Bengaluru: ಮಳೆಯಲ್ಲಿ 10 ಗಂಟೆಗಳ ಕಾಲ ಒದ್ದೆಯಾದ ಗೊಂಬೆಗಳು: ಟೆರೇಸ್ ಮೇಲಿನ ಕ್ಯೂಟ್ ವಿಡಿಯೋ ವೈರಲ್!

ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆ ಜನಜೀವನವನ್ನ ಅಸ್ತವ್ಯಸ್ತಗೊಳಿಸಿದೆ. ರಸ್ತೆಗಳು ಜಲಾವೃತಗೊಂಡು, ಟ್ರಾಫಿಕ್ ಜಾಮ್‌ನಿಂದಾಗಿ ವಾಹನ ಸವಾರರು ಗಂಟೆಗಟ್ಟಲೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಈ ಎಲ್ಲಾ ಟೆನ್ಶನ್‌ಗಳ ನಡುವೆ ಬೆಂಗಳೂರಿನ ಟೆರೇಸ್ ಒಂದರ ಮೇಲಿನ ಮುದ್ದಾದ ಹಾಗೂ ತಮಾಷೆಯ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಪ್ಲಶ್ ಟಾಯ್ಸ್ ಅಂದರೆ ಮೃದುವಾದ ಬೊಂಬೆಗಳ ಗುಂಪೊಂದು ನೆಟ್ಟಿಗರ ಗಮನ ಸೆಳೆಯುವ ಮೂಲಕ ಮುಖದಲ್ಲಿ ನಗು ತರಿಸಿದೆ.

Bengaluru Rain Leaves Plushie Squad Drenched Viral Video of Toys on Terrace Wins Hearts

ಬೆಂಗಳೂರಿನ ಮಳೆಯಲ್ಲಿ ವೈರಲ್ ಆದ ಗೊಂಬೆಗಳ ವಿಡಿಯೋ

ಸೂರ್ಯಕಾಂತ್ ಶರ್ಮಾ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ತಮಾಷೆಯ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಟೆರೇಸ್ ಮೇಲೆ ಬಟ್ಟೆ ಒಣಗಿಸುವ ಹಗ್ಗಕ್ಕೆ ಸುಮಾರು ಪ್ಲಶ್ ಟಾಯ್ಸ್‌ಗಳನ್ನ ಕ್ಲಿಪ್ ಹಾಕಿ ತೂಗುಹಾಕಿರುವುದನ್ನ ನಾವು ನೋಡಬಹುದು. ಬಿಸಿಲಿಗೆ ಒಣಗಲು ಹಾಕಿದ್ದ ಈ ಬೊಂಬೆಗಳು, ಹಠಾತ್ತನೆ ಸುರಿದ ಭಾರಿ ಮಳೆಗೆ ಸಿಲುಕಿ ಸಂಪೂರ್ಣವಾಗಿ ನೆಂದು ಮುದ್ದೆಯಾಗಿವೆ.

ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿರುವ ಶರ್ಮಾ, "ಬೆಂಗಳೂರಿನ ಹವಾಮಾನ ಇಂದು ಯಾವುದೇ ಮುನ್ಸೂಚನೆ ನೀಡಲಿಲ್ಲ. ಈ ಮುದ್ದಾದ ಬೊಂಬೆಗಳ ಮಾಲೀಕರಿಗೆ ಒಂದು ತುರ್ತು ಸಂದೇಶ: ನಿಮ್ಮ ಮೀಟಿಂಗ್ ಅನ್ನು ಅರ್ಧಕ್ಕೆ ಬಿಟ್ಟುಬಿಡಿ, ಮೊದಲು ಈ ಸ್ಕ್ವಾಡ್ ಅನ್ನು ರಕ್ಷಿಸಿ!" ಎಂದು ತಮಾಷೆಯಾಗಿ ಕ್ಯಾಪ್ಷನ್‌ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ವಿಡಿಯೋದ ಮೇಲೆ "ಬೊಂಬೆಗಳಿಗೆ ಹೆಚ್ಚು ಹೊತ್ತು ಈಜಲು ಬರುವುದಿಲ್ಲ, ತಕ್ಷಣ ತುರ್ತು ರಕ್ಷಣಾ ತಂಡವನ್ನ ಕಳುಹಿಸಿ" ಎಂದು ಸಹ ಸೇರಿಸಿದ್ದಾರೆ.

