ಪೊಲೀಸರ ಹೊಸ ವರ್ಷದ ಉಡುಗೊರೆಗೆ ಜನರ ಅಚ್ಚರಿ!
Recommended Video

ಬೆಂಗಳೂರು, ಜನವರಿ 2 : ಹೊಸ ವರ್ಷ ಎಂದಾಕ್ಷಣ ಪರಸ್ಪರ ವಿಶ್ ಮಾಡಿಕೊಳ್ಳುವುದು, ಹೂಗುಚ್ಚ, ಸಿಹಿ ತಿನಿಸುಗಳು, ಕೇಕ್ ಗಳು ಹಾಗೂ ಅಲಂಕಾರಿಕ ವಸ್ತುಗಳನ್ನು ನೀಡುವುದು ಸಾಮಾನ್ಯ ಆದರೆ ಯಾರೂ ಊಹಿಸಲಾಗದ ಉಡುಗೊರೆಯನ್ನು ಪೊಲೀಸರು ನೀಡಿದ್ದಾರೆ.
ಅಚ್ಚರಿ ಎನ್ನಿಸಿದರೂ ಸತ್ಯ, ರಾಜಧಾನಿ ಪೊಲೀಸರು, ನಾಗರಿಕರಿಗೆ ಕಳವು ವಸ್ತುಗಳನ್ನು ಪತ್ತೆ ಮಾಡಿ ಭಾನುವಾರ ರಾತ್ರಿಇ ಮರಳಿಸುವ ಮೂಲಕ ನೀತನ ವರ್ಷದ ಶುಭ ಕೋರಿದ್ದಾರೆ. ಪೊಲೀಸ ಆಯುಕ್ತರ ಸೂಚನೆ ಮೇರೆಗೆ ಕಳವು ಪ್ರಕರಣಗಳಲ್ಲಿ ಪತ್ತೆಯಾಗಿದ್ದ ವಸ್ತುಗಳನ್ನು ಪೊಲೀಸರು, ರಾತ್ರಿ ವಾರಸುದಾರರಿಗೆ ಹಸ್ತಾಂತರಿಸಿ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ.
ಇನ್ನೂ ರಾತ್ರಿ ಮನೆಗೆ ಬಂದ ಪೊಲೀಸರು ಗಿಫ್ಟ್ ನೀಡಿದ್ದು ಜನರ ಮೊಗದಲ್ಲಿ ಅನಿರೀಕ್ಷಿತವಾಗಿ ಗತಿಸಿದ ಸಂತಸ ಗಳಿಗೆಯಾಗಿದೆ. ಮೈಕೋ ಲೇಔಟ್, ಯಲಹಂಕ ಹಾಗೂ ಬೊಮ್ಮನಹಳ್ಳಿ ಸೇರಿದಂತೆ ಕೆಲವು ಠಾಣೆಗಳ ಪೊಲೀಸರು, ಮಧ್ಯರಾತ್ರಿಯಲ್ಲಿ ಜನರಿಗೆ ಅಚ್ಚರಿ ಗಿಫ್ಟ್ ನೀಡಿದ್ದಾರೆ.

