Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ ಟ್ರಾಫಿಕ್‌ ಜಾಮ್‌ ಹೆಚ್ಚಳದ ಶಾಕಿಂಗ್ ರಿಪೋರ್ಟ್‌, ವಾಹನ ದಟ್ಟಣೆಗೆ ಕಾರಣವೇನು ?

ಬೆಂಗಳೂರು ಟ್ರಾಫಿಕ್‌ ಜಾಮ್‌ ವಿಚಾರದಲ್ಲಿ ಮತ್ತೊಂದು ಕುಖ್ಯಾತಿಯನ್ನು ಗಳಿಸಿದೆ. ಬೆಂಗಳೂರು ಟ್ರಾಫಿಕ್‌ ಜಾಮ್‌ ಸಮಸ್ಯೆಯ ಬಗ್ಗೆ ಹೊಸದಾಗಿ ವಿವರಿಸಿ ಹೇಳುವ ಅವಶ್ಯಕತೆ ಇಲ್ಲ. ಬೆಂಗಳೂರಲ್ಲಿ ವರ್ಷದಿಂದ ವರ್ಷಕ್ಕೆ ಟ್ರಾಫಿಕ್‌ ಜಾಮ್‌ ಜಾಸ್ತಿ ಆಗುತ್ತಲ್ಲೇ ಇದೆ. ಏಷ್ಯಾದ ಅತ್ಯಂತ ಕೆಟ್ಟ ಟ್ರಾಫಿಕ್‌ ಜಾಮ್‌ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದುಕೊಂಡಿದೆ. ದೇಶದಲ್ಲಿ ಟ್ರಾಫಿಕ್‌ ಜಾಮ್‌ ಹಾಗೂ ಜನದಟ್ಟಣೆಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಪ್ರಥಮ ಸ್ಥಾನದಲ್ಲಿ ಇದೆ. ಬೆಂಗಳೂರಿನ ಟ್ರಾಫಿಕ್‌ ಜಾಮ್‌ನ ಬಗ್ಗೆ ಇನ್ನೂ ಕೆಲವು ಶಾಕಿಂಗ್ ನ್ಯೂಸ್‌ ರಿಪೋರ್ಟ್ ಆಗಿದೆ. ಟಾಮ್ ಟಾಮ್ ಬಿಡುಗಡೆ ಮಾಡಿರುವ ವರದಿಯಲ್ಲಿ ಇದನ್ನ ಹೇಳಲಾಗಿದೆ.

ಬೆಂಗಳೂರು ಟ್ರಾಫಿಕ್‌ ಜಾಮ್‌ ಬಗ್ಗೆ ಹೊಸ ಜೋಕ್ಸ್‌ ರೆಡಿ ಮಾಡಿಕೊಳ್ಳಲಿಕ್ಕೆ. ಬೆಂಗಳೂರಿನಲ್ಲಿ ಇರುವವರು ಆತಂಕ ಪಡುವಂತಹ ಸುದ್ದಿಯೊಂದು ಬಂದಿದೆ. 2024ರಲ್ಲಿ ಕೋಲ್ಕತ್ತಾ ಭಾರತದ ಅತ್ಯಂತ ಕೆಟ್ಟ ಟ್ರಾಫಿಕ್‌ ಜಾಮ್‌ ನಗರವಾಗಿದ್ದರೆ. ಬೆಂಗಳೂರು ಎರಡನೇ ಸ್ಥಾನದಲ್ಲಿ ಇದೆ. ಇದಕ್ಕೂ ಮೊದಲು ಬೆಂಗಳೂರು ಭಾರತದ ಅತ್ಯಂತ ಟ್ರಾಫಿಕ್‌ ಜಾಮ್‌ ನಗರವಾಗಿತ್ತು. ಇದೀಗ 2024 ರಲ್ಲಿ ಕೋಲ್ಕತ್ತಾ ಬೆಂಗಳೂರನ್ನು ಹಿಂದಿಕ್ಕಿ ದೇಶದ ಅತ್ಯಂತ ಹೆಚ್ಚು ಟ್ರಾಫಿಕ್‌ ಜಾಮ್‌ ಇರುವ ನಗರ ಎಂದಾಗಿದೆ.

