Bengaluru Rain: ಇಂದು ಆಲಿಕಲ್ಲು ಸಹಿತ ಜೋರು ಮಳೆ: ತಂಪೆರೆದ ಮಳೆಗೆ ಸೆಲ್ಯೂಟ್ ಎಂದ ಜನರು
ಬೆಂಗಳೂರು, ಮೇ 06: ಬೆಂಗಳೂರಿನಲ್ಲಿ ಅತ್ಯಧಿಕ ಉಷ್ಣಾಂಶದ ನಡುವೆ ಸೋಮವಾರ ಸಂಜೆ ಮಳೆಯಾಗಿದೆ. ಇದು ನಗರದ ನಿವಾಸಿಗಳ ಖುಷಿ ಹೆಚ್ಚಿಸಿದೆ. ಆನೇಕಲ್ ಸೇರಿದಂತೆ ಹಲವು ಕಡೆಗಳಲ್ಲಿ ಆಲಿಕಲ್ಲು ಸಹಿತ ಮಳೆ ಸುರಿಯಿತು.
ನಿರಂತರ ಮಳೆಗೆ ತತ್ತರಿಸಿದ್ದ ರಾಜಧಾನಿ ಬೆಂಗಳೂರಿನಲ್ಲಿ (KIAL) ಇಂದು ಸೋಮವಾರ ಮಳೆ ಆಗಿದೆ. ವಿಪರ್ಯಾಸವೆಂದರೆ ಇದೇ ದಿನ ಅತ್ಯಧಿಕ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಸಹ ದಾಖಲಾಗಿದೆ. ಇದರ ಬೆನ್ನಲ್ಲೆ ನಗರದಲ್ಲಿ ಹಗುರವಾಗಿ ಮಳೆ ಸುರಿದಿದೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KAI) ಪ್ರದೇಶದಲ್ಲಿ ಮಧ್ಯಾಹ್ನ ನಂತರ ಮಳೆಯ ಸಿಂಚನ ಶುರುವಾಯಿತು.

ನಂತರ ನಗರಾದ್ಯಂತ ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ, ಸರ್ಜಾಪುರ, ಇಟ್ನೂರು ಗ್ರಾಮ, ಮತ್ತೀಕೆರೆ, ಮಾರತ್ತಹಳ್ಳಿ, ವೈಟ್‌ಫಿಲ್ಡ್, ಕಲ್ಯಾಣ ನಗರ, ಹೆಬ್ಬಾಳ, ಬೊಮ್ಮಾಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ ಬೋರ್ಡ್ ಜಂಕ್ಷನ್, ಯಲಚೇನಹಳ್ಳಿ, ಜೆಪಿ ನಗರದ ಒಂದೆರಡು ಕಡೆ, ರಾಜರಾಜೇಶ್ವರಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಹಗುರವಾಗಿ ಮಳೆ ದಾಖಲಾಯಿತು.
It’s now raining at @BLRAirport ! pic.twitter.com/JZ1dk6GEcY
— DP SATISH (@dp_satish) May 6, 2024
ಆಲಿಕಲ್ಲು ಸಹಿತ ಧಾರಾಕಾರ ಮಳೆ
ಕೃಷ್ಣರಾಜಪುರಂ, HSR ಲೇಔಟ್, ಅರೆಕೆರೆ, ಬೇಗೂರು, ಗೊಟ್ಟಿಗೆರೆ, ಹುಳಿಮಾವು, ಕೊತ್ತನೂರು, ಬೆಳ್ಳಂದೂರು ಪ್ರದೇಶಗಳಲ್ಲಿ ಜೋರು ಮಳೆ ಆಯಿತು. ಆನೇಕಲ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಲಿಕಲ್ಲು ಮಳೆ ದಾಖಲಾಗಿದೆ.

