Get Updates
Get notified of breaking news, exclusive insights, and must-see stories!

Bengaluru Property: ಬೆಂಗಳೂರಿನ ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ, ಬಾಡಿಗೆಯೂ ಏಕಾಏಕಿ ಹೆಚ್ಚಳ!

engaluru Property: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ. ದೆಹಲಿ ಹಾಗೂ ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳ ಜನ ಬೆಂಗಳೂರಿಗೆ ಬಂದು ಶಾಶ್ವತವಾಗಿ ನೆಲೆಸುವ ಪ್ಲ್ಯಾನ್ ಮಾಡಿಕೊಳ್ಳುತ್ತಿರುವುದು ಭೂಮಿ ಬೆಲೆ ಇನ್ನಷ್ಟು ಹೆಚ್ಚಳವಾಗು ಸಾಧ್ಯತೆ ಇದೆ. ಇದರ ನಡುವೆ ಭಾರತದಿಂದ ಅಮೇರಿಕಾಗೆ ಹೋಗಿ ಈಗ ಹಿಂದಿರುಗುತ್ತಿರುವವರು (Non-Resident Indian) ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿ ಭೂಮಿ ಮತ್ತು ಪ್ರಾಪರ್ಟಿ ಖರೀದಿ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ. ಈ ಕಾರಣಕ್ಕೆ ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿ ಭೂಮಿ ಬೆಲೆ ಹೆಚ್ಚಳವಾಗುತ್ತಿದೆ.

ಬೆಂಗಳೂರು ಮಹಾನಗರದ ಕೆಲವು ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಇದೀಗ ಅಮೇರಿಕಾದಲ್ಲಿ ಇರುವ ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಹೀಗಾಗಿ, ಬೆಂಗಳೂರಿನ ರಿಯಲ್ ಎಸ್ಟೇಟ್‌ಮೇಲೆ ಹೂಡಿಕೆ ಮಾಡುವುದಕ್ಕೆ ಎನ್‌ಆರ್ಐಗಳು ಮುಂದಾಗಿದ್ದಾರೆ. ಬೆಂಗಳೂರು ನಗರ ಪ್ರದೇಶದಲ್ಲಿ ಭೂಮಿ / ಪ್ರಾಪರ್ಟಿ ಖರೀದಿ ಮಾಡುವುದರಿಂದ ದೀರ್ಘಕಾಲದಲ್ಲಿ ಲಾಭ ತರಲಿದೆ ಎಂದು ಅಂದಾಜಿಸಲಾಗಿದೆ. ಈ ಭಾಗದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಇರುವುದು ಸಹಜವಾಗಿಯೇ ಭೂಮಿ ಬೆಲೆ ಹೆಚ್ಚಳಕ್ಕೆ ಪೂರಕವಾಗಿದೆ.

Bengaluru Property Boom Land Prices and Jackpot Rents Rise by 3 5 in This Area

ಬೆಂಗಳೂರು ಉತ್ತರ ಭಾಗದಲ್ಲಿ ಬೇಡಿಕೆ

ಇನ್ನು ಬೆಂಗಳೂರಿನ ಉತ್ತರ ಭಾಗದಲ್ಲಿ ರಿಯಲ್ ಎಸ್ಟೇಟ್ ವಹಿವಾಟು ಹೆಚ್ಚು ನಡೆಯುತ್ತಿದೆ. ಈ ಭಾಗದಲ್ಲಿ ಭೂಮಿ ಬೆಲೆ ವಿವಿಧ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ಮಧ್ಯಮ ಹಂತದಲ್ಲಿದ್ದು ಬೇಡಿಕೆ ಹೆಚ್ಚಳವಾಗಿದೆ. ಯಲಹಂಕ ಭಾಗದಲ್ಲಿ 3 BHK ಮತ್ತು 2 BHKಗೆ ಬೇಡಿಕೆ ಹೆಚ್ಚಳವಾಗಿದೆ. ವಿಮಾನ ನಿಲ್ದಾಣ ಸಂಪರ್ಕ, ಜಾಗತಿಕ ವ್ಯವಹಾರ ಬೆಳವಣಿಗೆ, ಪ್ರೀಮಿಯಂ ಫ್ಲಾಟ್‌ಗಳು ಇಲ್ಲಿವೆ. ಈ ಭಾಗದಲ್ಲಿ ಬಾಡಿಗೆ ಮನೆಗಳ ಬೇಡಿಕೆ ಹಾಗೂ ಬಾಡಿಗೆ ಹೆಚ್ಚಾಗುತ್ತಿರುವುದು ಸಹ ಹೂಡಿಕೆದಾರರನ್ನು ಆಕರ್ಷಿಸಿದೆ.

ಆಸ್ತಿ ಮೌಲ್ಯ ಹೆಚ್ಚಳ: ಬೆಂಗಳೂರು ಉತ್ತರ ಭಾಗದಲ್ಲಿ ಆಸ್ತಿಗಳ ಮೌಲ್ಯ ಹೆಚ್ಚಾಗಿದೆ. ಶೇ 28ರಿಂದ 32% ಆಸ್ತಿ ಮೌಲ್ಯ ಬೆಳವಣಿಗೆ ಕಂಡಿದೆ. ಉತ್ತರ ಬೆಂಗಳೂರು ಭಾರತದ ವೇಗವಾಗಿ ಬೆಳೆಯುತ್ತಿರುವ ಹೂಡಿಕೆ ಪರಿಸರ ವ್ಯವಸ್ಥೆ ಹೊಂದಿದೆ. ಈ ವಲಯದಲ್ಲಿ ಹೂಡಿಕೆ ಮಾಡಲು NRIಗಳು ಉತ್ಸುಕರಾಗಿದ್ದಾರೆ ಎಂದು Trade Brains ವರದಿ ಮಾಡಿದೆ. ಡಾಲರ್‌ನ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿರುವುದು, ಅಮೇರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಜಾರಿ ಮಾಡುತ್ತಿರುವ ಕೆಲವೊಂದು ಪ್ರಮುಖ ಬದಲಾವಣೆಗಳು ಎನ್‌ಆರ್‌ಐಗಳ ಮೇಲೆ ಪ್ರಭಾವ ಬೀರುತ್ತಿದೆ.

ಉತ್ತರ ಬೆಂಗಳೂರಿನ ಈ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳ

ಇನ್ನು ಬೆಂಗಳೂರಿನ ಉತ್ತರ ಭಾಗದ ಐದಕ್ಕೂ ಹೆಚ್ಚು ಪ್ರದೇಶಗಳಲ್ಲಿ ಭೂಮಿ ಮತ್ತು ಪ್ರಾಪರ್ಟಿಗಳ ಬೆಲೆ ಹೆಚ್ಚಳವಾಗಿದೆ. ಹೆಬ್ಬಾಳ, ಜಕ್ಕೂರು, ದೇವನಹಳ್ಳಿ, ಯಲಹಂಕ ಹಾಗೂ ಥಣಿಸಂದ್ರ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್‌ಗೆ ಬೂಸ್ಟ್‌ ಸಿಕ್ಕಿದೆ. ಈ ಪ್ರದೇಶಗಳಲ್ಲಿ ಬಾಡಿಗೆ ಬೆಲೆಯು ಶೇ 3 ರಿಂದ 5% ರಷ್ಟು ಏರಿಕೆ ಕಂಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+