Bengaluru Ranks 2nd in Traffic Jams in India Bengaluru Traffic Jams Reason

ಕಳೆದ ವರ್ಷಕ್ಕಿಂತ ಹೆಚ್ಚು: ಇನ್ನು ಬೆಂಗಳೂರಲ್ಲಿ ಟ್ರಾಫಿಕ್‌ ಜಾಮ್‌ ಕಳೆದ ವರ್ಷಕ್ಕಿಂತ ಕಳಪೆ ಮಟ್ಟವನ್ನು ತಲುಪಿರುವುದು ಈ ವರದಿಯಲ್ಲಿ ಬಹಿರಂಗವಾಗಿದೆ. ಇನ್ನು ಡಚ್ ಸಂಸ್ಥೆ ನಡೆಸಿದ ಟಾಮ್‌ಟಾಮ್ 2024ರ ಜಾಗತಿಕ ವಾಹನ ಸಂಚಾರ ಸೂಚ್ಯಂಕದಲ್ಲಿ ಕೊಲಂಬಿಯಾದ ಬ್ಯಾರನ್‌ಕ್ವಿಲ್ಲಾ ಪ್ರಥಮ ಸ್ಥಾನದಲ್ಲಿ ಇದ್ದರೆ. ಇದಾದ ನಂತರ ಭಾರತದ ಕೋಲ್ಕತ್ತಾ ಹಾಗೂ ಬೆಂಗಳೂರು ನಗರಗಳು ಇವೆ. ವಿಶ್ವದ ನಗರಗಳ ಸ್ಥಾನದಲ್ಲಿ ಪ್ರಯಾಣದ ಸಮಯದಲ್ಲಿ ಮೂರನೇ ಅತ್ಯಂತ ನಿಧಾನಗತಿಯ ಸ್ಥಾನದಲ್ಲಿ ಬೆಂಗಳೂರಿದೆ. ಬೆಂಗಳೂರು 2023ರಲ್ಲಿ ಆರನೇ ಸ್ಥಾನದಲ್ಲಿತ್ತು ಮತ್ತು 2022ರಲ್ಲಿ ಎರಡನೇ ಸ್ಥಾನದಲ್ಲಿತ್ತು. ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ. ಬೆಂಗಳೂರಲ್ಲಿ ಟ್ರಾಫಿಕ್‌ ಜಾಮ್‌ ಪ್ರಮಾಣ ಹೆಚ್ಚಳವಾಗುತ್ತಿದೆ ಎನ್ನುವ ಶಾಕಿಂಗ್ ಅಂಶ ವರದಿಯಾಗಿದೆ.

2023ರಲ್ಲಿ ಬೆಂಗಳೂರಿನಲ್ಲಿ 10 ಕಿ.ಮೀ ಪ್ರಯಾಣ ಮಾಡುವುದಕ್ಕೆ ಸರಾಸರಿ 30 ನಿಮಿಷ 10 ಸೆಕೆಂಡುಗಳು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಇದು 2023ಕ್ಕೆ ಹೋಲಿಕೆ ಮಾಡಿದರೆ 50 ಸೆಕೆಂಡುಗಳು ಹೆಚ್ಚು. ದಟ್ಟಣೆ ಮಟ್ಟದ ಸೂಚ್ಯಂಕದಲ್ಲಿ ಬೆಂಗಳೂರು 6 ನೇ ಸ್ಥಾನದಲ್ಲಿದೆ. ಇದು ಸಹ 2023ಕ್ಕೆ ಹೋಲಿಸಿದರೆ ಶೇ 4% ಜಿಗಿತವಾದಂತಾಗಿದೆ.

Bengaluru Ranks 2nd in Traffic Jams in India Bengaluru Traffic Jams Reason

ಬೆಂಗಳೂರಲ್ಲಿ ಟ್ರಾಫಿಕ್‌ ಜಾಮ್‌ ಹೆಚ್ಚಾಗುವುದಕ್ಕೆ ಮುಖ್ಯ ಕಾರಣ: ಬೆಂಗಳೂರಲ್ಲಿ ವರ್ಷದಿಂದ ವರ್ಷಕ್ಕೆ ಟ್ರಾಫಿಕ್‌ ಜಾಮ್‌ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರಲ್ಲಿ ವಾಹನಗಳ ಸಂಖ್ಯೆ ವಿಪರೀತ ಹೆಚ್ಚಳವಾಗುತ್ತಿರುವುದು. ನಗರದ ಜನಸಂಖ್ಯೆ ಹೆಚ್ಚಾಗುತ್ತಿರುವುದು ಅದಕ್ಕೆ ತಕ್ಕಂತೆ ಎಂಡ್‌ ಟು ಎಂಡ್‌ ಕನೆಕ್ಟಿವಿಟಿ ಹೆಚ್ಚಳವಾಗದೆ ಇರುವುದು ಸೇರಿದಂತೆ ಹಲವು ಕಾರಣಕ್ಕೆ ಬೆಂಗಳೂರಲ್ಲಿ ಟ್ರಾಫಿಕ್‌ ಜಾಮ್‌ ಹೆಚ್ಚಳವಾಗುತ್ತಲ್ಲೇ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+