ಬೆಂಗಳೂರಲ್ಲಿ ಅತೀ ಉದ್ದದ 28ಕಿಮೀ ಟೋಲ್‌ ಸಹಿತ ಮೇಲ್ಸೇತುವೆ ನಿರ್ಮಾಣ; ₹3,500 ಕೋಟಿ ವೆಚ್ಚ, ಹೇಗಿದೆ ವಿನ್ಯಾಸ?

ಬೆಂಗಳೂರು: ಕರ್ನಾಟಕ ಸರ್ಕಾರ ಮತ್ತೊಂದು ಟೋಲ್ ಶುಲ್ಕ ಸಹಿತ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ಮುಂದಾಗಿದೆ. 28 ಕಿ.ಮೀ ಇರುವ ಈ ಮೇಲ್ಸೇತುವೆ ಬೆಂಗಳೂರಿನ ಅತೀ ಉದ್ದದ ಮೇಲ್ಸೇತೆವೆಯಾಗಲಿದೆ. ತುಮಕೂರು ರಸ್ತೆಯಿಂದ ಬಂದು ಕೆ.ಆರ್.ಪುರಂ ಕಡೆಗೆ ಹೋಗುವವರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ. ಅಪಾರ ಪ್ರಮಾಣದಲ್ಲಿ ಸಮಯ ಉಳಿಸಲಿದೆ. ಈ ಯೋಜನೆ ಅಂದಾಜು ವೆಚ್ಚ, ಗಡುವು, ನಿರ್ಗಮನ- ಆಗಮನ ಹೇಗೆ? ವಿನ್ಯಾಸದ ಮಾಹಿತಿ ಇಲ್ಲಿದೆ.

ಬೆಂಗಳೂರಿನ ಯಶವಂತಪುರದಿಂದ ನಗರದ ಕೇಂದ್ರ ಭಾಗದಲ್ಲಿ ನಿತ್ಯ ಉಂಟಾಗುವ ಟ್ರಾಫಿಕ್ ನಿಯಂತ್ರಿಸಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ. ತುಮಕೂರು ರಸ್ತೆಯಿಂದ ಹಳೇ ಮದ್ರಾಸ್ ರಸ್ತೆಗೆ ಈ ಕಾರಿಡಾರ್ ಬಳಿಸಿ ಟೋಲ್ 'ಶುಷ್ಕ ಸಹಿತ' ವಾಹನ ಸವಾರರು ಸಂಚರಿಸಬದಾಗಿದೆ. ಈ ಯೋಜನೆಯನ್ನು ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟಕ್ಟರ್ ಕಂಪನಿ (ಬಿ ಸ್ಟೈಲ್) ಆರಂಭಿಸಲಿದೆ. ಇದೇ ಸಂಸ್ಥೆ ಬೆಂಗಳೂರಿನ ದಕ್ಷಿಣ ಭಾಗದ ರಾಗಿಗುಡ್ಡ ಜಂಕ್ಷನ್‌ನಿಂದ ತಲಘಟ್ಟಪುರ ಜಂಕ್ಷನ್ ಮಾರ್ಗದವರೆಗೆ ಅಲ್ಲೊಂದು 'ಶುಲ್ಕ ಸಹಿತ' ಕಾರಿಡಾರ್ ಸ್ಥಾಪನೆಗೆ ಮುಂದಾಗಿದೆ.

28-Km Toll Elevated Corridor

ಅಂದಾಜು ವೆಚ್ಚ ಎಷ್ಟು?

ಸರ್ಕಾರ-ಖಾಸಗಿ ಸಹಭಾಗಿತ್ವದಲ್ಲಿ ಕಾರಿಡಾರ್ ತಲೆ ಎತ್ತಲಿದೆ. 28 ಕಿಲೋ ಮೀಟರ್ ಉದ್ದದ ಯೋಜನೆಗೆ ಒಟ್ಟು 3500 ಕೋಟಿ ರೂಪಾಯಿ ಎನ್ನಲಾಗಿದೆ. 'ನಿರ್ಮಾಣ, ಮಾಲೀಕತ್ವ, ನಿರ್ವಹಣೆ ಮತ್ತು ವರ್ಗಾವಣೆ' (ಬಿಒಒಟಿ) ಮಾದರಿಯಲ್ಲಿ ನಡೆಯುವ ಕಾಮಗಾರಿಗೆ ಶೇ.40ರಷ್ಟು ಹಣ ರಾಜ್ಯ ಸರ್ಕಾರ ನೀಡಲಿದೆ. ಬಾಕಿ ಹಣವನ್ನು ಗುತ್ತಿಗೆದಾರ ಸಂಸ್ಥೆ ನೀಡಲಿದೆ.

ಯೋಜನೆ ಅನುಷ್ಠಾನವಾದ ಬಳಿಕ ಸುಮಾರು 30 ವರ್ಷಗಳ ಕಾಲ ವಾಹನ ಬಳಕೆದಾರರ ಶುಲ್ಕವನ್ನು ಇದೇ ಗುತ್ತಿಗೆದಾರ ಸಂಸ್ಥೆ ಸಂಗ್ರಹಿಸುತ್ತದೆ. ಆದರೆ ಶುಲ್ಕ ಎಷ್ಟು ವಿಧಿಸಬೇಕು ಎಂಬುದನ್ನು ರಾಜ್ಯ ಸರ್ಕಾರ ನಿರ್ಧಾರ ಮಾಡಲಿದೆ ಎಂದು ಬಿಸ್ಮೈಲ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾರಿಡಾರ್ ವಿನ್ಯಾಸ ಹೇಗಿದೆ?

