Get Updates
Get notified of breaking news, exclusive insights, and must-see stories!

Bengaluru: ಬೆಂಗಳೂರಿನ ಭೂಮಿಗೆ ಬಂಗಾರದ ಬೆಲೆ, ವಸತಿ ಬೆಲೆ ಹೆಚ್ಚಳ ಪಟ್ಟಿಯಲ್ಲಿ ಸಿಲಿಕಾನ್‌ ಸಿಟಿಗೆ ಅಗ್ರಸ್ಥಾನ

ಬೆಂಗಳೂರು, ಜನವರಿ 07: ಊರು ಬಿಟ್ಟು ಬೆಂಗಳೂರಿಗೆ ಬಂದು ಇಲ್ಲಿ ಜೀವನ ಕಟ್ಟಿಕೊಂಡ ಅದೆಷ್ಟೋ ಜನರಿಗೆ ಈ ಬೃಹತ್‌ ನಗರದಲ್ಲಿ ತಮ್ಮದೊಂದು ಸ್ವಂತ ಜಾಗ ಖರೀದಿಸಿ ಗೂಡು ಕಟ್ಟಿಕೊಳ್ಳಬೇಕು ಎನ್ನುವ ಆಸೆ, ಕನಸು ಇರುತ್ತದೆ. ಈ ಕನಸು ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಲೇ ಇದೆ.

ಬೆಂಗಳೂರಿನಲ್ಲಿ ಜಾಗಕ್ಕೆ ಬಂಗಾರದ ಬೆಲೆ ಬಂದಿದ್ದು, ನಗರದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಕೂಡ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇದೀಗ ವರದಿಯೊಂದರ ಪ್ರಕಾರ ವಸತಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆ ಹೆಚ್ಚಳ ಕಂಡ ನಗರಗಳ ಪೈಕಿ ಬೆಂಗಳೂರು ಎಂಟನೇ ಸ್ಥಾನದಲ್ಲಿದೆ.

Bengaluru Ranks 8th In Annual Housing Price Growth Across Asia-Pacific

ಕಳೆದ ವರ್ಷದ ದ್ವಿತೀಯಾರ್ಧದಲ್ಲಿ ಬೆಂಗಳೂರಿನಲ್ಲಿ ವಸತಿ ಮಾರುಕಟ್ಟೆ (residential market)ಯ ಬೆಲೆ ಶೇ. 7.1ರಷ್ಟು ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ಕಂಪನಿಯಾದ ನೈಟ್ ಫ್ರ್ಯಾಂಕ್ (Knight frank) ವರದಿಯಲ್ಲಿ ತಿಳಿಸಿದೆ. ನೈಟ್ ಫ್ರ್ಯಾಂಕ್ ಸಿದ್ಧಪಡಿಸಿದ ವಾರ್ಷಿಕ ವಸತಿ ಬೆಲೆ ಹೆಚ್ಚಳ ಸೂಚ್ಯಂಕದ ಪ್ರಕಾರ 2023ರ ದ್ವಿತೀಯಾರ್ಧದಲ್ಲಿ ಏಷ್ಯಾ-ಪೆಸಿಫಿಕ್ ವಸತಿ ಮಾರುಕಟ್ಟೆಗಳಾದ್ಯಂತ ವಾರ್ಷಿಕ ಬೆಲೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಮುಂಬೈ ಕ್ರಮವಾಗಿ 8 ಮತ್ತು 9ನೇ ಸ್ಥಾನದಲ್ಲಿವೆ.

ನೈಟ್ ಫ್ರ್ಯಾಂಕ್​ ಸಂಸ್ಥೆಯು ಏಷ್ಯಾ ಪೆಸಿಫಿಕ್(APAC) ನಗರಗಳ ಪೈಕಿ ಅತ್ಯುತ್ತಮವಾದ 25 ನಗರಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿತ್ತು. ಈ ಪೈಕಿ 21 ನಗರಗಳಲ್ಲಿ ವಸತಿ ಬೆಲೆ ಹೆಚ್ಚಳವಾಗಿದ್ದು, ಸಿಂಗಾಪುರ ಶೇ. 13.7ರಷ್ಟು ಬೆಲೆ ಹೆಚ್ಚಳದಿಂದ ಈ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ.

ಭಾರತದ ವಸತಿ ಮಾರಾಟದಲ್ಲಿ ಈ ಮೂರು ನಗರಗಳದ್ದೇ ಅಗ್ರಸ್ಥಾನ

2023ರ ದ್ವಿತೀಯಾರ್ಧದಲ್ಲಿ ವರ್ಷಕ್ಕೆ ವಸತಿ ಮಾರುಕಟ್ಟೆಯಲ್ಲಿ 7.1 ಪ್ರತಿಶತದಷ್ಟು ಬೆಲೆ ಹೆಚ್ಚಳ ಕಂಡು ಏಷ್ಯಾ-ಪೆಸಿಫಿಕ್ ರೆಸಿಡೆನ್ಶಿಯಲ್ ರಿವ್ಯೂನಲ್ಲಿ ಬೆಂಗಳೂರು 8 ನೇ ಸ್ಥಾನದಲ್ಲಿದೆ. ಮುಂಬೈ 7 ಪ್ರತಿಶತದಷ್ಟು ಬೆಲೆ ಹೆಚ್ಚಳ ಕಂಡು 9ನೇ ಸ್ಥಾನದಲ್ಲಿದ್ದರೆ, ದೆಹಲಿ ಈ ಅವಧಿಯಲ್ಲಿ ಶೇಕಡಾ 6ರಷ್ಟು ವಸತಿ ಮಾರುಕಟ್ಟೆಯ ಬೆಲೆ ಹೆಚ್ಚಳದಿಂದ 11ನೇ ಸ್ಥಾನದಲ್ಲಿದೆ. ಹೀಗಾಗಿ 2023ರ ವರ್ಷದಲ್ಲಿ ಭಾರತದಲ್ಲಿ ಆಗಿರುವ ಒಟ್ಟಾರೆ ವಸತಿ ಮಾರಾಟದಲ್ಲಿ ಬೆಂಗಳೂರು, ಮುಂಬೈ ಹಾಗೂ ದೆಹಲಿ ನಗರಗಳ ಪಾಲು ಶೇ. 60ರಷ್ಟು ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+