ಈ ವರ್ಷದ ನಾಲ್ಕು ತಿಂಗಳಲ್ಲಿ ಬೆರಳೆಣಿಕೆಯಷ್ಟು ಬಾರಿ ಮಾತ್ರವೇ ಮಳೆ ದಾಖಲಾಗಿದೆ. ಹೀಗಾಗಿ ಎಲ್ಲೆಡೆ ಬಿಸಿಲಿ ಝಳ ಉಂಟಾಗಿ ಜನರು ಹೈರಾಣಾಗುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಆಗಾಗ ಬರುತ್ತಿರುವ ಮಳೆಯಿಂದಾಗಿ ಜನರು ನಿಟ್ಟುಸಿರು ಬಿಡುವಂತಾಗಿದೆ.
ಮೂರು ನಾಲ್ಕು ತಿಂಗಳಿಂದ ಕಾಯುವಿಕೆಗೆ ಕೊನೆಯಾಗಿದೆ. ಮುಂದಿನ ದಿನಗಳಲ್ಲಿ ಬಿಸಲಿನ ಪ್ರಮಾಣ ಕಂಡು ಬಂದರೂ ಸಹಿತ ಆಗಾಗ ಮಳೆ ಆಗಲಿದೆ. ಜೂನ್ ನಂತರ ಬೆಂಗಳೂರಿಗೆ ಹೆಚ್ಚಿನ ಮಳೆ ಆಗುವ ಸಾಧ್ಯತೆ ಇದೆ.
ಮೇ 9ರವರೆಗೂ ಮಳೆ ಮುನ್ಸೂಚನೆ
ಬೆಂಗಳೂರಿಗೆ ಇಂದಿನಿಂದ ಮುಂದಿನ ಮೂರು ದಿನಗಳ ಕಾಲ ಹಗುರದಿಂದ ಸಾಧಾರಣವಾಗಿ ಮಳೆ ಬರಲಿದೆ. ಒಂದೆರಡು ಪ್ರದೇಶಗಳು, ಬಡಾವಣೆಗಳಲ್ಲಿ ಗುಡುಗು ಸಹಿತ ಜೋರು ಮಳೆ ಬರುವ ಸಂಭವವಿದೆ. ನಿತ್ಯ ಸಂಜೆ ನಂತರ ಮಳೆ ನಿರೀಕ್ಷಿಸಬಹುದಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ಮಾಹಿತಿ ನೀಡಿದೆ.
ಮಳೆಯ ಆಗಮನ ಹಿನ್ನೆಲೆಯಲ್ಲಿ ವಾತಾವರಣದಲ್ಲಿ ತಾಪಮಾನ ಇಳಿಕೆ ಆಗಿದೆ. ಮಬ್ಬು ವಾತಾವರಣ ಕಂಡು ಬರುವ ಮುಖೇನ ಸೆಕೆ ಕಡಿಮೆ ಇಳಿಕೆಯಾಗಿದೆ. ಇದೇ ರೀತಿ ಹವಾಮಾನ ಸ್ಥಿತಿ ಮುಂದುವರಿಯಲಿ ಎಂದು ಬೆಂಗಳೂರು ನಿವಾಸಿಗಳು ಬೇಡಿಕೊಳ್ಳುತ್ತಿದ್ದಾರೆ.
ಸದ್ಯ ನಗರದಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.
ಬೆಂಗಳೂರಲ್ಲಿ ರಾತ್ರಿ ಎಲ್ಲೆಲ್ಲಿ ಮಳೆ ಆಗಿದೆ?
ನಗರದ ರಾಜಮಹಲ್ ಗುಟ್ಟಹಳ್ಳಿಯಲ್ಲಿ 40 ಮಿಲಿ ಮೀಟರ್ ಮಳೆ ಆದರೆ, ದಯಾನಂದಸಾಗರ ಬಡಾವಣೆ 33 ಮಿ.ಮೀ, ವಿದ್ಯಾಪೀಠ 31 ಮಿ.ಮೀ, ಕೊಟ್ಟಿಗೆಪಾಳ್ಯ 28 ಮಿ.ಮೀ, ಬಾನಸವಾಡಿ 25ಮಿ.ಮೀ, ಕಾಟನ್‌ಪೇಟೆ 23ಮಿ.ಮೀ, ಗೊಟ್ಟಿಗೆರೆ 22ಮಿ.ಮೀ, ರಾಜಾಜಿನಗರ 22ಮಿ.ಮೀ, ಕುಶಾಲನಗರ 19ಮಿ.ಮೀ, ಕಮ್ಮನಹಳ್ಳಿ 18ಮಿ.ಮೀ, ಪುಲಕೇಶಿ ನಗರ 17.5ಮಿ.ಮೀ, ನಾಗಪುರ 16.50 ಮಿ.ಮೀ, ಹೆಮ್ಮೆಗೆಪುರ 14.50 ಮಿ.ಮೀ. ಮಳೆ ದಾಖಲಾಗಿದೆ.
ಸಂಜೆ ಹಗರುವಾಗಿ ಸುರಿದ ಮಳೆ ರಾತ್ರಿ ತೀವ್ರವಾಯಿತು. ಈ ವೇಳೆ ಬಂದ ಬಿರುಗಾಳಿ ಸಹಿತ ಮಳೆಗೆ ವಿವಿಧ ಕಡೆಗಳಲ್ಲಿ ಮರಗಳು, ಮರದಕೊಂಬೆಗಳು ನೆಲಕ್ಕುರುಳಿದವು. ಬಿಸಿಲು ಕಂಡಿದ್ದ ಜನರು ಮಳೆ ತಂಪೆರೆಯಿತು. ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರುರೈನ್ ಟ್ರೆಂಡಿಂಗ್ ಆಯಿತು.
ಬೆಂಗಳೂರಿನಲ್ಲಿ ಮಳೆಯಿಂದಾಗಿ ಪ್ರಮುಖ ವೃತ್ತ, ರಸ್ತೆಗಳಲ್ಲಿ ನೀರು ತುಂಬಿ ನಿಂತಿತ್ತು, ಸುಮಾರು 25ಕ್ಕೂ ಹೆಚ್ಚು ಮರಗಳು ಬಿದ್ದಿವೆ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಮಳೆಯಿಂದಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಯಿತು. ಒಳಚರಂಡಿಯಿಂದ ಬಿದ್ದ ಮಳೆ ನೀರು ಉಕ್ಕಿ ಹರಿಯಿತು.












Click it and Unblock the Notifications