಿದ್ದರೆ ಅವರು ನಿಮ್ಮ ತಲೆಗೆ ಗುಂಡು ಹಾರಿಸುತ್ತಾರೆ ಎಂದು ವ್ಯಂಗ್ಯಾತ್ಮಕ ಪೋಸ್ಟ್‌ ಮಾಡಿದ್ದಾರೆ.

ಫ್ಲಾಟ್‌ನ ಅಧ್ಯಕ್ಷರೊಂದಿಗೆ ಮಾತನಾಡಿದರೂ ಪ್ರಯೋಜನವಾಗಿಲ್ಲ. ಅವರು ನೇರವಾಗಿ, ದಯವಿಟ್ಟು ನಿಮ್ಮ ಮಾಲೀಕರೊಂದಿಗೆ ಮಾತನಾಡಿ, ಬೇರೆ ಫ್ಲಾಟ್ ನೋಡಿಕೊಳ್ಳಿ ಎಂದರು ಅಂತ ಹೇಳಿದ್ದಾರೆ. ನಿಖಿಲ್‌ ಅವರು ತಮ್ಮ ವಾದವನ್ನು ಮುಂದುವರಿಸಿದ್ದಾರೆ. ತಾವು ಈಗಾಗಲೇ ಡಿಪಾಸಿಟ್‌ ಪಾವತಿಸಿದ್ದೇನೆ, ಬಾಡಿಗೆ ಒಪ್ಪಂದ ಮಾಡಿಕೊಂಡಿದ್ದೇನೆ ಮತ್ತು ಮಾಲೀಕರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ, ಸಂಘದ ಅಧ್ಯಕ್ಷರು ಯಾವುದೇ ಮಾತುಕತೆಗೆ ಅವಕಾಶ ನೀಡಲಿಲ್ಲ.

Bengaluru Rent: ಬ್ಯಾಚುಲರ್‌ಗಳಿಗೆ ಅವಕಾಶವಿಲ್ಲ

"ಬ್ಯಾಚುಲರ್‌ಗಳಿಗೆ ಅವಕಾಶವಿಲ್ಲ ಎಂಬ ಸಂಘದ ನಿರ್ಧಾರವನ್ನು ಈಗಾಗಲೇ ತಿಳಿಸಿದ್ದೇವೆ. ಆದಷ್ಟು ಬೇಗ ನಿಮ್ಮ ಮಾಲೀಕರೊಂದಿಗೆ ಮಾತನಾಡಿ ಮನೆ ಖಾಲಿ ಮಾಡಿ" ಎಂದು ಅವರು ಉತ್ತರಿಸಿದ್ದಾರೆ ಅಂತ ಪೋಸ್ಟ್‌ ಮಾಡಿದ್ದಾರೆ. ಹೀಗಾಗಿ, ನಿಖಿಲ್‌ ಅವರ ಮನೆ ಉಳಿಸಿಕೊಳ್ಳುವ ಪ್ರಯತ್ನ ಅಲ್ಲಿಯೇ ಮುಗಿಯಿತು ಅಂತ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+