Bengaluru Power Cut: ಫೆಬ್ರವರಿ 13ರಂದು ಶುಕ್ರವಾರ ಈ ಭಾಗಗಳಲ್ಲಿ ವಿದ್ಯುತ್ ಕಡಿತ, ಎಲ್ಲೆಲ್ಲಿ ತಿಳಿಯಿರಿ

ಬೆಂಗಳೂರು: ತುರ್ತು ನಿರ್ವಹಣಾ ಕಾಮಗಾರಿ ಕೈಗೊಂಡಿರುವ ಪ್ರಯುಕ್ತ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM) ವ್ಯಾಪ್ತಿಯಲ್ಲಿ ಫೆಬ್ರವರಿ 13ರಂದು ಬೆಳಗ್ಗೆಯಿಂದ ಸಂಜೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಾವೆಲ್ಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂಬ ಮಾಹಿತಿ ಇಲ್ಲಿದೆ.

66/11 ಕೆವಿಎ ಆರ್.ಬಿ.ಐ, ಮತ್ತು ಬಿ.ಎಂ.ಟಿ.ಸಿ ಉಪಕೇಂದ್ರ ಹಾಗೂ ಪೀಣ್ಯ ವಿಭಾಗದ 66/11 ಕೆವಿಎ ಮಹಾಲಕ್ಷ್ಮಿ ಲೇಔಟ್ ಉಪಕೇಂದ್ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಕೆಲಸ ನಡೆಯಲಿವೆ. ಹೀಗಾಗಿ ಫೆ.13ರಂದು ಶುಕ್ರವಾರ ವಿದ್ಯುತ್ ಸರಬರಾಜು ತಾತ್ಕಾಲಿಕವಾಗಿ ನಿಲ್ಲಲಿದೆ ಎಂದು ಬೆಸ್ಕಾಂ ತಿಳಿಸಿದೆ. ವಿದ್ಯುತ್ ಕಡಿತಗೊಳ್ಳುವ ಪ್ರದೇಶಗಳ ವಿವರ ಮುಂದಿದೆ.

BESCOM announces scheduled power cuts in Bengaluru on Feb 13 for maintenance work Know all areas

ವಿದ್ಯುತ್ ವ್ಯತ್ಯಯದ ಸ್ಥಳಗಳು

ಬೆಳಗ್ಗೆ 11 ರಿಂದ ನಾಲ್ಕು ಗಂಟೆ ಸಮಯದಲ್ಲಿ 'ಆರ್. ಬಿ.ಐ ಬಡಾವಣೆ, ಶ್ರೇಯಸ್ ಕಾಲೋನಿ, ಗೌರವ್ ನಗರ, ನಟರಾಜ ಬಡಾವಣೆ, ನೃಪತುಂಗ ನಗರ, ಜಂಬುಸವಾರಿ ದಿಣ್ಣೆ, ಚುಂಚಗಟ್ಟ, ಬ್ರೀಗೆಡ್ ಮಿಲೇನಿಯಮ್ ಮತ್ತು ಬ್ರೀಗೆಡ್ ಗಾರ್ಡೇನಿಯ ಅಪಾರ್ಟ್‌ಮೆಂಟ್, ಶಾಂತಿನಗರ, ವಿಲ್ಸನ್ ಗಾರ್ಡನ್, ಡಬಲ್ ರೋಡ್, ಸುಬ್ಬಯ್ಯ ಸರ್ಕಲ್, ರಿಚ್‌ಮಂಡ್ ವೃತ್ತ, ಕೊತ್ತನೂರು, ಜೆ.ಪಿ.ನಗರ, 5ನೇ ಹಂತ, ವೆಲ್ಂಗ್ಟನ್ ಸ್ಟ್ರೀಟ್, ಕರ್ಲಿ ಸ್ಟ್ರೀಟ್, ಲಿಯೋನಾರ್ಡ್ ಸ್ಟ್ರೀಟ್, ರಿನಿಯಸ್ ಸ್ಟ್ರೀಟ್ ಮತ್ತು ವಿಲ್ಸನ್ ಗಾರ್ಡನ್, ಹೊಂಬೆಗೌಡ ನಗರ, ಸಂಪಂಗಿರಾಮ ನಗರ, ಜೆ.ಸಿ. ರಸ್ತೆ, ಶಾಂತಿನಗರ, ಬಿಟಿಎಸ್ ರಸ್ತೆ, ರಿಚ್ ಮಂಡ್ ರ‍್ಕಲ್, ಜಾನ್ಸನ್ ಮಾರ್ಕೆಟ್, ನಾರೀಸ್ ರಸ್ತೆ, ಅರಬ್ ಲ್ಯೇನ್, ರೆಸಿಡೆನ್ಸಿ ರೋಡ್, ಸುದಾಮನಗರ, ಕೆ.ಎಚ್. ರಸ್ತೆ, ಸಿದ್ದಯ್ಯ ರಸ್ತೆ, ಲಾಲ್ ಬಾಗ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

