ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಚ್ಛತೆಯಲ್ಲಿ ಬೆಂಗಳೂರಿಗೆ 43ನೇ ರ್‍ಯಾಂಕಿಂಗ್: ಮೋಹನ್ ದಾಸ್‌ ಪೈ ಆಕ್ರೋಶ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 04: ರಾಷ್ಟ್ರ ಮಟ್ಟದ ಸ್ವಚ್ಛ ಸರ್ವೇಕ್ಷಣಾ ಸ್ವಚ್ಛತಾ ಶ್ರೇಯಾಂಕ ಪಟ್ಟಿಯ ಕಸಮುಕ್ತ ನಗರ ವಿಭಾಗದಲ್ಲಿ ಕರ್ನಾಟಕ ರಾಜಧಾನಿ ಬೆಂಗಳೂರು 45ರಲ್ಲಿ 43ನೇ ಸ್ಥಾನ ಪಡೆದಿರುವುದಕ್ಕೆ ಉದ್ಯಮಿ ಟಿವಿ ಮೋಹನ್ ದಾಸ್ ಪೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ನಾಚಿಕೆ ಗೇಡಿನ ಸಂಗತಿ ಎಂದು ಹೇಳಿದ್ದಾರೆ.

ಈ ಕುರಿತು ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಮೋಹನ್ ದಾಸ್ ಪೈ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸತೋಷ್ ಮತ್ತು ಬೆಂಗಳೂರು ಸಂಸದರಾದ ಪಿ.ಸಿ. ಮೋಹನ್ ಮ ಹಾಗೂ ತೇಜಸ್ವಿ ಸೂರ್ಯ, 'ನಮ್ಮ ಶಾಸಕರು ಮತ್ತು ಸಂಸದರು ನಮ್ಮನ್ನು ವಿಫಲಗೊಳಿಸಿದ್ದಾರೆ. ಅನೇಕ ಶಾಸಕರು ಭ್ರಷ್ಟರಾಗಿದ್ದಾರೆ.

Bengaluru ranks 43rd in cleanliness businessman Mohandas Pai reaction

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ 'PFI ಭಾಗ್ಯ' ಪೋಸ್ಟರ್ ಬಿಡುಗಡೆ ಮಾಡಿದ ಆರ್ ಅಶೋಕ್ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ 'PFI ಭಾಗ್ಯ' ಪೋಸ್ಟರ್ ಬಿಡುಗಡೆ ಮಾಡಿದ ಆರ್ ಅಶೋಕ್

ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ಮನುಷ್ಯನ ಪ್ರೀತಿಯನ್ನು ಕಂಡುಕೊಳ್ಳುವ ಈ ಕಥೆ ಇಂಟರ್‌ನೆಟ್‌ನಲ್ಲಿ ಹೃದಯಗಳನ್ನು ಗೆಲ್ಲುತ್ತಿದೆ.
ಸದ್ಯಕ್ಕೀಗ ಬೆಂಗಳೂರಿನಲ್ಲಿ ವಿದ್ಯುತ್ ದರ ದುಬಾರಿಯಾಗಿದೆ. ಎಲ್ಲವು ದುಬಾರಿಯಾಗಿದೆ. ಭಾರತದ ಏಕೈಕ ಜಾಗತಿಕ ಹಾಗೂ ಶ್ರೀಮಂತ ನಗರವಾಗಿರುವ ಬೆಂಗಳೂರು ಕಸದ ನಗರವಾಗಿದೆ. ಈ ಸಂಗತಿ ಕಂಡು ನಾವು ನಾಚಿಕೆಪಡುತ್ತೇವೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ವಿರುದ್ಧ ಪೈ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಬಸವರಾಜ ಬೊಮ್ಮಾಯಿ ಮತ್ತು ಬಿ.ಎಲ್. ಸಂತೋಷ್ ಅವರನ್ನು ಉದ್ದೇಶಿಸಿ ಮಾತನಾಡಿದ್ದರು. ಸರ್ ನಮಗೆ ತುರ್ತು ಸುಧಾರಣೆಗಳು ಮತ್ತು ಕಠಿಣ ಕ್ರಮಗಳು ಬೇಕು. ಈ ವಿಭಾಗದಲ್ಲಿ ಹಿಂದಿನ ವರ್ಷದ ಶ್ರೇಯಾಂಕಗಳಿಗೆ ಹೋಲಿಸಿದರೆ, ಬೆಂಗಳೂರಿನ ಸ್ಥಾನವು ಶೇ. 15 ರಷ್ಟು ಕುಸಿತ ಕಂಡು ಬಂದಿದೆ ಎಂದರು.

Bengaluru ranks 43rd in cleanliness businessman Mohandas Pai reaction

ಶ್ರೇಯಾಂಕಗಳ ಕುರಿತು ಪ್ರತಿಕ್ರಿಯಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಶೇಷ ಆಯುಕ್ತ ಹರೀಶ್ ಕುಮಾರ್ ಅವರು, ಇತರ ನಗರಗಳಿಗಿಂತ ಬೆಂಗಳೂರು ನಗರ ಪ್ರದೇಶಗಳ ಸವಾಲುಗಳು ವಿಭಿನ್ನವಾಗಿವೆ. ಅಲ್ಲದೇ ದೊಡ್ಡ ನಗರಗಳನ್ನು ಸಣ್ಣ ನಗರ ಕೇಂದ್ರಗಳೊಂದಿಗೆ ಸಮೀಕರಿಸುವುದು ಸಮರ್ಥನೀಯವಲ್ಲ ಎಂದು ಹೇಳಿದರು.

ಈ ಶ್ರೇಯಾಂಕ ಪಟ್ಟಿ ಸಂಬಂಧ ಹಿಂದಿನ ವರ್ಷದಲ್ಲಿ 10,000 ಜನರಿಂದ ಪ್ರತಿಕ್ರಿಯೆ ಪಡೆಯಲಾಗಿತ್ತು ಮತ್ತು ಈಗ ಅದನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಕೇಂದ್ರ ಸರ್ಕಾರ ಮತ್ತು ಬಿಬಿಎಂಪಿ ನೇಮಿಸಿರುವ ಸಲಹೆಗಾರರ ​​ನಡುವೆ ವಿವಾದವಿದೆ ಎಂದು ಹೇಳಿದ್ದರು. ಈ ಮಧ್ಯೆ ನಗರಕ್ಕೆ ಬಂದ ಈ ಸ್ಥಾನವನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಲಿದೆ, ಮುಂದಿನ ನಡೆ ಬಗ್ಗೆ ಆಲೋಚಿಸಲಿದೆ ಪಾಲಿಕೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Bengaluru ranks 43rd in cleanliness businessman Mohandas Pai reaction,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X