Bengaluru Rains: ಜೋರಾದ ವರುಣಾರ್ಭಟ! 2 ದಿನ ಭಾರೀ ಮಳೆ, 'ಯೆಲ್ಲೋ ಅಲರ್ಟ್'
ಬೆಂಗಳೂರು, ಮೇ 19: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಲವು ದಿನಗಳಿಂದ ಮಳೆ ಅಬ್ಬರಿಸುತ್ತಿದೆ. ಭಾನುವಾರ ರಾತ್ರಿ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಸಾಯಿನಗರ, ಹೊರಮಾವು, ಸಿಲ್ಕ್‌ಬೋರ್ಡ್, ಯಲಹಂಕ ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರವಾಹ ನಿರ್ಮಾಣವಾಗಿದೆ. ರಸ್ತೆಗಳು ನದಿಗಳಂತಾಗಿವೆ. ಹೀಗಿರುವಾಗಲೇ ಸೋಮವಾರ ಮಧ್ಯಾಹ್ನವೇ ಮಳೆ ಆರಂಭವಾಗಿದ್ದು, ಹಂಪಿನಗರ ಸೇರಿ ವಿವಿಧೆಡೆ ಅತ್ಯಧಿಕ ಮಳೆ ದಾಖಲಾಗಿದೆ. ಮುಂದಿನ ಎರಡು ದಿನ ಬೆಂಗಳೂರಿನಲ್ಲಿ ಬಿರುಗಾಳಿ, ಗುಡುಗು, ಮಿಂಚು ಸಹಿತ ವ್ಯಾಪಕ ಮಳೆ ಆಗಲಿದೆ. 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
ನಗರದಲ್ಲಿ ಇಂದು ರಾಜಾಜಿನಗರ, ಕೊಡಿಗೇಹಳ್ಳಿ, ನಂದಿನಿ ಬಡಾವಣೆ, ದೊರೆಸಾನಿ ಪಾಳ್ಯ, ಮೆಜೆಸ್ಟಿಕ್, ವಿಜಯನಗರ, ಜಯನಗರ ಸೇರಿದಂತೆ ವಿವಿಧೆಡೆ ವ್ಯಾಪಕ ಮಳೆ ಆಗಿದೆ. ಇಂದು ಮತ್ತು ನಾಳೆ (ಮೇ 19, 20) ರಂದು ಕನಿಷ್ಠ 110 ಮಿಲಿ ಮೀಟರ್‌ನಷ್ಟು ಮಳೆ ಆಗುವ ಕಾರಣಕ್ಕೆ ಬೆಂಗಳೂರು ನಗರಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹಾವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ತಾಪಮಾನ ಮುನ್ಸೂಚನೆ
ನಗರದಲ್ಲಿ ತಾಪಾಮಾನದಲ್ಲಿ ಬದಲಾವಣೆ ಆಗಿದೆ. ಗರಿಷ್ಠ ತಾಪಮಾನ 33ರಿಂದ 30ಕ್ಕೆ ಇಳಿಕೆ ಆಗಿದೆ. ಗರಿಷ್ಠ ತಾಪಮಾನ 22 ರಿಂದ 20ಕ್ಕೆ ಕುಸಿತವಾಗಿದೆ. ಈವಾರ ಈ ತಾಪಮಾನವ ಮತ್ತಷ್ಟು ಕುಸಿಯಬಹುದು. ಎಲ್ಲೆಡೆ ತಂಪು ವಾತಾವರಣ ಜೊತೆಗೆ ಮಳೆ ಬರಬಹುದೆಂದು ಮುನ್ಸೂಚನೆ ಇದೆ.
ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಳ್ಳಿಯಲ್ಲಿ ಉಂಟಾಗಿರುವ ಚಂಡಮಾರುತ ಪ್ರಸರಣ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮಾತ್ರವಲ್ಲದೇ ರಾಜ್ಯದ ಕರಾವಳಿ ಹಾಗೂ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಮಳೆ ಆಗುತ್ತಿದೆ. ಕೆಲವು ಜಿಲ್ಲೆಗಳಿಗೆ ''ರೆಡ್ ಅಲರ್ಟ್'' ಕೊಡಲಾಗಿದೆ. ಬೆಂಗಳೂರಲ್ಲೂ ಭಾರೀ ಮಳೆ ಸುರಿಯಲಿದ್ದು, ಎಲ್ಲೆಡೆ ಮಬ್ಬು ವಾತಾವರಣ ಕವಿದಿದೆ.
ಮಳೆ ಹಾನಿ: ಬಿಬಿಎಂಪಿ ಪರಿಹಾರ ಕಾರ್ಯ
ಇಷ್ಟು ಮಾತ್ರವಲ್ಲದೇ ಈಗಾಗಲೇ ಬಿದ್ದ ಮಳೆಯಿಂದಾಗಿ ತಗ್ಗು ಪ್ರದೇಶ, ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ. ಮನೆಯಿಂದ ಹೊರ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವಿಪತ್ತು ನಿರ್ವಹಣಾ ತಂಡದವರೊಂದಿಗೆ ಸೇರಿ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಿದೆ. ಬಡಾವಣೆಗಳಲ್ಲಿನ ನೀರು ಮೋಟಾರ್ ಹಚ್ಚಿ ಬೇರೆಡೆ ಹರಿಸುತ್ತಿದೆ. ಜನರಿಗೆ ಸುರಕ್ಷತೆ ಜಾಗೃತಿ ಮೂಡಿಸಿದೆ. ಸಮಸ್ಯೆ ಕೇಳಿ ಬಂದಾಗ ಪರಿಹರಿಸುವ ಯತ್ನ ಮಾಡುತ್ತಿದೆ. ಬಿಬಿಎಂಪಿ ನಿರ್ಲಕ್ಷ್ಯದಿಂದಲೇ ಇಂತಹ ಪರಿಸ್ಥಿತಿ ಬಂದಿದೆ ಎಂದು ನಿವಾಸಿಗಳು ದೂರಿದ್ದಾರೆ.












Click it and Unblock the Notifications