ನೆಟ್ಟಿಗರ ತಮಾಷೆಯ ಪ್ರತಿಕ್ರಿಯೆಗಳು

ಈ ವಿಡಿಯೋ ಅಪ್‌ಲೋಡ್ ಆದ ಕೇವಲ 22 ಗಂಟೆಗಳಲ್ಲಿ ಬರೋಬ್ಬರಿ 7 ದಶಲಕ್ಷಕ್ಕೂ ಹೆಚ್ಚು (7 ಮಿಲಿಯನ್‌) ವೀಕ್ಷಣೆಗಳನ್ನ ಪಡೆದು ಸೋಶಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಕಮೆಂಟ್ ಬಾಕ್ಸ್‌ನಲ್ಲಿ ನೆಟ್ಟಿಗರು ನಗುವಿನ ಎಮೋಜಿಗಳೊಂದಿಗೆ ತಮಾಷೆಯ ಪ್ರತಿಕ್ರಿಯೆಗಳನ್ನ ನೀಡಿದ್ದಾರೆ.

ವಿಡಿಯೋ ನೋಡಿದ ಒಬ್ಬರು, "ರಕ್ಷಣಾ ತಂಡ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದೆ, ಬರಲು ತಡವಾಗಬಹುದು" ಎಂದು ಕಾಲೆಳೆದಿದ್ದಾರೆ. ಮತ್ತೊಬ್ಬರು, "ಬೇಗ ಬನ್ನಿ, ಅವು ಕೇವಲ ಒಂದು ದಾರದಲ್ಲಿ ಜೀವ ಹಿಡಿದುಕೊಂಡು ನೇತಾಡುತ್ತಿವೆ!" ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, "ವಿಡಿಯೋ ಮಾಡುವುದನ್ನ ಬಿಟ್ಟು ಸ್ವಾರ್ಥಿಯಾಗದೆ ಆ ಬೊಂಬೆಗಳನ್ನ ರಕ್ಷಿಸಬಾರದೇ?" ಎಂದು ನಗೆಚಟಾಕಿ ಹಾರಿಸಿದ್ದಾರೆ.

10 ಗಂಟೆಗಳ ಹೋರಾಟದ ನಂತರ ಪ್ಲಶ್ ಸ್ಕ್ವಾಡ್ ಪಾರು

ನೆಂದು ಮುದ್ದೆಯಾಗಿದ್ದ ಬೊಂಬೆಗಳ ಕಥೆ ಏನಾಯಿತು ಎಂದು ಕಾತುರದಿಂದ ಕಾಯುತ್ತಿದ್ದವರಿಗೆ ಶರ್ಮಾ ಅವರು ಮತ್ತೊಂದು ಅಪ್‌ಡೇಟ್ ವಿಡಿಯೋ ಮೂಲಕ ಸಿಹಿಸುದ್ದಿ ನೀಡಿದ್ದಾರೆ. 10 ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆ ಮತ್ತು ಚಳಿಯನ್ನ ಎದುರಿಸಿದ ಮೇಲೂ, ಆ 'ಪ್ಲಶ್ ಸ್ಕ್ವಾಡ್' ಅದೇ ಹಗ್ಗದಲ್ಲಿ ಭದ್ರವಾಗಿ ನೇತಾಡುತ್ತಿತ್ತು.

"ಯಾರೂ ರಕ್ಷಣೆಗೆ ಬರಲಿಲ್ಲ, ಆದರೆ ನಮ್ಮ ಪ್ಲಶ್ ಸ್ಕ್ವಾಡ್ ಇಡೀ ರಾತ್ರಿ ಮಳೆಯನ್ನ ಎದುರಿಸಿ ಬದುಕುಳಿದಿದೆ. ಬೆಂಗಳೂರಿನ ಹವಾಮಾನ 24 ಗಂಟೆಗಳಲ್ಲಿ ನಾಲ್ಕೂ ಋತುಗಳನ್ನ ತೋರಿಸುತ್ತದೆ" ಎಂದು ಅವರು ಬರೆದುಕೊಂಡಿದ್ದಾರೆ. ಈ ಅಪ್‌ಡೇಟ್ ನೋಡಿದ ನಂತರ ಹಲವು ನೆಟ್ಟಿಗರು ನಿಟ್ಟುಸಿರು ಬಿಟ್ಟಿದ್ದಾರೆ.

"ನಿಮ್ಮ ಅಪ್‌ಡೇಟ್‌ಗೆ ಧನ್ಯವಾದ, ಅವು ಮಳೆಯಲ್ಲಿ ನೆನೆಯುತ್ತಿರುವುದನ್ನ ನೋಡಿ ನನಗೆ ರಾತ್ರಿ ನಿದ್ದೆಯೇ ಬಂದಿರಲಿಲ್ಲ" ಎಂದು ಒಬ್ಬರು ಪ್ರತಿಕ್ರಿಯಿಸಿದರೆ, "ಈಗ ಅವು ಈ ಬಿಸಿಲಿನಲ್ಲಿ ಆರಾಮಾಗಿ ಒಣಗಬಹುದು" ಎಂದು ಮತ್ತೊಬ್ಬರು ಖುಷಿ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+