ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ ಸೇರಿ ORR ನೀರು ನಿಲ್ಲುವ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ: GBA

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ ಸೇರಿ ORR ನೀರು ನಿಲ್ಲುವ ಪ್ರದೇಶಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮುಂದಾಗಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಾಲ ಸುನೀಲ್ ಕುಮಾರ್ ಅವರ ನಿರ್ದೇಶನದಂತೆ ಮಳೆ ಸಂದರ್ಭದಲ್ಲಿ ನೀರು ನಿಲುಗಡೆಯಾಗುತ್ತಿದ್ದ ವಿವಿಧ ಪ್ರದೇಶಗಳಲ್ಲಿ ಮಳೆನೀರು ಸುಗಮವಾಗಿ ಹರಿದು ಹೋಗಲು ಅಗತ್ಯ ಕಾಮಗಾರಿಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದೆ. ಮಾನ್ಯತಾ ಟೆಕ್ ಪಾರ್ಕ್ ಸಮೀಪ ORRನಲ್ಲಿ ಹಲವು ವರ್ಷಗಳ ನೀರು ನಿಲುಗಡೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಳೆ ಬಂದಾಗ ಬೆಂಗಳೂರು ಮಾನ್ಯತಾ ಟೆಕ್ ಪಾರ್ಕ್, ವೀರಣ್ಣಪಾಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಬ್ಬಾಳ ಹೊರವರ್ತುಲ ರಸ್ತೆ (ORR) ಮತ್ತು ವೀರಣ್ಣಪಾಳ್ಯ ಸರ್ವೀಸ್ ರಸ್ತೆಯ ಸುಮಾರು ಒಂದು ಕಿ.ಮೀ ವ್ಯಾಪ್ತಿಯಲ್ಲಿ ನೀರು ನಿಲುಗಡೆಯಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಇದಕ್ಕೆ ಪರಿಹಾರವಾಗಿ, ಕಾಲುವೆ ಪ್ರದೇಶದಲ್ಲಿದ್ದ ಅತಿಕ್ರಮಣಗಳನ್ನು ತೆರವುಗೊಳಿಸಿ, ವೀರಣ್ಣಪಾಳ್ಯ ಸರ್ವೀಸ್ ರಸ್ತೆಯಿಂದ ಮುಖ್ಯ ಹೆಬ್ಬಾಳ ಕಾಲುವೆಗೆ ಸಂಪರ್ಕ ಕಲ್ಪಿಸುವ 1.6 ಕಿಲೋಮೀಟರ್ ಉದ್ದದ ಮಾನವ ನಿರ್ಮಿತ ಕಾಲುವೆ ನಿರ್ಮಿಸಲಾಗಿದೆ. ಇದರಿಂದ ಮಳೆನೀರು ಸುಗಮವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ.

Bengaluru Rainwater Permanent Solution for Waterlogging Near Manyata Tech Park ORR GBA Takes Action

ಈ ಸಮಸ್ಯೆ ಸುಮಾರು 10ರಿಂದ 15 ವರ್ಷಗಳಿಂದ ಮುಂದುವರಿದಿತ್ತು. ಸೆಪ್ಟೆಂಬರ್ 30ರಂದು ಸುಮಾರು 75-80 ಮಿ.ಮೀ. ಮಳೆಯಾದರೂ, ಕಾರಿಯಣ್ಣಪಾಳ್ಯ ಹಾಗೂ ವೀರಣ್ಣಪಾಳ್ಯ ಹೊರವರ್ತುಲ ರಸ್ತೆಯಲ್ಲಿ ಯಾವುದೇ ಪ್ರವಾಹ ಉಂಟಾಗಿಲ್ಲ. ಹೊರವರ್ತುಲ ರಸ್ತೆಯಿಂದ ಮುಖ್ಯ ಹೆಬ್ಬಾಳ ಕಾಲುವೆಯತ್ತ ಮಳೆನೀರು ಹರಿದುಹೋದಿರುವುದು ದಾಖಲಾಗಿದೆ.

