Bengaluru Rain: ಬುಧವಾರ ವಿವಿಧೆಡೆ ಮಳೆ, ಸಂಚಾರಕ್ಕೆ ತೊಂದರೆ: ಮುಂದಿನ 4 ದಿನದ ಹವಾಮಾನ ವರದಿ

ಬೆಂಗಳೂರು, ಜುಲೈ 12: ಬೆಂಗಳೂರಿನಲ್ಲಿ ಬುಧವಾರವು ಮಳೆ ಮುಂದುವರಿದಿದ್ದು, ಬಿಬಿಎಂಪಿ ವ್ಯಾಪ್ತಿಯ ಪಶ್ಚಿಮ ವಲಯದ ಮಾರುತಿ ಮಂದಿರ ವಾರ್ಡ್‌ನಲ್ಲಿ ಅಧಿಕ ಮಳೆ ದಾಖಲಾಗಿದೆ. ಮುಂದಿನ 3 ಗಂಟೆಗಳಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ಜೋರು ಮಳೆ ನಿರೀಕ್ಷೆ ಇದೆ. ಈ ಮಳೆ ಜುಲೈ 16 ರವರೆಗೆ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮಧ್ಯಾಹ್ನ ನಂತರ ಹಗುರ ಮಳೆ, ಒಂದೆರಡು ಕಡೆ ವ್ಯಾಪಕ ಮಳೆ ದಾಖಲಾಗುತ್ತಿದೆ. ಇದರೊಂದಿಗೆ ವಾಡಿಕೆಗಿಂತಲೂ ತಾಪಮಾನ ಕಡಿಮೆ ದಾಖಲಾಗಿದೆ. ಹೀಗಾಗಿ ನಗರದ ತುಂಬೆಲ್ಲ ತಂಪು ವಾತಾವರಣ ಮತ್ತು ಮೋಡ ಕವಿದ ವಾತಾವರಣವೇ ಸೃಷ್ಟಿಯಾಗಿದೆ. ಬುಧವಾರ ರಾತ್ರಿವರೆಗೆ ಅಲ್ಲಲ್ಲಿ ಮಳೆ ಬೀಳುವ ಲಕ್ಷಣಗಳು ಇವೆ ಎಂದು ಹೇಳಲಾಗಿದೆ.

Bengaluru Receives Light Rain On Wednesday, Next Four Days Rain Will Continue In City

ಮಂಗಳವಾರ ಸಂಜೆಯಿಂದ ರಾತ್ರಿವರೆಗೆ ಪಶ್ಚಿಮ ವಲಯದ ನಂದಿನಿ ಬಡಾವಣೆಯಲ್ಲಿ ಅಧಿಕ ಮಳೆ ದಾಖಲಾಗಿದೆ. ಇಲ್ಲಿ 26.5 ಮಿಲಿ ಮೀಟರ್ ಮಳೆ ಬಿದ್ದಿದೆ. ಉಳಿದಂತೆ ರಾಮಮೂರ್ತಿನಗರ, ಕೊಟ್ಟಿಗೆಪಾಳ್ಯ, ಕೋರಮಂಗಲ, ರಾಜಮಹಲ್ ಗುಟ್ಟಹಳ್ಳಿ, ರಾಜಾಜಿನಗರ, ವಿದ್ಯಾಪೀಠ, ದಯಾನಂದ ಸಾಗರ್ ಮತ್ತು ಸಂಪಂಗಿರಾಮನಗರ ಬಡಾವಣೆಗಳಲ್ಲಿ ಕೆಲ ಕಾಲ ಜೋರು ಮಳೆ ಆಗಿದೆ.

ಬುಧವಾರವು ಇದೇ ಪ್ರದೇಶಗಳು ಸೇರಿದಂತೆ ಕೋರಮಂಗಲ, ಮೆಜೆಸ್ಟಿಕ್, ಜಾಲಹಳ್ಳಿ, ಹೂಡಿ, ಹೊರಮಾವು, ಕೆಆರ್‌ ಪುರಂ, ವಿಜ್ಞಾನ ನಗರ, ಗಾಂಧಿನಗರ, ದೊಡ್ಡಾನೆಕ್ಕುಂದಿ, ದೇವಸಂದ್ರ, ವಿದ್ಯಾರಣ್ಯಪುರ, ನಾಗವಾರ, ಹೆಬ್ಬಾಳ, ಯಲಹಂಕ ಸೇರಿದಂತೆ ನಗರದ ವಿವಿಧೆಡೆ ಹಗುರ ಮಳೆ ಆಗಿದೆ.

ಕೆಲವೇ ನಿಮಿಷ ಮಳೆಗೆ ರಸ್ತೆ ಮೇಲೆಲ್ಲ ನೀರು

ಕೆಲವು ನಿಮಿಷಗಳ ಕಾಲ ಬಂದ ಮಳೆಗೆ ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ಸಂಚಾರ ಅಸ್ತವೆಸ್ತವಾಯಿತು. ಜಿಟಿ ಜಿಟಿ ಮಳೆಗೆ ವಾಹನ ಸವಾರರು ಕಿರಿ ಕಿರಿ ಅನುಭವಿಸಿದರು. ಇದು ಬೀದಿ ಬದಿ ವ್ಯಾಪಾರಿಗಳಿಗೂ ತೊಂದರೆ ಮಾಡಿತು.

Bengaluru Receives Light Rain On Wednesday, Next Four Days Rain Will Continue In City

ಜುಲೈ 16ರವರೆಗೆ ನಗರದಲ್ಲಿ ಇದೇ ರೀತಿಯ ವಾತಾವರಣ ಕಂಡು ಬರಲಿದೆ. ಜುಲೈ 14ರವರೆಗೆ ಹಗುರದಿಂದ ಉತ್ತಮ ಮಳೆ ದಾಖಲಾದರೆ, ನಂತರ ಎರಡು ದಿನ ಚದುರಿದಂತೆ ಅಲ್ಲಲ್ಲಿ ಮಳೆ ಯಾಗುವ ಸಾಧ್ಯತೆ ಇದೆ. ಬಳಿಕ ಬಿಸಿಲಿನ ದರ್ಶನವಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ತಾಪಮಾನ ಇಳಿಕೆ ಸಾಧ್ಯತೆ

ಈ ಮುಂದಿನ ಮೂರು ನಾಲ್ಕು ದಿನಗಳ ಅವಧಿಯಲ್ಲಿ ನಗರದಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಕಂಡು ಬಂದರೆ, ಕನಿಷ್ಠ ತಾಪಮಾನವು 20-21ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಮಳೆ ಮುನ್ಸೂಚನಾ ವರದಿ ತಿಳಿಸಿದೆ.

ಇನ್ನೂ ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಜಿಲ್ಲೆಗಳು ಹಾಗೂ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಕೆಲವು ದಿನ ಮಳೆ ಮುಂದುವರಿಯಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+