ಯಶವಂತಪುರ ಪ್ರೈಓವರ್ ವೃತ್ತದಿಂದ ಮೇಲೆ ಹತ್ತಿದರೆ, ಐಐಎಸ್ಸಿ, ಮೇಕ್ರಿ ಸರ್ಕಲ್, ಜಯಮಹಲ್, ಸೇಂಟ್ ಜಾನ್ಸ್‌ ಚರ್ಚ್ ರಸ್ತೆ, ಹಲಸೂರು ಕೆರೆ ಮೂಲಕ ಹಳೇ ಮದ್ರಾಸ್ ರಸ್ತೆಯನ್ನು ಸಂಪರ್ಕಿಸಿ, ಅಲ್ಲಿಂದ ಕೆ. ಆರ್.ಪುರ ಸಿಗ್ನಲ್ ನಂತರ ಕಾರಿಡಾರ್ ಕೊನೆಗೊಳ್ಳುವಂತೆ ವಿನ್ಯಾಸ ಮಾಡಲಾಗಿದೆ.

4 ಲೈನ್, 12 ಪ್ರವೇಶ ಮತ್ತು ನಿರ್ಗಮನ

ಯಶವಂತಪುರ ಮೇಲ್ಸೇತುವೆ ಭಾಗದಿಂದ ಈ ಕಾರಿಡಾರ್ ಆರಂಭವಾಗುತ್ತದೆ. ಒಟ್ಟು 4 ಲೈನ್ ರಸ್ತೆ ಇರಲಿದ್ದು, ಮೇಲ್ಸೇತುವೆ ಉದ್ದಕ್ಕೆ ವಿವಿಧ ಕಡೆಗೆ ಒಟ್ಟು 12 ಪ್ರವೇಶ ಮತ್ತು ನಿರ್ಗಮನ ಪಾಯಿಂಟ್ ಗಳಿರುತ್ತವೆ. ಎಲ್ಲಿಂದ ಬೇಕಾದರೆ ವಾಹನಗಳು ಈ ಕಾರಿಡಾರ್ ಪ್ರವೇಶಿಸಲು ಸುಲಭವಾಗುವಂತೆ ಪ್ಲ್ಯಾನ್ ಮಾಡಲಾಗಿದೆ.

30 ತಿಂಗಳ ಡೆಡ್‌ಲೈನ್ ಫಿಕ್ಸ್; ಸಮಯ ಉಳಿತಾಯ

ಕಾಮಗಾರಿ ಆರಂಭವಾದಾಗಿನಿಂದ ನಂತರದ ಎರಡೂವರೆ ವರ್ಷದಲ್ಲಿ (30 ತಿಂಗಳ) ಪೂರ್ಣಗೊಳಿಸಬೇಕೆಂಬ ಗಡುವು ಹಾಕಿಕೊಳ್ಳಲಾಗಿದೆ. ಇದರ ಮೇಲೆ ವಾಹನಗಳು 60 ರಿಂದ 80 ಕಿ.ಮೀ ವೇಗದಲ್ಲಿ ಸಂಚರಿಸಬಹುದಾಗಿದೆ.

ಸದ್ಯ ತುಮಕೂರು ರಸ್ತೆ ಕಡೆಯಿಂದ ಬರುವವರು ಕೆ.ಆರ್.ಪುರಂ ಕಡೆಗೆ ಹೋಗಬೇಕಾದರೆ ನಗರ ಒಳಗಿನಿಂದ ಸಿಗ್ನಲ್ ದಾಟಿಕೊಂಡು ಹೋಗಬೇಕು. ಇಲ್ಲವೇ ಔಟರ್ ರಿಂಗ್ ರಸ್ತೆ ಮೂಲಕ ಹೋಗಬೇಕು. ಅದಕ್ಕಾಗಿ ಒಟ್ಟು ಸುಮಾರು ಒಂದೂವರೆಗೆ ಗಂಟೆ (90) ವ್ಯಯಿಸಬೇಕಿದೆ. ಜೊತೆಗೆ ಟ್ರಾಫಿಕ್, ಸಿಗ್ನಲ್‌ಗಳಿಂದ ಹೈರಾಣಾಗಬೇಕು. ಮುಂದೆ ಈ ಕಾರಿಡಾರ್ ನಿರ್ಮಾಣವಾದ ಬಳಿಕ ಕೇವಲ 28-30 ನಿಮಿಷಗಳಲ್ಲಿ ನೀವು ಸಂಚಾರ ಮಾಡಬಹುದಾಗಿದೆ. ಟ್ರಾಫಿಕ್ ಫ್ರೀ ಸಂಚಾರ ಮಾಡಬಹುದು ಎಂದು ಬಿಸ್ಮೈಲ್ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+