ಅಟ್ಟೂರು-ಪುಟ್ಟೇನಹಳ್ಳಿ ಕೆರೆಗೆ ಮಳೆನೀರು ಹರಿವಿಗೆ ವ್ಯವಸ್ಥೆ

ಪುಟ್ಟೇನಹಳ್ಳಿ-ಅಟ್ಟೂರು ಪ್ರದೇಶದ ರಾಮನಶ್ರೀ ಕ್ಯಾಲಿಫೋರ್ನಿಯಾ ಲೇಔಟ್‌ನಲ್ಲಿ, ಅನಂತಪುರ ಗ್ರಾಮದ ಕಡೆಯಿಂದ ಹರಿದುಬರುತ್ತಿದ್ದ ಕೊಳಚೆ ನೀರು ಹಾಗೂ ಮಳೆಗಾಲದಲ್ಲಿ ಹರಿದುಬರುತ್ತಿದ್ದ ಮಳೆನೀರಿನಿಂದ ಸೂಕ್ತ ಒಳಚರಂಡಿ ಸಂಪರ್ಕದ ಕೊರತೆಯಿಂದಾಗಿ ಲೇಔಟ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲುಗಡೆಯಾಗುತ್ತಿತ್ತು. ಖಾಸಗಿ ಆಸ್ತಿ ಮಾಲೀಕರ ಒಪ್ಪಿಗೆಯೊಂದಿಗೆ 145 ಮೀಟರ್ ಉದ್ದದ ಹಾಗೂ 600 ಮಿ.ಮೀ. ವ್ಯಾಸದ NP3 RCC ಪೈಪ್ ಅಳವಡಿಸಿ ಡೈವರ್ಷನ್ ಡ್ರೈನ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಕೊಳಚೆ ನೀರು ಕೆರೆಗೆ ಸೇರುವುದನ್ನು ತಡೆಯಲಾಗಿದೆ.

ಇದರ ಜೊತೆಗೆ, ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ (National Disaster Mitigation Fund) ಅಡಿಯಲ್ಲಿ 60 ಮೀಟರ್ ಉದ್ದದ ಮಳೆನೀರು ಚರಂಡಿ ನಿರ್ಮಿಸಲಾಗಿದ್ದು, ಅನಂತಪುರ ಮತ್ತು ಅತ್ತೂರು ಕ್ಯಾಚ್‌ಮೆಂಟ್ ಪ್ರದೇಶಗಳಿಂದ ಮಳೆನೀರು ಪುಟ್ಟೇನಹಳ್ಳಿ ಕೆರೆಗೆ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ. ಸೆಪ್ಟೆಂಬರ್ 30ರಂದು ಸುರಿದ ಮಳೆಯ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಯಾವುದೇ ನೀರು ನುಗ್ಗುವಿಕೆ ಅಥವಾ ಪ್ರವಾಹ ವರದಿಯಾಗಿಲ್ಲ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

HBR ಲೇಔಟ್‌ನಲ್ಲಿ ಹೊಸ ಮಳೆನೀರು ಚರಂಡಿ ಸಂಪರ್ಕ

HBR ಲೇಔಟ್ 5ನೇ ಬ್ಲಾಕ್‌ನ 18ನೇ ಮುಖ್ಯ ರಸ್ತೆಯಲ್ಲಿರುವ BESCOM ಕಚೇರಿ ಸಮೀಪ, HN Valleyಗೆ ಸಂಬಂಧಿಸಿದ 1.5 ಮೀಟರ್ ವ್ಯಾಸದ MS ಪೈಪ್‌ಲೈನ್ ಹಾದುಹೋಗುತ್ತಿದ್ದು, ಕಳೆದ 8ರಿಂದ 10 ವರ್ಷಗಳಿಂದ 18ನೇ ಮುಖ್ಯ ರಸ್ತೆಯಲ್ಲಿ ಮಳೆನೀರು ಸುಗಮವಾಗಿ ಹರಿಯಲು ಅಡ್ಡಿಯಾಗಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಸಮಸ್ಯೆಗೆ ಪರಿಹಾರವಾಗಿ, ರಸ್ತೆ ಇಳಿಜಾರಿಗೆ ಅನುಗುಣವಾಗಿ ಹೊಸ RCC ಕಲ್ವರ್ಟ್ ಮತ್ತು ಚರಂಡಿ ನಿರ್ಮಿಸಿ, ಸಮೀಪದ ಪ್ರಮುಖ ಮಳೆನೀರು ಚರಂಡಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ರಸ್ತೆಯಲ್ಲಿ ನೀರು ನಿಲುಗಡೆಯಾಗುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ.

