Bengaluru Property: ಬೆಂಗಳೂರಲ್ಲಿ ಭೂಮಿಗೆ ಬಂಗಾರದ ಬೆಲೆ ಇದ್ದರೂ 119 ಆಸ್ತಿಗಳ ವಾಪಸ್ ಪಡೆಯದ ಜಿಬಿಎ!

Bengaluru Property: ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಬೆಂಗಳೂರಿನ ಪ್ರಾಪರ್ಟಿ ಬೆಲೆ ಹಾಗೂ ಭೂಮಿಗೆ ಚಿನ್ನದ ಬೆಲೆ ಇದೆಯಾದರೂ ಕೆಲವೊಂದು ಪ್ರಮುಖ ಹಾಗೂ ಬೆಲೆ ಬಾಳುವ ಆಸ್ತಿಗಳನ್ನು ಮರಳಿ ಪಡೆಯುವುದಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿರುವ ಬೆಂಗಳೂರು ಕೇಂದ್ರ ನಗರ ನಿಗಮ (BCCC) ಗೆ ಸೇರಿದ 119 ಆಸ್ತಿಗಳ ಗುತ್ತಿಗೆ ಅವಧಿ ಹಲವು ವರ್ಷಗಳ ಹಿಂದೆಯೇ ಮುಗಿದಿದ್ದರೂ ಜಿಬಿಎ ಅಧಿಕಾರಿಗಳು ಈ ಆಸ್ತಿಗಳನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ ಎಂದು DH ವರದಿ ಮಾಡಿದೆ.

ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಈ ಹಿಂದಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ)ವು ತನ್ನ ಆಸ್ತಿ ಹಾಗೂ ಭೋಗ್ಯಕ್ಕೆ ನೀಡಿರುವ ಆಸ್ತಿಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಆದರೆ ಇದೀಗ 119 ಆಸ್ತಿಗಳ ಗುತ್ತಿಗೆ ಅವಧಿ ಹಲವು ವರ್ಷಗಳ ಹಿಂದೆಯೇ ಮುಗಿದಿದ್ದರೂ ಜಿಬಿಎ ಅಧಿಕಾರಿಗಳು ಈ ಆಸ್ತಿಗಳನ್ನು ಮರಳಿ ಪಡೆದಿಲ್ಲ ಎಂದು ಹೇಳಲಾಗಿದೆ. ಕೆಲವು ಗುತ್ತಿಗೆದಾರರು ನವೀಕರಣವನ್ನು ಕೋರಿದ್ದರೂ, ಗುತ್ತಿಗೆ ಒಪ್ಪಂದವನ್ನು ನವೀಕರಿಸಿಲ್ಲ, ಗುತ್ತಿಗೆ ಅವಧಿ ಆರಂಭವಾದಾಗ ನಿಗದಿಪಡಿಸಿದ ಬೆಲೆಗೆ ಕಟ್ಟಡವನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ.

Bengaluru Property Land Is Worth Gold Yet GBA Has Failed to Reclaim 119 Leased Assets

ಇದರಲ್ಲಿ ಅನೇಕ ಆಸ್ತಿಗಳನ್ನು ಸಾಂಸ್ಕೃತಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಅಂಚೆ ಕಚೇರಿಗಳು ಹಾಗೂ ಇತರ ಸಾರ್ವಜನಿಕ ಉತ್ತಮ ಉದ್ದೇಶಗಳಿಗೆ ಗುತ್ತಿಗೆ ನೀಡಲಾಗಿದ್ದರೂ, ಕೆಲವನ್ನು ಖಾಸಗಿ ಬಳಕೆಗಾಗಿ ಗುತ್ತಿಗೆಗೆ ನೀಡಲಾಗಿದೆ ಮತ್ತು ಅವುಗಳ ಗುತ್ತಿಗೆ ಅವಧಿ ಮುಗಿದಿದ್ದರೂ ಸಹ ಅವುಗಳನ್ನು ಮರಳಿ ಪಡೆಯಲಾಗಿಲ್ಲ ಎಂದು ಹೇಳಲಾಗಿದೆ.

Bengaluru Property: ಬೆಂಗಳೂರಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿಗಳು ಭೋಗ್ಯಕ್ಕೆ

ಬೆಂಗಳೂರಿನ ಹಲಸೂರಿನ 30 x 40 ಅಡಿ ಆಸ್ತಿಯನ್ನು 1976 ರಲ್ಲಿ ಮಾಜಿ ಕಾರ್ಪೊರೇಟರ್‌ಗೆ ತಿಂಗಳಿಗೆ 2,000 ರೂ.ಗೆ 30 ವರ್ಷಗಳ ಕಾಲ ಗುತ್ತಿಗೆ ನೀಡಲಾಗಿದೆ ಎಂದು ಹೇಳಲಾಗುತ್ತದೆ. 2006 ರಲ್ಲಿ ಗುತ್ತಿಗೆ ಅವಧಿ ಮುಗಿದಿದ್ದರೂ, 2025ರಲ್ಲಿ ನೋಟಿಸ್ ನೀಡಲಾಗಿದೆ ಮತ್ತು ಆಸ್ತಿಯನ್ನು ಮರಳಿ ಪಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ. ಅದೇ ರೀತಿ 1988 ಮತ್ತು 1991 ರ ನಡುವೆ ಕೇವಲ ಮೂರು ವರ್ಷಗಳವರೆಗೆ - ತಿಂಗಳಿಗೆ 25 ರೂ.ಗಳ ಗುತ್ತಿಗೆ ವೆಚ್ಚದಲ್ಲಿ - ಗುತ್ತಿಗೆ ಪಡೆದ ಮತ್ತೊಂದು ಆಸ್ತಿಯನ್ನು ಇನ್ನೂ ನಿಗಮದ ವಶಕ್ಕೆ ಪಡೆಯಲಾಗಿಲ್ಲ ಅಥವಾ ಮರಳಿ ಪಡೆದಿಲ್ಲ ಎಂದು ಹೇಳಲಾಗಿದೆ. ಇದರಿಂದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಆದಾಯ ಕಡಿಮೆ ಆಗುತ್ತಿದೆ ಎಂದು ಹೇಳಲಾಗಿದೆ.

Bengaluru Property: ಆಸ್ತಿಗಳನ್ನು ಮರಳಿ ಪಡೆಯಲು ಕ್ರಮ

ಇನ್ನು ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಗುತ್ತಿಗೆಗೆ ನೀಡಲಾಗಿರುವ ಎಲ್ಲಾ ಆಸ್ತಿಗಳನ್ನು ಮರಳಿ ಪಡೆಯಲಾಗಿದೆಯೇ ಅಥವಾ ಗುತ್ತಿಗೆ ಒಪ್ಪಂದವನ್ನು ನವೀಕರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದು ಕೊಳ್ಳಲಾಗುವುದು ಎಂದು ಜಿಬಿಎ ಮುಖ್ಯ ಮಹೇಶ್ವರ ರಾವ್ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+