Bengaluru Rain: ಸೋಮವಾರ ಮಧ್ಯಾಹ್ನ 18.5 ಮಿಮೀ. ದಾಖಲು, ಇನ್ನೂ 4 ದಿನ ಇದೇ ವಾತಾವರಣ

ಬೆಂಗಳೂರು, ಜುಲೈ 10: ಉದ್ಯಾನ ನಗರಿ ಬೆಂಗಳೂರಲ್ಲಿ ಸೋಮವಾರವು ಮಳೆಯ ಸಿಂಚನ ಮುಂದುವರಿದಿದ್ದು, ಮಧ್ಯಾಹ್ನವೇ ವಿವಿಧೆಡೆ ಉತ್ತಮ ಮಳೆ ದಾಖಲಾಗಿದೆ. ಬಾಗಲಕುಂಟೆಯಲ್ಲಿ 18.5 ಮಿಲಿ ಮೀಟರ್ ಮಳೆ ಆಗಿದೆ. ಇಂದು ತಡರಾತ್ರಿವರೆಗೂ ಜೋರು ಮಳೆ ಸುರಿಯುವ ಲಕ್ಷಣಗಳು ಇದೆ. ಈ ಮಳೆ ಮುಂದಿನ ನಾಲ್ಕು ದಿನ ಮುಂದುವರಿಯಲಿದೆ.

ವಾರಗಳಿಂದಲೂ ನಗರದಲ್ಲಿ ಮಳೆ ಜೊತೆ ತಂಪು ವಾತಾವರಣ ಕಂಡು ಬರುತ್ತಿದೆ. ಭಾನುವಾರ ನಗರದ ವಿವಿಧೆಡೆ ಉತ್ತಮ ಮಳೆ ದಾಖಲಾಗಿದೆ. ಆಗಾಗ ಬಂದು ಹೋಗುವ ಮಳೆಯಿಂದ ಸಂಚಾರಕ್ಕೆ ಕಿರಿ ಕಿರಿ ಉಂಟಾಗುತ್ತದೆ. ತಾಪಮಾನದಲ್ಲಿ ಇಳಿಕೆ ಅಗಿದ್ದು, ಎಲ್ಲೆಡೆ ಚಳಿ ಅನುಭವವಾಗಿದೆ.

 Bengaluru Rain

ಮುಂದಿನ ನಾಲ್ಕು ದಿನ ಅಂದರೆ ಜುಲೈ 14ರವರೆಗೆ ನಗರದಲ್ಲಿ ವಿವಿಧ ಪ್ರದೇಶಗಳಲ್ಲಿ ಹಗುರ ಮಳೆ ಆಗಲಿದೆ. ಗಾಳಿಯ ರಭಸ ಹೆಚ್ಚಿರುವುದಿಂದ ಇನ್ನಷ್ಟು ಚಳಿ ಸೃಷ್ಟಿ ಅಗಬಹುದು. ಅನೇಕ ಕಡೆಗಳಲ್ಲಿ ಅಧಿಕ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಂಜೆ 4.30ರವರೆಗಿನ ಮಳೆ ಮಾಹಿತಿ

ಬೆಂಗಳೂರಿನ ದಾಸರಹಳ್ಳಿ ವಲಯ ವ್ಯಾಪ್ತಿಯ ಬಾಗಲಗುಂಟೆ ವ್ಯಾಪ್ತಿಯಲ್ಲಿ ಅಧಿಕ ಮಳೆ ಬಿದ್ದಿದೆ. ಇಲ್ಲಿ 18.5 ಮಿಲಿ ಮೀಟರ್ ಮಳೆ ಬಿದ್ದಿದೆ. ಇನ್ನುಳಿದಂತೆ ಯಲಹಂಕ ವ್ಯಾಪ್ತಿಯ ವಿದ್ಯಾರಣ್ಯಪುರ 15 ಮಿಲಿ ಮೀಟರ್, ಪೀಣ್ಯ ಕೈಗಾರಿಕಾ ಪ್ರದೇಶ 12 ಮಿಲಿ ಮೀಟರ್ ಮತ್ತು ಶೆಟ್ಟಿಹಳ್ಳೀಯಲ್ಲಿ 12 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇನ್ನಿತರ ಹಲವೆಡೆ ಜಿಟಿ ಜಿಟಿ ಮಳೆ ಆಗಿದೆ.

ಮಳೆ ಹಿಡಿದುಕೊಳ್ಳುವ ಲಕ್ಷಣ

ರಾಜ್ಯದ ಕಾರವಳಿ, ಒಳನಾಡು ಜಿಲ್ಲೆಗಳಲ್ಲಿ ಈಗಾಗಲೇ ಭಾರೀ ಮಳೆ ಸುರಿದೆ. ಕರಾವಳಿ ಜಿಲ್ಲೆಗಳು ರೆಡ್ ಅಲರ್ಟ್ ನಿಂದ ಯೆಲ್ಲೋ ಅಲರ್ಟ್ ಗೆ ಮರಳಿವೆ. ಈ ಮೂಲಕ ಮಳೆ ಪ್ರಭಾವ ತುಸು ಕಡಿಮೆ ಆಗಿದೆ. ವಿವಿಧ ಜಿಲ್ಲೆಗಳಲ್ಲಿ ಮಳೆ ಕಡಿಮೆ ಆಗುತ್ತಿದ್ದಂತೆ ಬೆಂಗಳೂರಿನಲ್ಲಿ ವ್ಯಾಪಕ ಮಳೆ ಹಿಡಿದುಕೊಳ್ಳುವ ಸಾಧ್ಯತೆ ಇದೆ.

ಮಹಾದೇವಪುರ, ಬೊಮ್ಮನಹಳ್ಳಿ, ‌ಮೆಜೆಸ್ಟಿಕ್, ಕೋರಮಂಗಲ, ವಿಜಯನಗರ, ರಾಜಾಜಿ ನಗರ, ಹೆಬ್ಬಾಳ ಸೇರಿದಂತೆ ಹಲವೆಡೆ ಸೋಮವಾರ ಮಧ್ಯಾಹ್ನ ಚದುರಿದಂತೆ ಅಲಲ್ಲಿ ಮಳೆ ಬಿದ್ದಿದೆ. ಇದು ಇಂದು ರಾತ್ರೆವರೆಗೂ ಆಗಾಗ ಬೀಳಲಿದೆ.

ಮುಂದಿನ ನಾಲ್ಕು ದಿನ ನಗರದ ಕನಿಷ್ಠ ತಾಪಮಾನ 21ರಿಂದ 22 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಟ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.

ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮುಂದಿನ ಮೂರು ದಿನ ಮತ್ತು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ನಾಳೆ ಮಂಗಳವಾರ ಒಂದು ದಿನ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಕೆ ಮಾಹಿತಿ ನೀಡಿದೆ.

ಇನ್ನುಳಿದಂತೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಹಾವೇರಿ, ಬೆಳಗಾವಿ, ಗದಗ ಇನ್ನಿತರ ಜಿಲ್ಲೆಗಳಲ್ಲಿ ಸದ್ಯ ಸುರಿಯುತ್ತಿರುವ ಜಿಟಿ ಜಿಟಿ ಮಳೆಯೇ ಮುಂದುವರಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+