ಅದೇ ರೀತಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಈ ಕೆಳಗಿನ ಪ್ರದೇಶಗಳಾದ ಶಿವನಹಳ್ಳಿ ಪಾರ್ಕ್‌, ಆದರ್ಶ ನಗರ, ಆದರ್ಶ ಬಡಾವಣೆ, ಯುನಿಕ್ಸ್ ಕಾಲೋನಿ, ಇಂದಿರಾ ನಗರ, ಮಂಜುನಾಥ್ ನಗರ, 3ನೇ ಹಂತ 1ನೇ ಬ್ಲಾಕ್, ಬಿ-ನಗರ, ಲಕ್ಷ್ಮೀ ನಗರ, ಎಚ್.ವಿ.ಕೆ.ಬಡಾವಣೆ, ಮಂಜುನಾಥ್ ನಗರ, ತಿಮ್ಮಯ್ಯ ರಸ್ತೆ, ಭೋವಿ ಕಾಲೋನಿ, ಮಹಾಗಣಪತಿ ನಗರ, ಪುಷ್ಪಾಂಜಲಿ ಅಪಾರ್ಟ್‌ಮೆಂಟ್, ಕರ್ನಾಟಕ ಬಡಾವಣೆ, ಕಮಲಾನಗರ, ವಿ.ಜೆ.ಎಸ್.ಎಸ್. ಬಡಾವಣೆ, ವಾರ್ಡ್ ಕಛೇರಿ ಸುತ್ತಮುತ್ತಲಿನ ಪ್ರದೇಶಗಳು.

ಪಂಜಾಬ್ ನ್ಯಾಷನಲ್ ಬ್ಯಾಂಕ್, ಶಂಕರಮಾತಾ, ನಾಗಾಪುರ, ಮಹಾಲಕ್ಷ್ಮಿ ಪುರಂ, ಮೋದಿ ಆಸ್ಪತ್ರೆ ರಸ್ತೆ, ಪೈಪ್ ಲೈನ್ ರಸ್ತೆ, ಜೆ.ಸಿ.ನಗರ, ಕುರಬರಳ್ಳಿ, ಗೃಹಲಕ್ಷ್ಮಿ ಬಡಾವಣೆ 2ನೇ ಹಂತ, ಬೋವಿ ಪಾಳ್ಯ, ಗೆಲಯರ ಬಳಗ, ಮೈಕೋ ಬಡಾವಣೆ, ಜಿ.ಡಿ.ನಾಯ್ಡು ಹಾಲ್, ಪಶ್ಚಿಮ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮಿ ಬಡಾವಣೆ, ಎಸ್ಕಾನ್-ಎಪ್.ಎಸ್.ಐ.ಟಿ.ರಸ್ತೆ, ರಾಜಾಜಿ ನಗರ 2ನೇ ಬ್ಲಾಕ್, ಇ.ಎಸ್.ಐ. ಹಾಸ್ಪಿಟಲ್‌, ಕಮಲಾ ನಗರ ಮುಖ್ಯರಸ್ತೆ, ಬಿ.ಎನ್.ಇ.ಎಸ್.ಕಾಲೇಜು, ಬಿ.ಇ.ಎಲ್.ಎಸ್.ಕಾಲೇಜು, ಬೆಲ್ ಸೋಪ್‌ವನ್ ಅಪಾರ್ಟ್ಮೆಂಟ್, ಇಂಡಲ್ ಏರಿಯಾ, ಟೊಯೊಟೊ ಶೋ ರೂಂ, ಎಸ್ಟೀಮ್ ಕ್ಲಾಸಿಕ್ ಅಪಾರ್ಟ್ಮೆಂಟ್, ಲುಮೋಸ್ ಅಪಾರ್ಟ್ಮೆಂಟ್ ಮತ್ತು ಸುತ್ತಮುತ್ತಲಿನ ಭಾಗಗಳು ತಾತ್ಕಲಿಕವಾಗಿ ವಿದ್ಯುತ್‌ ಕೊರತೆ ಎದುರಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+