ಪೊಲೀಸರ ಗಿಫ್ಟ್ ಗೆ ನಂದ ಕಿಶೋರ್ ನಿಂದ ಅಭಿನಂದನೆ
ಮೈಕೋ ಲೇಔಟ್ ಉಪ ವಿಭಾಗ ಎಸಿಪಿ ಕರಿ ಬಸವನಗೌಡ ಮತ್ತು ಬೊಮ್ಮನಹಳ್ಳಿ ಠಾಣೆ ಇನ್ಸ್ ಪೆಕ್ಟರ್ ರಾಜೇಶ್ ಅವರು ಬೊಮ್ಮನಹಳ್ಳಿಯ ನಂದ ಕಿಶೋರ್ ಮನೆಗೆ ತೆರಳಿ ೩ ಲಕ್ಷ ರೂ ಮೌಲ್ಯದ ೫೦ ಗ್ರಾಂ ಚಿನ್ನದ ಸರವನ್ನು ಮರಳಿಸಿದ್ದಾರೆ.
ನಂದಕಿಶೋರ್ ಅವರ ಪತ್ನಿ ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದು, ಕೆಲ ತಿಂಗಳ ಹಿಂದೆ ಅವರ ಮನೆಯಲ್ಲಿ ಪರಿಷಯಸ್ಥ ಯುವಕ ಚಿನ್ನಾಭರಣ ಕಳವು ಮಾಡಿದ್ದ. ಈ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು, ಆರೋಪಿಯಿಂದ ಚಿನ್ನದ ಸರ ವಶಪಡಿಸಿಕೊಂಡಿದ್ದರು. ಬಳಿಕ ಆಗ್ನೇಯ ವಿಭಾಗದ ಡಿಸಿಪಿ ಡಾ. ಎಂ.ಬಿ ಬೋರಲಿಂಗಯ್ಯ ಸಲಹೆ ಮೇರೆಗೆ ಎಸಿಪಿ ನಂದಕಿಶೋರ್ ಗೆ ಭಾನುವಾರ ರಾತ್ರಿ ಕರೆ ಮಾಡಿದಾಗ ನಡು ರಾತ್ರಿ ಯಾಕೆ ಕಾಲ್ ಮಾಡುತ್ತೀರ ಎಂದು ಕರೆ ಕಟ್ ಮಾಡಿದ್ದರು. ಮತೆತ ಕರೆ ಮಾಡಿದಾಗ ರಾಂಗ್ ನಂಬರ್ ಎಂದರು. ಕೊನೆಗೆ ಮನೆಗೆ ತೆರಳಿ ಚಿನ್ನದ ಸರ ನೀಡಿದಾಗ ಆನಂದ ಹೇಳತೀರದಾಗಿತ್ತು ಎನ್ನುತ್ತಾರೆ ಪೊಲೀಸರು.
ಇಷ್ಟೇ ಅಲ್ಲದೆ ಹೊಸ ವರ್ಷವನ್ನು ಯಾವುದೇ ತೊಡಕುಗಳಿಲ್ಲದೆ ಆಚರಿಸಲು ಅವಕಾಶ ಕಲ್ಪಸಿಕೊಟ್ಟ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಬೆಂಗಳೂರು ನಗರ ಪೊಲೀಸ್ ಇಲಾಖೆಗೆ ಟ್ವೀಟ್ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
|
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ ಅಭಿನಂದನೆ
ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆವಹಿಸಿ, ಸಾರ್ವಜನರಿಗೆ ಭದ್ರತೆ ನೀಡಿ ಹೊಸ ವರ್ಷವನ್ನು ಆನಂದದಿಂದ ಬರಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನ ಪ್ರಭಾ ಟ್ವೀಟ್ ಮಾಡಿದ್ದಾರೆ.
|
ಹೊಸ ವರ್ಷವನ್ನು ಸಂತಸದಿಂದ ಆಚರಿಸುವಲ್ಲಿ ಪೊಲೀಸರ ಪಾತ್ರ ಹೆಚ್ಚು
ಪೊಲೀಸರ ಭದ್ರತೆ ನೀಡಿದ ಕಾರಣ ಯಾವುದೇ ಆತಂಕವಿಲ್ಲದೆ, ಮಹಿಳೆಯರು ನೆಮ್ಮದಿಯಿಂದ ಹೊಸ ವರ್ಷವನ್ನು ಆಚರಿಸಿದ್ದೇವೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮಾತ್ರವಲ್ಲದೆ ನಗರಾದ್ಯಂತ ಪೊಲೀಸರು ಭದ್ರತೆ ನೀಡಿದ್ದರ. ಯಾವುದೇ ಕಹಿ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿದ್ದರು. ನಿಮ್ಮ ಕಾರ್ಯಕ್ಕೆ ನಮ್ಮ ಸಲಾಂ ಎಂದು ತ್ರಿವೇಣಿ ಬಿಎಸ್ ಟ್ವೀಟ್ ಮಾಡಿದ್ದಾರೆ.
|
ಶಾಂತಿಯುತ ಸಮಾಜ ನಿರ್ಮಾಣ ಮಾಡಲು ಪೊಲೀಸರ ಶ್ರಮ
ಸಣ್ಣ ಪುಟ್ಟ ಘಟನೆಗಳನ್ನು ಪೊಲೀಸರು ನಿಭಾಯಿಸಿ ರೀತಿಯಿಂದ ನಮಗೆ ಖುಷಿಯಾಗಿದೆ. ಯಾವುದೇ ಘಟನೆಗಳು ನಡೆಯದಿದ್ದರೂ ನಡೆದಿದೆ ಎಂದು ಕೆಲವರು ಬಿಂಬಿಸಿದಾಗ ಪೊಲೀಸರು ನಿಭಾಗಯಿಸಿದ ರೀತಿಗೆ ನಾವು ಅಭಿನಂದನೆ ಸಲ್ಲಿಸಲೇ ಬೇಕು ಎಂದು ಪ್ರಮೋದ್ ಆರ್ ಕೆ ಟ್ವೀಟ್ ಮಾಡಿದ್ದಾರೆ.












Click it and Unblock the Notifications