Bengaluru Flood: ಸ್ವಿಮ್ಮಿಂಗ್ ಪೂಲ್ ಆಯ್ತು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್! ಒಂದೇ ಮಳೆಗೆ ಅವಾಂತರ, ವಿಡಿಯೋ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಉಂಟಾಗಿದ್ದ ಬಿಸಿಲ ಬೇಗೆಗೆ ತಂಪೆರೆದ ಮಳೆಯಿಂದಾಗಿ ಪ್ರವಾಹ ಸಮಸ್ಯೆ ಸೃಷ್ಟಿಯಾಗಿದೆ. ಇದರಿಂದ ಟ್ರಾಫಿಕ್ ನಿಯಂತ್ರಣಕ್ಕಾಗಿ ನಿರ್ಮಿಸಿದ್ದ ಮೇಲ್ಸೇತುವೆ ಮೇಲೆ ಪ್ರವಾಹ ಕಂಡು ಬಂದಿದೆ. ಸಂಚಾರ ಅಸ್ಯವ್ಯಸ್ತವಾಗಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಪ್ರವಾಹ ಸಮಸ್ಯೆ ಉಲ್ಬಣಿಸಿದೆ. ಐಟಿ ಕಾರಿಡಾರ್ ಅಂತಲೇ ಕರೆಸಿಕೊಳ್ಳುವ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲಿನ ವಾಹನ ಸವಾರರು ಸಂಚಾರಕ್ಕೂ ಪರದಾಡುವಂತಾಯಿತು. ಇದೇ ವೇಳೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಾಟರ್ ಲಾಗಿಂಗ್ ಸಮಸ್ಯೆ ನಿವಾರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಈ ಮೂಲಕ ಒಂದೇ ಮಳೆಯು ಬೆಂಗಳೂರಿನ ಪರಿಸ್ಥಿತಿಯನ್ನು ಅನಾರವಣಗೊಳಿಸಿದೆ.
ಸ್ವಿಮ್ಮಿಂಗ್ ಫೂಲ್ ಆಯ್ತು ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ!
ನಗರದ ಬೊಮ್ಮನಹಳ್ಳಿ, ಕೋರಮಂಗಲದಲ್ಲಿ ಗರಿಷ್ಠ 60 ಮಿಲಿ ಮೀಟರ್ ಮಳೆ ಆಗಿದೆ. ಉಳಿದ ಕೆಲವು ಪ್ರದೇಶಗಳಲ್ಲಿ 50 ಮಿ.ಮೀ.ಗೂ ಅಧಿಕ ಮಳೆ ಆಗಿದೆ. ನೆನ್ನೆ ಸಂಜೆಯ ಮಳೆಗೆ ಇಂದು ಬೆಳಗ್ಗೆಯು ಸಂಚಾರ ನಿಧಾನವಾಗಿದ್ದು ಕಂಡು ಬಂತು. ಎಲೆಕ್ಟ್ರಾನಿಕ್ ಸಿಟಿ ಮೇಲ್ಸೆತುವೆ ಅಕ್ಷರಶಃ ಸಿಮ್ಮಿಂಗ್ ಫೂಲ್‌ನಂತಾಗಿದ್ದು, ಇದರ ವಿಡಿಯೋ ಹಂಚಿಕೊಂಡ ಸಾಮಾಜಿಕ ಜಾಲತಾಣ ಬಳಕೆದಾರರು ನಗರದ ಮೂಲಸೌಕರ್ಯ ಸಮಸ್ಯೆ ಕುರಿತು ಕಿಡಿ ಕಾರಿದರು. ಟ್ರಾಫಿಕ್‌ನಲ್ಲಿ ಸರತಿ ಸಾಲಿನಲ್ಲಿ ವಾಹನಗಳು ಸಂಚರಿಬೇಕಾಯಿತು.

