Bengaluru Rains: ಬೆಂಗಳೂರು ಧರೆಗೆ ವರ್ಷಧಾರೆಯ ತಂಪು: ವ್ಯಾಪಕ ಮಳೆಗೆ ಜೀವನ ಅಸ್ತವ್ಯಸ್ತ, ಹವಾಮಾನ ಮುನ್ಸೂಚನೆ

Bengaluru Weather Forecast: ರಾಜಧಾನಿ ಬೆಂಗಳೂರಿನಲ್ಲಿ ವರ್ಷದ ಮೊದಲ ಹಿಂಗಾರು ಮಳೆ ಧಾರಾಕಾರವಾಗಿ ಸುರಿದಿದೆ. ಮೂಲಗಳ ಪ್ರಕಾರ, ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಗೂ ಮೊದಲೇ ನಗರದಲ್ಲಿ ಮಳೆರಾಯ ಅಬ್ಬರಿಸುವ ಮೂಲಕ ಬಿಸಿಲಿಗೆ ಕಂಗಾಲಾಗಿದ್ದ ಜನರಿಗೆ, ಇಳೆಗೆ ತಂಪೆರೆದಿದ್ದಾನೆ. ಒಂದು ಗಂಟೆಯಿಂದ ಸುರಿದ ಜೋರು ಮಳೆಗೆ ರಸ್ತೆಗಳು ಕೆರೆಯಂತಾಗಿದ್ದು, ಕೆಲವೆಡೆ ಸಂಚಾರ, ಜನ ಜೀವನ ಅಸ್ತವ್ಯಸ್ತವಾಗಿದ್ದು ಕಂಡು ಬಂತು.

ಯಲಹಂಕ, ರಾಜಾಜಿನಗರ, ಹೆಬ್ಬಾಳ, ಇಂದಿರಾನಗರ ಭಾಗಗಳಲ್ಲಿ ಗುರುವಾರ ಸಂಜೆ 4 ಗಂಟೆ ನಂತರ ಜೋರು ಮಳೆ ಆಯಿತು. ಕೆಲವು ದಿನಗಳಿಂದ ನಗರದಲ್ಲಿ ಬಿಸಿಲಿನ ತಾಪ ತೀವ್ರವಾಗಿ ಹೆಚ್ಚಾಗಿತ್ತು. ಹವಾಮಾನ ಇಲಾಖೆ ಮುಂದಿನ ಮೂರು ದಿನಗಳಲ್ಲಿ ಬೆಂಗಳೂರಿಗೆ ಮಳೆ ಬರುವುದಾಗಿ ತಿಳಿಸಿದ ದಿನವೇ ಅನೇಕ ಬಡಾವಣೆಗಳಲ್ಲಿ ಧಾರಾಕಾರ ಮಳೆಯಾಗಿದೆ.

Bengaluru Rains

ನಗರಾದ್ಯಂತ ಜೋರು ಮಳೆ ದಾಖಲು

ರಾಜಾಜಿನಗರ, ಮಲ್ಲೇಶ್ವರ, ಮೆಜೆಸ್ಟಿಕ್ ಸುತ್ತಮುತ್ತ, ಲಾಲ್ ಬಾಗ್, ಬೈಯಪ್ಪನಹಳ್ಳಿ, ಎಂಜಿ ರಸ್ತೆ, ಹೆಬ್ಬಾಳ, ಕೋರಮಂಗಲ, ವೈಟ್‌ಫಿಲ್ಡ್, ಬೆಳ್ಳಂದೂರು, ದೊಮ್ಮಲೂರು, ಜಯನಗರ, ಕಾರ್ಪೋರೇಷನ್ ವೃತ್ತ, ಚಾಮರಾಜಪೇಟೆ, ಕೆ.ಆರ್. ಮಾರುಕಟ್ಟೆ ಸೇರಿದಂತೆ ಅನೇಕ ಕಡೆಗಳಲ್ಲಿ ಗಂಟೆಗೆ 40ಕಿಲೋ ಮೀಟರ್ ವೇಗದಲ್ಲಿ ಗಾಳಿ ಸಹಿತ ಜೋರು ಮಳೆ ಆಗಿದೆ.