ಇದರ ಜೊತೆಗೆ, ಸರ್ವಜ್ಞನಗರ ಪ್ರದೇಶದಲ್ಲಿನ ಮಳೆನೀರು ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿದ್ದು, ಸ್ವಚ್ಛತಾ ಕಾರ್ಯದ ವೇಳೆ ತೆಗೆಯಲಾಗುವ ಸಸ್ಯವರ್ಗ ಹಾಗೂ ಹೂಳನ್ನು ಸಹ ತೆರವುಗೊಳಿಸಿ ಮಳೆನೀರು ಸುಗಮವಾಗಿ ಹರಿಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಟಾಟಾ ನಗರ, ಡೈನಸ್ಟಿ ಲೇಔಟ್ ಮತ್ತು ಡಿಫೆನ್ಸ್ ಲೇಔಟ್ ಪ್ರದೇಶಗಳಲ್ಲಿ 2024ರಲ್ಲಿ ಭಾರಿ ಮಳೆಯ ಸಂದರ್ಭದಲ್ಲಿ ಪ್ರವಾಹ ಉಂಟಾಗಿ, ಸತತ ಮೂರು ದಿನಗಳ ಕಾಲ ಸಾರ್ವಜನಿಕರಿಗೆ ತೊಂದರೆಯಾಗಿತ್ತು.

ಮುನ್ನೆಚ್ಚರಿಕಾ ಕ್ರಮವಾಗಿ, ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ ಹಾಗೂ ವಿಶ್ವಬ್ಯಾಂಕ್ ನೆರವಿನೊಂದಿಗೆ ಮಳೆನೀರು ಚರಂಡಿಯ ಉದ್ದಕ್ಕೂ RCC ತಡೆಗೋಡೆ ನಿರ್ಮಿಸಲಾಗಿದೆ. ಡೈನಸ್ಟಿ ಲೇಔಟ್ ತಗ್ಗು ಪ್ರದೇಶವಾಗಿರುವ ಹಿನ್ನೆಲೆಯಲ್ಲಿ, ರಸ್ತೆ ಮೇಲಿನ ನೀರನ್ನು ಹೊರಹಾಕಿ ಪ್ರವಾಹ ಉಂಟಾಗುವುದನ್ನು ತಡೆಯಲು ಎರಡು ನೆಲಮಟ್ಟದ ನೀರು ಸಂಗ್ರಹಣಾ ಕೊಳಗಳು ನಿರ್ಮಿಸಿ, ಸ್ವಯಂಚಾಲಿತ ಸೆನ್ಸರ್ ಪಂಪ್‌ಗಳನ್ನು ಅಳವಡಿಸಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಕೆರೆಗಳಿಗೆ ಸಂಪರ್ಕ ಕಲ್ಪಿಸುವುದು, ಮಳೆನೀರು ಚರಂಡಿಗಳ ಅಭಿವೃದ್ಧಿ ಹಾಗೂ ಕೆರೆಗಳ ಪುನಶ್ಚೇತನ, ಲೈನಿಂಗ್ ಇಲ್ಲದ ಚರಂಡಿಗಳಲ್ಲಿ RCC ತಡೆಗೋಡೆಗಳ ನಿರ್ಮಾಣ, U-ಆಕಾರದ ಚರಂಡಿಗಳ ನಿರ್ಮಾಣ ಹಾಗೂ ಕಿರಿದಾದ ಸೇತುವೆಗಳ ಬದಲಿಗೆ ಅಗತ್ಯ ವಿನ್ಯಾಸದಂತೆ RCC ಸೇತುವೆಗಳ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

ತಗ್ಗು ಪ್ರದೇಶಗಳಲ್ಲಿ ನೀರು ನಿಲುಗಡೆಯಾಗುವುದನ್ನು ತಡೆದು ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ, ತಾಂತ್ರಿಕ ಪರಿಶೀಲನೆಗಳ ಆಧಾರದ ಮೇಲೆ ವಿಶ್ವಬ್ಯಾಂಕ್ ನೆರವು, ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ನಿಧಿ ಹಾಗೂ ಪಾಲಿಕೆ ನಿಧಿ ಬಳಸಿ ಈ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+