ಬೆಂಗಳೂರು ಪೊಲೀಸರಿಂದ ಡ್ರಗ್ ಪಾರ್ಟಿ ಮೇಲೆ ದಾಳಿ: ಶಕ್ತಿ ಕಪೂರ್ ಮಗನ ಬಂಧನ?
ಬೆಂಗಳೂರು, ಜೂನ್ 13: ಬೆಂಗಳೂರಿನ ಹಲಸೂರು ಪೊಲೀಸರಿಂದ ಹೋಟೆಲ್ ಮೇಲೆ ದಾಳಿಯಾಗಿದೆ. ದಿ ಪಾರ್ಕ್ ಹೊಟೇಲ್ ಮೇಲೆ ಹಲಸೂರು ಪೊಲೀಸರ ದಾಳಿ ನಡೆಸಿದ್ದಾರೆ. ಡ್ರಗ್ಸ್ ಪಾರ್ಟಿಯನ್ನು ಆಯೋಜಿಸಿರು ಅನುಮಾನದ ಮೇಲೆ ಪೊಲೀಸರು ದಾಳಿಯನ್ನು ನಡೆಸಿ 35 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪೈಕಿ ಮೂವರ ಆರೋಪಿಗಳ ವರದಿ ಪಾಸಿಟಿವ್ ಬಂದಿದ್ದು. ಡ್ರಗ್ಸ್ ಸೇವನೆ ಖಚಿತವಾಗಿದೆ. ಡ್ರಗ್ಸ್ ಪಾರ್ಟಿಯಲ್ಲಿ ಬಾಲಿವುಡ್ ನಟನೊಬ್ಬನ ಪಾತ್ರದ ಬಗ್ಗೆ ಅನುಮಾನ ವ್ಯಕ್ತವಾಗಿದೆ.
Recommended Video
ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್ ಸಹ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪೊಲೀಸರು ಅವರನ್ನೂ ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆರೋಪಿಗಳ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಯಾರ ಯಾರ ಬಂಧವನಾಗಿದೆ ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ.

ಮುಂಬೈ ಮೂಲದ ಡಿಜೆಯಿಂದ ಪಾರ್ಟಿ ಗೆ ಡ್ರಗ್ ಸರಬರಾಜು ಮಾಡಲಾಗಿತ್ತು. ಪ್ರಭಾವಿಗಳ ಮಕ್ಕಳು ಸಹ ಪಾರ್ಟಿಯಲ್ಲಿ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಪೊಲೀಸರು ದಾಳಿ ಮಾಡ್ತಾರೆ ಅನ್ನೋ ಮಾಹಿತಿ ಸಿಗ್ತಿದ್ದಂತೆ ಹೊಟೇಲ್ ನಿಂದ ಹಲವರು ಪರಾರಿಯಾಗಿದ್ದಾರೆ.

'The park' ಹೋಟೆಲ್ ಮೇಲೆ ದಾಳಿ:
ಹಲಸೂರು ಬಳಿಯ GT ಮಾಲ್ ಮುಂಭಾಗದಲ್ಲಿರುವ "ದಿ ಪಾರ್ಕ್" ಹೋಟೆಲ್. "THE PARK" 5 ಸ್ಟಾರ್ ಹೋಟೆಲ್. ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಅನುಮಾನ ಹಿನ್ನಲೆಯಲ್ಲಿ ಹಲಸೂರು ಪೊಲೀಸರಿಂದ ದಾಳಿ ನಡಸಿ ಪರಿಶೀಲನೆ ಮಾಡಲಾಗಿದೆ. ರಾತ್ರಿ 12 ಘಂಟೆಯ ಸುಮಾರಿಗೆ ಮೂವತ್ತಕ್ಕೂ ಹೆಚ್ಚು ಪೊಲೀಸರು ದಾಳಿ ಮಾಡಿದ್ದಾರೆ. ಹಲಸೂರು ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿ 50 ಕ್ಕೂ ಹೆಚ್ಚು ಯವಕ ಮತ್ತು ಯುವತಿಯರನ್ನು ವಶಕ್ಕೆ ಪಡೆದು ಮೆಡಿಕಲ್ ಪರೀಕ್ಷೆಗೆ ರವಾನೆ ಮಾಡಲಾಗಿತ್ತು. ತದ ನಂತರ ಪೂರ್ವ ವಿಭಾಗದ ಡಿಸಿಪಿ ಭೀಮಶಂಕರ್ ಗುಳೇದ್ ಖಚಿತ ಪಡಿಸಿದ್ದು 35 ಜನರನ್ನು ವಶಕ್ಕೆ ಪಡೆಯಲಾಗಿದ್ದು ಡ್ರಗ್ಸ್ ನ ರಕ್ತ ಪರೀಕ್ಷೆಯಲ್ಲಿ ಮೂವರಿಗೆ ಪಾಸಿಟಿವ್ ರಿಪೋರ್ಟ್ ಬಂದಿದೆ.












Click it and Unblock the Notifications