Bengaluru Property: ಬೆಂಗಳೂರಿನಲ್ಲಿ ಈ ಆಸ್ತಿದಾರರಿಗೆ ಹೊಸ ಸಂಕಷ್ಟ: ಜಿಬಿಎಯಿಂದ ಆಸ್ತಿ ಪರಿಶೀಲನೆ

ಬೆಂಗಳೂರು: ಬೆಂಗಳೂರಿನಲ್ಲಿ ಇ - ಖಾತಾದ ನಂತರ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬೆಂಗಳೂರಿನ ಕೆಲವು ಆಸ್ತಿದಾರರಿಗೆ ಭಾರೀ ಶಾಕ್ ನೀಡಲು ಮುಂದಾಗಿದೆ. ಬೆಂಗಳೂರಿನಲ್ಲಿ ಕೆಲವು ಆಸ್ತಿದಾರರು ತಪ್ಪು ಮಾಹಿತಿಗಳನ್ನು ಕೊಟ್ಟಿದ್ದು, ಈ ರೀತಿ ತಪ್ಪು ಮಾಹಿತಿ ನೀಡಿದವರ ಮೇಲೆ ಕ್ರಮ ಜರುಗಿಸುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ.

ಬೆಂಗಳೂರಿನಲ್ಲಿ ಅಂದಾಜು 22 ಲಕ್ಷ ಆಸ್ತಿಗಳ ಭೌತಿಕ ಪರಿಶೀಲನಾ ಅಭಿಯಾನ ನಡೆಸುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಸ್ತಿಗಳನ್ನು ಭೌತಿಕವಾಗಿ ಪರಿಶೀಲಿಸಲು ಮತ್ತು ತೆರಿಗೆ ವಂಚನೆಯನ್ನು ತಪ್ಪಿಸುವ ಉದ್ದೇಶದಿಂದ ದೊಡ್ಡ ಪ್ರಮಾಣದ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಸ್ವಯಂ - ಮೌಲ್ಯಮಾಪನ ವ್ಯವಸ್ಥೆಯ ಅಡಿಯಲ್ಲಿ (Self-Assessment System) ಆಸ್ತಿ ವಿವರಗಳನ್ನು ತಪ್ಪಾಗಿ ನಮೂದಿಸಿರುವ ಆಸ್ತಿ ಮಾಲೀಕರನ್ನು ಗುರಿಯಾಗಿಸಿಕೊಂಡು ಈ ಅಭಿಯಾನವನ್ನು ನಡೆಸಲಾಗುತ್ತಿದೆ.

Bengaluru Property Owners Face Fresh Trouble as GBA Begins Property Inspections

ಬೆಂಗಳೂರಿನಲ್ಲಿ ಈ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಗಳ ಸ್ವಯಂ - ಮೌಲ್ಯಮಾಪನ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರಾಪರ್ಟಿದಾರರು ಅವರ ಪ್ರಾಪರ್ಟಿ ವ್ಯಾಪ್ತಿಯನ್ನು ಅವರೇ ಖುದ್ದಾಗಿ ನಮೂದಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಇದನ್ನು ಕೆಲವು ಆಸ್ತಿದಾರರು ದುರುಪಯೋಗ ಪಡೆಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಅಂದಾಜು 22 ಲಕ್ಷ ಆಸ್ತಿಗಳು ಬೆಂಗಳೂರಿನ ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತವೆ. ಆಸ್ತಿಗಳ ಸ್ವಯಂ - ಮೌಲ್ಯಮಾಪನ ವ್ಯವಸ್ಥೆಯ ಅಡಿಯಲ್ಲಿ ಆಸ್ತಿಗಳ ತಪ್ಪು ಮಾಹಿತಿ ನೀಡಿರುವವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಯ ಅಧಿಕಾರಿಗಳು ಈಗಾಗಲೇ ನೋಟಿಸ್ ನೀಡಲು ಪ್ರಾರಂಭಿಸಿದ್ದಾರೆ.