ಕೆಲವೆಡೆ ಗಾಳಿ ಮಳೆಗೆ ಮರದ ಕೊಂಬೆಗಳು ಮುರಿದು ಬಿದ್ದರೆ, ರಸ್ತೆ ಸಿಗ್ನಲ್, ಜಂಕ್ಷನ್‌ಗಳಲ್ಲಿ ವಾಹನಗಳ ದಟ್ಟಣೆ ಕಂಡು ಬಂತು. ಸಂಜೆ ಕಚೇರಿಯಿಂದ ಮನೆಗೆ ತೆರಳುವವರು ರಸ್ತೆ ಮೇಲೆ ನಿಂತ ಮಳೆ ನೀರಿನಲ್ಲೇ ನಿಧಾನವಾಗಿ ಸಾಗಿದ್ದು ಕಂಡು ಬಂತು. ಕೆ.ಆರ್.ಪುರಂ, ಕೆ.ಆರ್. ಮಾರುಕಟ್ಟೆ, ಯಲಹಂಕ, ಹೊಸೂರು ರಸ್ತೆ, ಕಿತ್ತಗಾನಹಳ್ಳಿ ರಸ್ತೆ, ಗುಂಜೂರು ರಸ್ತೆಗಳು ಜಲಾವೃತಗೊಂಡವು. ರಸ್ತೆ ಅಂಡರ್‍‌ಪಾಸ್‌ಗಳ ಕಥೆ ಹೇಳತೀರದಂತಾಗಿದ್ದು, ಒಳಚರಂಡಿ ನೀರು ಉಕ್ಕಿ ಹರಿದು ಸಂಚಾರಕ್ಕೆ ತೀವ್ರ ಅಡಚಣೆ ಉಂಟು ಮಾಡಿತು. ಕೆಲವು ರಸ್ತೆಗಳಲ್ಲಿ ವಾಟರ್‍‌ಲಾಗಿಂಗ್ ಸಮಸ್ಯೆ ಕಂಡು ಬಂತು.

ಹವಾಮಾನ ಮುನ್ಸೂಚನೆ ಏನಿದೆ?

ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಭಾರೀ ಮಳೆ ಆಗಲಿದೆ. ನಗರದಲ್ಲಿ ಅಕ್ಟೋಬರ್ 18ರವರೆಗೆ ಪ್ರತಿ ಗಂಟೆಗೆ 30-40ಕಿಲೋ ಮೀಟರ್‌ವರೆಗೆ ಜೋರು ಗಾಳಿ ಸಹಿತ ವ್ಯಾಪಕ ಮಳೆ ಆಗಲಿದೆ. ದಿನವಿಡೀ ಮಬ್ಬು ಕವಿದ ವಾತಾವರಣ, ಕೊಂಚ ಚಳಿ ವಾತಾವರಣ ಕಂಡು ಬರಬಹುದು. ಗರಿಷ್ಠ ತಾಪಮಾನದಲ್ಲಿ ಇಳಿಕೆ ಆಗಲಿದೆ. 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ, 21 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗುವ ಸೂಚನೆಗಳು ಇವೆ.

ವಿವಿಧ ಜಿಲ್ಲೆಗಳಿಗೆ ಭಾರೀ ಮಳೆ, ಯೆಲ್ಲೋ ಅಲರ್ಟ್

ಬೆಂಗಳೂರು ಮಾತ್ರವಲ್ಲದೇ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಈ ಪೈಕಿ ಕೆಲವು ಜಿಲ್ಲೆಗಳಿಗೆ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಐಎಂಡಿ ಮುನ್ಸೂಚನೆ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+