Property Tax: ಬೆಂಗಳೂರು ಆಸ್ತಿ ಮಾಲೀಕರೇ ಗಮನಿಸಿ! 1,585 ಸಿಬ್ಬಂದಿ ಮನೆ ಮನೆಗಳಿಗೆ ಭೇಟಿ

ಬೆಂಗಳೂರು: ರಾಜಧಾನಿಯಲ್ಲಿ ಆಸ್ತಿ ತೆರಿಗೆ ವಸೂಲಾತಿಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತ್ತಿಚೆಗೆ ಎಐ ಸಹಾಯ ಪಡೆದು ಕರೆಗಳ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ತೆರಿಗೆ ಬಾಕಿದಾರರಿಂದ ವಸೂಲಿಗೆ ಮುಂದಾಗಿತ್ತು. ಇದೀಗ ಮತ್ತೆ ಆಯಾ ಪಾಲಿಕೆಗಳ ವ್ಯಾಪ್ತಿಯಲ್ಲಿ ಖಾಸಗಿ ಏಜೆನ್ಸಿ ಸಿಬ್ಬಂದಿಯು ನಿಮ್ಮ ಮನೆ, ಮನೆಗಳಿಗೆ ಭೇಟಿ ನೀಡಲಿದ್ದಾರೆ.

ಹೌದು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಇತ್ತೀಚೆಗೆ ಮೌಲ್ಯಮಾಪನಕ್ಕಾಗಿ ಖಾಸಗಿ ಏಜೆನ್ಸಿಯವರನ್ನು ನೇಮಿಸಿಕೊಂಡಿತ್ತು. ಇದೀಗ ಅದೇ ಏಜೆನ್ಸಿಯವರಿಗೆ ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ. ಹೀಗಾಗಿ ಅವರೆಲ್ಲ (ಖಾಸಗಿ ಏಜೆನ್ಸಿಯ ಸಿಬ್ಬಂದಿ) ಶೀಘ್ರವೇ ಬೆಂಗಳೂರಿನಾದ್ಯಂತ ಮನೆ ಮನೆಗೆ ತೆರಳಿ ಆಸ್ತಿ ತೆರಿಗೆ ಮೌಲ್ಯಮಾಪನ ಮಾಡಲಿದ್ದಾರೆ.

Bengaluru property tax

ಆಸ್ತಿಗಳು, ತೆರಿಗೆ ಪಾವತಿಸಿದ ಆಸ್ತಿಗಳ ಸಂಖ್ಯೆಯಲ್ಲಿ ವ್ಯತ್ಯಾಸ!

ನಗರದಲ್ಲಿ ತೆರಿಗೆ ಪಾವತಿಸುವ ಆಸ್ತಿಗಳ ಸಂಖ್ಯೆ ತಕ್ಕಮಟ್ಟಿಗೆ ಇದೆ. ಆದರೆ ತೆರಿಗೆ ಜಾಲದ ಹೊರಗೆ ಇರುವ ಆಸ್ತಿಗಳ ಸಂಖ್ಯೆ ಅಪಾರವಾಗಿದೆ. ಇವೆರಡರ ಮಧ್ಯ ಸಾಕಷ್ಟು ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಈ ರೀತಿ ಏಜೆನ್ಸಿ ಮೊರೆ ಹೋಗಲಾಗಿದೆ. 2011ರ ಜನಗಣತಿಯ ಪ್ರಕಾರ ನಗರದಲ್ಲಿ ಸುಮಾರು 47 ಲಕ್ಷ ವಸತಿ ಕಟ್ಟಡಗಳಿವೆ. ಪ್ರಸ್ತುತ ಈ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗಿದೆ. ಆದರೆ ಇಲ್ಲಿವರೆಗೆ ಆಸ್ತಿ ಪಾವತಿಸಿರುವ ಆಸ್ತಿಗಳ ಸಂಖ್ಯೆ ಕೇವಲ 23 ಲಕ್ಷ ಎಂಬುದು ಗೊತ್ತಾಗಿದೆ ಎಂದು ಜಿಬಿಎ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಅವರು ಹೇಳಿದ್ದಾರೆ.

ಈ ಮೇಲಿನ ಈ ಕಾರಣದಿಂದ ಬಾಕಿ ಆಸ್ತಿ ತೆರಿಗೆ ವಸೂಲಾತಿಗೆ ಜಿಬಿಎ ಹೊಸ ಪ್ಲ್ಯಾನ್ ಮಾಡಿದ್ದು, ಖಾಸಗಿ ಏಜೆನ್ಸಿಗಳಿಂದ ಮೌಲ್ಯಮಾಪನ ಮಾಡಲಿದೆ. ಇನ್ನೂ ವಾಣಿಜ್ಯ ಆಸ್ತಿಗಳ ಸಂಖ್ಯೆ ಹಾಗೂ ಪಾವತಿಯಾದ ಆಸ್ತಿಗಳ ಸಂಖ್ಯೆಗೂ ವ್ಯತ್ಯಾಸ ಕಂಡು ಬಮದಿದೆ. 2011ರ ಮಾಹಿತಿ ಪ್ರಕಾರ, ಆರು ಲಕ್ಷ ವಾಣಿಜ್ಯ ಆಸ್ತಿಗಳು ಬೆಂಗಳೂರಿನಲ್ಲಿವೆ ಎನ್ನಲಾಗಿದೆ. ಆದರೆ ಜಿಬಿಎ ದಾಖಲಾತಿ ಪ್ರಕಾರ, 1.3 ಲಕ್ಷ ವಾಣಿಜ್ಯ ಆಸ್ತಿಗಳು ಮಾತ್ರ ವಾಣಿಜ್ಯ ಆಸ್ತಿಗಳೆಂದು ಘೋಷಿಸಲ್ಪಟ್ಟಿವೆ ಎಂದು ಮೌದ್ಗಿಲ್ ವಿವರಿಸಿದ್ದಾರೆ.

