Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಕರೆಂಟ್ ಕಟ್
Bengaluru Power Cut: ವಿದ್ಯುತ್‌ಗೆ ಸಂಬಂಧಿಸಿದ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಮಾಡಲಾಗುತ್ತದೆ. ಹಾಗೆಯೇ ಇದೀಗ ಗುರುವಾರ (ಸೆಪ್ಟೆಂಬರ್) 3) ಬೆಂಗಳೂರಿನ ಹಲವು ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಕಡಿತ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಹಾಗೂ ಸಮಯದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ನಗರದ ಹಲವು ಭಾಗಗಳಲ್ಲಿ ಇಂದು (ಸೆಪ್ಟೆಂಬರ್ 3) ಮಧ್ಯಾಹ್ನ 12ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಎಲ್ಲೆಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿ ನೋಡಿ.

ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ನಗರದ ಎಚ್‍ಬಿಆರ್ ಲೇಔಟ್ ಸುತ್ತಮುತ್ತಲಿನ ಅಕ್ಕಪಕ್ಕದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಅದರಲ್ಲೂ ಎಚ್‍ಬಿಆರ್ ಲೇಔಟ್ ವ್ಯಾಪ್ತಿಯ ಎಚ್‍ಬಿಆರ್ 1ನೇ, 2ನೇ ಹಾಗೂ 3ನೇ ಬ್ಲಾಕ್, 5ನೇ ಬ್ಲಾಕ್, ಅರ್ಕಾವತಿ ಲೇಔಟ್ ಮತ್ತು ಎಚ್‍ಬಿಆರ್ ಸಿಗ್ನಲ್ ರಸ್ತೆ ಸುತ್ತಮುತ್ತಲ್ಲಿನ ಪ್ರದೇಗಳಲ್ಲಿ ಸಂಪೂರ್ಣವಾಗಿ ಕರೆಂಟ್ ಕಟ್ ಆಗಲಿದೆ ಎಂದು ತಿಳಿದುಬಂದಿದೆ.
ಅಲ್ಲದೆ, ಯಾಸಿನ್ ನಗರ, ಟೀಚರ್ಸ್ ಕಾಲೊನಿ, ಕೃಷ್ಣಾ ರೆಡ್ಡಿ ಲೇಔಟ್, ಇನಾಯತ್ ನಗರ, ಗಣೇಶ ದೇವಸ್ಥಾನ ರಸ್ತೆ, ಕೆಜಿ ಹಳ್ಳಿ, ವಿನೋಭಾ ನಗರ, ಲಿಡ್ಕರ್ ಕಾಲೊನಿ, ಜಲ ವಾಯು ವಿಹಾರ್, ಕಮ್ಮನಹಳ್ಳಿ ಮುಖ್ಯ ರಸ್ತೆ, ರಾಮಯ್ಯ ಲೇಔಟ್, ಕೀರ್ತಿ ಲೇಔಟ್, ಲಿಂಗರಾಜಪುರ ಗ್ರಾಮ, ಜಾನಕಿರಾಮ್ ಲೇಔಟ್, ಬಿಡಿಎ ಲೇಔಟ್, ಸಿಎಂಆರ್ ರಸ್ತೆ, ಥಾಮಸ್ ರಸ್ತೆ, ಇಂದ್ರ ಸ್ಟ್ರೀಟ್, ಎಕೆ ಕಾಲೋನಿ ಮತ್ತು ಸಂಗೊಳ್ಳಿ ರಾಯಣ್ಣ ರಸ್ತೆ.
ಥಣಿಸಂದ್ರ, ಗೋವಿಂದಪುರ ಮುಖ್ಯ ರಸ್ತೆ, ರಶಾದ್ ನಗರ, ಟೆಲಿಕಾಂ ಲೇಔಟ್, ಪ್ರಕೃತಿ ಲೇಔಟ್, ಹೆಣ್ಣೂರು, ನಾಗದೇವಿ ಇಂಡಸ್ಟ್ರೀಸ್, ನೆಹರು ರಸ್ತೆ, ಮಂಗಳಾ ಲೇಔಟ್, ಆಯಿಲ್ ಮಿಲ್ ರಸ್ತೆ, ಬಿಎಂಟಿಸಿ ನೆಹರು ರಸ್ತೆ, ಬಿಆರ್ 2ನೇ ಬ್ಲಾಕ್, ನಾಗವಾರ ಮುಖ್ಯ ರಸ್ತೆ, ಬಿಬಿಆರ್ ನಗರ, ಕಾವೇರಿ ನಗರ, ಶಿರಡಿ ಸಾಯಿ ನಗರ, ಬಿಡಿಎಸ್ ನಗರ, ನಂದ ಗೋಕುಲ ಲೇಔಟ್, ಸಾರಾಯಿಪಾಳ್ಯ, ವಿನಾಯಕ ನಗರ, ಅಶ್ವಥ್ ನಗರ, ಅನಾಮಿಕ ಎನ್‍ಕ್ಲೇವ್ ಮತ್ತು ಥಣಿಸಂದ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಮಹತ್ವದ ಸಲಹೆ ನೀಡಿದ ಬೆಸ್ಕಾಂ
ಕಾಮಗಾರಿಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮಗಿದರೆ ವಿದ್ಯುತ್ ಸರಬರಾಜನ್ನು ಮರುಸ್ಥಾಪಿಸಲಾಗುವುದು. ಸಾರ್ವಜನಿಕರು ಮೊಬೈಲ್, ಬ್ಯಾಟರಿ, ಲ್ಯಾಪ್‌ಟಾಪ್ ಸೇರಿದಂತೆ ವಿದ್ಯುತ್‌ಗೆ ಸಂಬಂಧಿತ ಉಪಕರಣಗಳನ್ನು ಮುಂಜಾಗ್ರತಾ ಕ್ರಮವಾಗಿ ಮುಂಚಿತವಾಗಿ ಚಾರ್ಜ್ ಮಾಡಿಟ್ಟುಕೊಳ್ಳುವುದು ಉತ್ತಮ. ಸಾರ್ವಜನಿಕರು ಸಹಕರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿಗೆ ಸಂಪರ್ಕಿಸಬಹುದು ಎಂದು ತಿಳಿಸಿದೆ.


Click it and Unblock the Notifications
