Bengaluru Rain: ಅಂತು ಇಂತು ಆರ್‌ಸಿಬಿ ಪ್ಲೇ ಆಫ್‌ಗೆ ಹೋಯ್ತು.. ಬೆಂಗಳೂರಲ್ಲಿ ರಣಮಳೆ ಶರುವಾಯ್ತು
Bengaluru Rain: ನಿನ್ನೆ (ಮೇ 18) ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆದಿದ್ದು, ಈ ವೇಳೆ ಸದ್ಯ ಮಳೆರಾಯ ಯಾವುದೇ ಅಡ್ಡಿ ಮಾಡದೇ ಇದ್ದುದರಿಂದ ರಾಯಲ್ ಹುಡುಗರು ಪ್ಲೇ ಆಫ್ ಸ್ಥಾನಕ್ಕೆ ಹತ್ತುವಂತೆ ಆಯಿತು. ಇನ್ನು ಇಂದು (ಮೇ 19) ಮಳೆರಾಯ ಬೆಂಗಳೂರಿನಲ್ಲಿ ಆರ್ಭಟ ಶುರು ಮಾಡಿದ್ದು, ಇದು ಒಂಥರಾ ಶುಭದ ಸಂಕೇತ ಅಂದರೆ ತಪ್ಪಾಗಲಾರದು.
ಯಾಕೆಂದರೆ ಕಳೆದ ಒಂದು ವಾರದಿಂದ ನಗರದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿದ್ದ ಮಳೆ ನಿನ್ನೆ ಮಾತ್ರ ಬಿಡುವು ಕೊಟ್ಟಿತ್ತು.ಇದನ್ನು ಗಮನಿಸಿದರೆ, ಮಳೆರಾಯನಿಗೂ ಆರ್‌ಸಿಬಿ ಮ್ಯಾಚ್ ಸಂಪೂರ್ಣವಾಗಿ ನಡೆಯಬೇಕು, ಅವರು ಗೆಲ್ಲಬೇಕು ಎನ್ನುವ ಆಸೆಯಿತ್ತೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಮಳೆರಾಯ ಅಡ್ಡಿಯಾಗಲಿಲ್ಲ. ಇದರಿಂದ ಆರ್‌ಸಿಬಿ ಕೊನೆಗೂ ಜಯ ಸಾಧಿಸುವ ಮೂಲಕ ಪ್ಲೇ ಆಫ್‌ಗೆ ತಲುಪೇಬಿಟ್ಟಿತು. ಇನ್ನು ಈ ವೇಳೆ ಇಡೀ ಬೆಂಗಳೂರು ಅಲ್ಲದೆ, ರಾಜ್ಯವೇ ಸಂಭ್ರಮಾಚರಣೆಯಲ್ಲಿ ಮಿಂದೆದ್ದು ಹೋಗಿತ್ತು.

ಇಂದು ಮಟ ಮಟ ಮಧ್ಯಾಹ್ನವೇ ಮಳೆರಾಯ ತನ್ನ ಆರ್ಭಟವನ್ನು ಶುರು ಮಾಡಿದ್ದಾನೆ. ಮೆಜೆಸ್ಟಿಕ್, ಕೋರಮಂಗಲ, ಎಂಜಿ ರಸ್ತೆ, ಶೇಷಾದ್ರಿಪುರಂ, ಸಿಲ್ಕ್‌ಬೋರ್ಡ್, ಎಲೆಕ್ಟ್ರಾನಿಕ್ ಸಿಟಿ, ಬಿಟಿಎಂ ಲೇಔಟ್, ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ನಗರದ ಹಲವೆಡೆ ಮಳೆ ಶುರುವಾಗಿದೆ. ಇನ್ನು ಸಂಜೆಯ ಸಂತರವೂ ಸಹ ಮಳೆ ಮುಂದುವರೆಯಲಿದೆ ಎನ್ನುವ ಮುನ್ಸೂಚನೆ ಇದೆ.












Click it and Unblock the Notifications