ಟ್ರಾಫಿಕ್ ನಿವಾರಣೆಗೆ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಆದರೆ ಇಲ್ಲಿ ಬೀಳುವ ಕನಿಷ್ಠ ನೀರು ಸಹ ಸುಗಮವಾಗಿ ಹರಿದು ಹೋಗಲು ಆಗದಂತಹ ಸ್ಥಿತಿ ಇದೆ. ಇದರಿಂದ ವಾಹನ ಸವಾರರಿಗೆ ತೀವ್ರ ಅಪಾಯ ಎದುರಾಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಅನೇಕ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ ಎನ್ನುವ ಸರ್ಕಾರ ದಿವ್ಯ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣಿಸುತ್ತದೆ. ಈ ಮೇಲ್ಸೇತುವೆ ಎರಡು ಬದಿಯಲ್ಲಿ ಅಲ್ಲಲ್ಲಿ ಒಂದು ಅಡಿಯಷ್ಟು ನೀರು ನಿಂತಿದೆ. ಈ ಪ್ರವಾಹ ಸಮಸ್ಯೆಯಿಂದ ಸಂಚಾರ ನಿಧಾನವಾಗಿದ್ದು, ಅಲ್ಲಲ್ಲಿ ಟ್ರಾಪಿಕ್ ಕಂಡು ಬಂದಿದೆ.
ಅದೇ ರೀತಿ ಕೆ.ಆರ್. ಮಾರುಕಟ್ಟೆ ರಸ್ತೆಗಳು, ಮೆಜೆಸ್ಟಿಕ್ ಅಕ್ಕಪಕ್ಕದ ಪ್ರಮುಖ ರಸ್ತೆಗಳು, ಅಂಡರ್ ಪಾಸ್‌ಗಳಲ್ಲಿ ನೀರು ನಿಂತಿದ್ದು ಕಂಡು ಬಂತು. ಮಳೆಗೆ ಒಳಚರಂಡಿ ನೀರು ಉಕ್ಕಿ ಹರಿದಿದ್ದು, ರಸ್ತೆಗಳಲ್ಲಿ ಅಡಿಗಳಷ್ಟು ನೀರು ಕಂಡು ಬಂತು. ಒಂದು ಕಡೆ ಬಿಸಿಲ ಝಳಕ್ಕೆ ತತ್ತರಿಸಿದ ಜನ ಮಳೆ ಆಯಿತೆಂದು ಖುಷಿ ಪಟ್ಟರೆ, ತಗ್ಗು ಪ್ರದೇಶದ ನಿವಾಸಿಗಳು, ವಾಹನ ಸವಾರರು ಪ್ರವಾಹ ಸಂಕಷ್ಟ ಎದುರಿಸಿದ್ದಾರೆ. ಒಂದು ಮಳೆ ಬೆಂಗಳೂರನ್ನು ನಲುಗಿಸಿದೆ.
Electronicity FlyOver flooded, Near Hongasandra Metro station, Bengaluru.
— Naveen Reddy (@navin_ankampali) September 16, 2026
Bommanahalli recorded 69 mm of rainfall, while nearby Doddathogur received 66 mm, making them the highest rainfall-receiving stations in Bengaluru city.