ಯಾರೆಲ್ಲ ಆಸ್ತಿ ತೆರಿಗೆ ಪಾವತಿಸಿಲ್ಲ. ಪಾವತಿಸದೇ ಬಾಕಿ ಉಳಿಸಿಕೊಂಡ ಆಸ್ತಿಗಳ ನಿಖರ ಮಾಹಿತಿಗಾಗಿ ಎಲ್ಲಾ ಆಸ್ತಿಗಳು ಸೂಕ್ತ ತೆರಿಗೆ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಲು ಮನೆ-ಮನೆಗೆ ಕ್ಷೇತ್ರ ಪರಿಶೀಲನೆ ಅಗತ್ಯವಿದೆ ಎಂದರು.

1,585 ಸಿಬ್ಬಂದಿ ಮನೆ ಮನೆಗೆ ಭೇಟಿ

ಜಿಬಿಎ ಉದ್ದೇಶಿತ ಆಸ್ತಿ ತೆರಿಗೆ ವಸೂಲಾತಿಯಲ್ಲಿ ಖಾಸಗಿ ಏಜೆನ್ಸಿಯನ್ನು ತೊಡಗಿಸಿಕೊಳ್ಳಲು ರಾಜ್ಯ ಸಚಿವ ಸಂಪುಟ ನೀಡಿದ ಅನುಮೋದನೆಯು ಟೆಂಡರ್ ಆಹ್ವಾನಕ್ಕೆ ದಾರಿ ಮಾಡಿಕೊಡುತ್ತದೆ. ಈ ಕಾರ್ಯಕ್ಕಾಗಿ ಜಿಬಿಎ 1,585 ಸಿಬ್ಬಂದಿಯನ್ನು ನಿಯೋಜಿಸಲು ಯೋಜಿಸಿದೆ. ಅವರೆಲ್ಲ ನಿಮ್ಮ ಮನೆಗಳಿಗೆ ಬಂದಿ ತೆರಿಗೆ ಪಾವತಿ ಮಾಹಿತಿ ಕಲೆ ಹಾಕುತ್ತಾರೆ. ತೆರಿಗೆ ಪಾವತಿಸದಿದ್ದರೆ ನಿಮ್ಮ ಬಾಕಿ ತೆರಿಗೆದಾರರ ಪಟ್ಟಿಯಲ್ಲಿ ಸೇರಿಸುತ್ತಾರೆ.

ಮಾತ್ರವಲ್ಲದೇ ಆಸ್ತಿ ತೆರಿಗೆ ಪಾವತಿಗಳನ್ನು ಪರಿಶೀಲನೆ ಜೊತೆಗೆ ಕಡಿಮೆ ಮೌಲ್ಯಮಾಪನ, ತಪ್ಪಾದ ಆಸ್ತಿ ಘೋಷಣೆಗಳು, ಬಾಡಿಗೆ ನೀಡಲಾದ ಆಸ್ತಿಗಳು, ಈವರೆಗೆ ತೆರಿಗೆ ಪಾವತಿ ಮಾಡದ ಆಸ್ತಿಗಳು, ಬಾಕಿ ತೆರಿಗೆ ಉಳಿಸಿಕೊಂಡವರ ಮಾಹಿತಿ ಪಡೆಯಲಿದೆ. ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿವಾರ್ಷಿಕವಾಗಿ ಸುಮಾರು 5,000 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗುತ್ತದೆ. ಆದಾಗ್ಯೂ, ಹೆಚ್ಚುತ್ತಿರುವ ವೆಚ್ಚವನ್ನು ಪೂರೈಸಲು ಆದಾಯವು ಸಾಲುತ್ತಿಲ್ಲ. ಹೀಗಾಗಿ ಕನಿಷ್ಠ ಎರಡು ವರ್ಷಗಳ ಹಿಂದೆ ಗುತ್ತಿಗೆದಾರರು ಪೂರ್ಣಗೊಳಿಸಿದ ಕೆಲಸಗಳಿಗೆ ಪಾಲಿಕೆಗಳು ಬಿಲ್ ವಿತರಣೆ ಪೂರ್ಣಗೊಳಿಸಿಲ್ಲ ಎನ್ನಲಾಗಿದೆ.

ಗುತ್ತಿಗೆದಾರರ ಬಿಲ್ ಪಾವತಿ ವಿಳಂಬ ಮಾಡಿದರೆ ಅದು ನಗರದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಮೇಲೂ ಪರಿಣಾಮ ಬೀರಲಿದೆ ಎಂದು ಜಿಬಿಎ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+