ನಗರದ ಐದು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ 369 ವಾರ್ಡ್‌ಗಳ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಸಮೀಕ್ಷೆಗೆ ಒಳಪಡಿಸುವುದಕ್ಕೆ ನಿರ್ಧರಿಸಲಾಗಿದೆ. ಮುಂದಿನ ಮೂರು ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಪ್ರಾಪರ್ಟಿಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಈ ಜವಾಬ್ದಾರಿಯನ್ನು ಪ್ರತಿ ವಾರ್ಡ್‌ಗೆ ಮೀಸಲಾದ ಸಮೀಕ್ಷಾದಾರರಿಗೆ ಕೊಡಲಾಗಿದೆ. ಆಸ್ತಿಯ ಭೌಗೋಳಿಕ ಸ್ಥಳ, ಫೋಟೋಗಳು, ಮಹಡಿಗಳ (ಎಷ್ಟು ಅಂತಸ್ತು)ಸಂಖ್ಯೆ, ಬಳಕೆಯ ಪ್ರಕಾರ ವಸತಿ ಅಥವಾ ವಾಣಿಜ್ಯ ಕಟ್ಟಡವೇ ಮತ್ತು ಕಟ್ಟಡವು ಹೊಸದೇ ಅಥವಾ ಹಳೆಯದೇ ಎಂಬುದನ್ನು ಒಳಗೊಂಡಂತೆ ವಿವರವಾದ ಮಾಹಿತಿಯನ್ನು ಸಂಗ್ರಹಿಸುವ ಕೆಲಸವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಡಲಿದ್ದಾರೆ.

ಬೆಂಗಳೂರಿನಲ್ಲಿನ ಪ್ರಾಪರ್ಟಿಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಈ ಡೇಟಾವನ್ನು ಅಸ್ತಿತ್ವದಲ್ಲಿರುವ ಸ್ಯಾಟಲೈಟ್ ಫೋಟೋಗಳು ಮತ್ತು ತೆರಿಗೆ ಪಾವತಿ ದಾಖಲೆಗಳನ್ನು ತಾಳೆ ಹಾಕಿ ಪರಿಶೀಲನೆ ಮಾಡಲಾಗುತ್ತದೆ. ಪ್ರತಿಯೊಬ್ಬ ಸಮೀಕ್ಷೆದಾರರು ಪ್ರತಿದಿನ ಕನಿಷ್ಠ 50 ಆಸ್ತಿಗಳನ್ನು ಸಮೀಕ್ಷೆ ಮಾಡುವ ನಿರೀಕ್ಷೆಯಿದೆ. ಬೆಂಗಳೂರಿನಾದ್ಯಂತ ಪ್ರತಿದಿನ ಸುಮಾರು 18,000 ಆಸ್ತಿ ಪರಿಶೀಲನೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಮೂರು ತಿಂಗಳ ಒಳಗೆ ಪರಿಶೀಲನೆ ಮುಕ್ತಾಯ

ಇನ್ನು ಮುಂದಿನ ಮೂರು ತಿಂಗಳ ಅವಧಿಯ ಒಳಗಾಗಿ, ಬೆಂಗಳೂರಿನಲ್ಲಿ ಆಸ್ತಿಗಳ ಸ್ವಯಂ - ಮೌಲ್ಯಮಾಪನ ವ್ಯವಸ್ಥೆಯಡಿ ದಾಖಲಾಗಿರುವ ವಿವರಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಈ ಹಂತದಲ್ಲಿ ತಪ್ಪು ಮಾಡಿರುವ ಆಸ್ತಿದಾರರ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಯಾವ ಕಾರಣಕ್ಕೆ ಈ ಪರಿಶೀಲನೆ

ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಇದು ಪ್ರಮುಖ ಆದಾಯ ಮೂಲವಾಗಿದೆ. ಅಲ್ಲದೇ ಈ 2024 - 25ನೇ ಸಾಲಿನಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣವು ಕುಸಿತ ಕಂಡಿದೆ. ಇನ್ನು ಆಸ್ತಿ ತೆರಿಗೆ ವಿಚಾರದಲ್ಲಿ ಕೆಲವರು ಮೋಸ ಮಾಡುತ್ತಿರುವುದನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+