🎥Shanawaz pic.twitter.com/NHDAKZGRg0
ಮೇಲ್ಸೇತುವೆ ಹೂಳು ತೆಗೆದ ಟ್ರಾಫಿಕ್ ಪೊಲೀಸ್: ವಿಡಿಯೋ
ಎಲೆಕ್ಟ್ರಾನಿಕ್ ಸಿಟಿ ಮೇಲೆ ಹಲವು ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ನೀರು ಸರಾಗವಾಗಿ ಹರಿದು ಹೋಗದೇ ನದಿಯಂತಾಗಿದ್ದ ವಿಡಿಯೋ ಹಂಚಿಕೊಳ್ಳಲಾಗಿದೆ. ಇದರೊಂದಿಗೆ ವಾಟರ್ ಲಾಗಿಂಗ್ ಸಮಸ್ಯೆಯಿಂದ ಹೀಗಾಗಿದೆ ಎಂದು ಅರಿತ ಟ್ರಾಫಿಕ್ ಪೊಲೀಸ್ ಒಬ್ಬರು ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವಂತೆ ಹೂಳು ತೆಗೆದ ದೃಶ್ಯ ಕಂಡು ಬಂತು. ನಗರದ ಬೇರೆ ಬೇರೆ ರಸ್ತೆಗಳಲ್ಲೀ ಇದೇ ರೀತಿಯ ಸಮಸ್ಯೆ ನಿವಾರಣೆಗೆ ಕೆಲವು ಪೊಲೀಸ್ ಸಿಬ್ಬಂದಿ ಕೈ ಜೋಡಿಸಿದ್ದಾರೆ. ಇದರ ವಿಡಿಯೋ ಸಹ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕೆಲವೆಡೆ ಗಾಳಿ ಮಳೆಗೆ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡಚರಣೆ ಉಂಟಾಗಿದೆ. ಆಟೋವೊಂದಕ್ಕೆ ಹಾನಿ ಯಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆ: ಹವಾಮಾನ ಮುನ್ಸೂಚನೆ ಏನಿದೆ?
ಕೋರಮಂಗಲ ಮತ್ತು ಬೊಮ್ಮನಹಳ್ಳಿಯಲ್ಲಿ ಭಾರಿ ಮಳೆಯಾಗಿದ್ದು, 60 ಮಿ.ಮೀ. ಮಳೆ ದಾಖಲಾಗಿದೆ. ಮಾರಪ್ಪನಪಾಳ್ಯ 58 ಮಿ.ಮೀ, ನಾಗಪುರ 54.5 ಮಿ. ಮೀ, ಕೂಡ್ಲು 52 ಮಿ.ಮೀ, ಸಂಪಂಗಿರಾಮನಗರ 45.5 ಮಿ.ಮೀ, ನ್ಯೂ ಬಿ.ಎಲ್.ಆರ್‌ರಸ್ತೆ 47 ಮಿ.ಮೀ, ಆರ್.ಟಿ ನಗರ 46.8 ಮಿ.ಮೀ, ಜಯನಗರ 35.4 ಮಿ.ಮೀ, ಹೆಚ್.ಎಸ್.ಆರ್‌ಲೇಔಟ್ 31.6 ಮಿ.ಮೀ ಮಳೆ ದಾಖಲಾಗಿದೆ. ಉಳಿದೆಡೆ ಹಗುರದಿಂದ ಸಾಧಾರಣ ಮಳೆ ಆಗಿದೆ.
ಮುಂದಿನ ಮೂರು ದಿನ ಆಗಸ್ಟ್ 18ರವರೆಗೆ ನಗರಾದ್ಯಂತ ಇದೇ ರೀತಿ ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ. ಇಂದು ಬುಧವಾರ ಬೆಳಗ್ಗೆ KIALನಲ್ಲಿ 33.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಎಚ್ ಎ ಎಲ್ ನಲ್ಲಿ 32.5 ಡಿಗ್ರಿ ಸೆಲ್ಸಿಯಸ್ ಮತ್ತು ಬೆಂಗಳೂರು ನಗರದಲ್ಲಿ ಇಂದು ಬೆಳಗ್ಗೆಯಿಂದ 32.1 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ. ಮುಂದಿನ ಮೂರು ನಾಲ್ಕು ದಿನ ಹಗಲು ಅಧಿಕ ಬಿಸಿಲು, ಸಂಜೆಯಿಂದ ವಿವಿಧೆಡೆ ಜೋರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Bangalore Electronic City Flyover situation after 2 hrs raining... Full Waterlogging on flyover...huge traffic jam..#BengaloreRains #Bengaluru #BengaluruRain @blrcitytraffic need to clear before it rains again .#rain #BengaloreTraffic #Ecity #ElectronicCity pic.twitter.com/22Mtq5jgo6
— Bijender Singh 📉🙈🙉🙊📈 (@BijenderSingh04) September 16, 2026


Click it and Unblock the Notifications
