Bengaluru Rain: ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಮಳೆ ಆರ್ಭಟ, ಇನ್ನೆಷ್ಟು ದಿನ ಇರಲಿದೆ ಮಳೆ ?

Bengaluru Rain: ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿಯಿಂದಲೇ ಜಿಟಿಜಿಟಿ ಮಳೆ ಮುಂದುವರಿದಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಮಳೆ ಆಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಾಗೂ ತಮಿಳುನಾಡಿಗೆ ಈಶಾನ್ಯ ಮುಂಗಾರು ಪ್ರವೇಶವಾಗಿರುವುದರಿಂದ ಕರ್ನಾಟಕದಲ್ಲೂ ಮಳೆ ಆಗುತ್ತಿದೆ. ಬೆಂಗಳೂರಿನಲ್ಲಿ ದೀಪವಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ಮಳೆ ನಿರಾಸೆ ಮೂಡಿಸಿದೆ.

ಕಳೆದ ಮೂರು ದಿನಗಳಿಂದಲೂ ಬೆಂಗಳೂರಿನಲ್ಲಿ ಮಳೆ ಆಗುತ್ತಿದೆ. ಮಂಗಳವಾರ ರಾತ್ರಿಯಿಂದಲೇ ಧಾರಾಕಾರ ಮಳೆ ಆಗುತ್ತಿದ್ದು, ಹಬ್ಬದ ಖರೀದಿಗೆ ನಗರದ ಮಾರುಕಟ್ಟೆಗಳಿಗೆ ಬಂದಿದ್ದ ಜನರಿಗೆ ಸಂಕಷ್ಟ ಎದುರಾಯಿತು. ತಮಿಳುನಾಡಿನಲ್ಲಿ ಭಾರೀ ಮಳೆ ಆಗುತ್ತಿರುವುದು ಬೆಂಗಳೂರಿನ ಮೇಲೆ ಪರಿಣಾಮ ಬೀರಿದ್ದು, ಬೆಂಗಳೂರಿನಲ್ಲಿ ಮಿಂಚು - ಗುಡುಗು ಸಹಿತ ಧಾರಾಕಾರ ಮಳೆ ಆಗುತ್ತಿದೆ.

Bengaluru Rain Heavy Showers Lash City This Morning IMD Issues Forecast for Coming Days

ಇನ್ನೂ 7 ದಿನ ಮಳೆ: ಬೆಂಗಳೂರಿನಲ್ಲಿ ಇನ್ನೂ ಏಳು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಈ ಬಾರಿ ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗಿದೆ. ಇದೀಗ ಹಿಂಗಾರಿನಲ್ಲೂ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಬುಧವಾರ ಮುಂಜಾನೆಯಿಂದಲೇ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮಳೆಯಿಂದಾಗಿ ಹಬ್ಬದ ವಾತಾವರಣದ ಮೇಲೆ ತುಸು ಮಂಕುಕವಿದಿತ್ತು. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆ ಆಗುತ್ತಿದೆ.

ಬೆಂಗಳೂರಿನ ಮೆಜೆಸ್ಟಿಕ್​, ಕೆ.ಜಿ.ರಸ್ತೆ, ಕೆ.ಆರ್​​.ಮಾರ್ಕೆಟ್​, ಟೌನ್​ ಹಾಲ್​, ಕಾರ್ಪೊರೇಷನ್ ಸರ್ಕಲ್, ವಿಧಾನಸೌಧ, ಶಿವಾಜಿನಗರ, ಬಸವನಗುಡಿ, ವಿಜಯನಗರ, ಮೈಸೂರು ರಸ್ತೆ, ಮಾಗಡಿ ರಸ್ತೆ, ಜಯನಗರ, ತ್ಯಾಗರಾಜನಗರ, ಹನುಮಂತನಗರ, ಶ್ರೀನಗರ, ರಾಜಾಜಿನಗರ, ಮಲ್ಲೇಶ್ವರ, ಯಶವಂತಪುರ, ಪೀಣ್ಯ, ಜಾಲಹಳ್ಳಿ, ದಾಸರಹಳ್ಳಿ, ಮೇಖ್ರಿ ಸರ್ಕಲ್​, ಹೆಬ್ಬಾಳ ಹಾಗೂ ಕೆ.ಆರ್‌ಪುರ ಸೇರಿದಂತೆ ವಿವಿಧ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+