ಕಮ್ಮನಹಳ್ಳಿ ಪ್ರಕರಣ: ಸತ್ಯ ಬಾಯಿಬಿಟ್ಟ ಕಾಮುಕರು

ಬೆಂಗಳೂರು, ಜನವರಿ 5: ಕಮ್ಮನಹಳ್ಳಿಯಲ್ಲಿ ಹೊಸವರ್ಷದ ಮೊದಲ ದಿನದಂದು ನಡೆದ ಲೈಂಗಿಕ ಕಿರುಕುಳದಂತಹ ವಿಕೃತ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಜನರನ್ನು ಗುರುವಾರ ಬಂಧಿಸಿದ್ದಾರೆ. ಸೋಮು ಎಂಬಾತ ಪ್ರಕರಣ ಸಂಬಂಧ ಸತ್ಯ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.

ಸೊಮ, ಲೆನೋ, ಐಯ್ಯಪ್ಪ, ರಾಜು ಎಂಬ ನಾಲ್ವರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪಪ್ಪಿ ಎಂಬಾತ ತಲೆ ಮರೆಸಿಕೊಂಡಿದ್ದಾನೆ. ವಿಡಿಯೋ ತುಣುಕಿನಲ್ಲಿ ಇದ್ದದ್ದು ಐಯ್ಯಪ್ಪ ಮತ್ತು ಲೆನೋ(ಲೆನಿನ್) ಎಂದು ಹೇಳಲಾಗಿದೆ. ಕಾಮುಕ ವರ್ತನೆಯಿಂದ ಯುವತಿಯನ್ನು ಚುಂಬಿಸಿ ಅಪಹರಣಕ್ಕೆ ಯತ್ನಿಸಿದ್ದು ಐಯಪ್ಪ ಎನ್ನಲಾಗುತ್ತಿದೆ.[ಬೆಂಗಳೂರು 'ಸೇಫ್ ' ಆಗಿಲ್ಲ ಎಂದು ಬಿಂಬಿಸಬೇಡಿ: ಪರಂ]

Bengaluru police have arrested 4 people in kammnahalli incident

ನಾಲ್ವರನ್ನು ವಿಚಾರಣೆಗೊಳಪಡಿಸಿದಾಗ ಸೋಮು, ಐಯ್ಯಪ್ಪ ಮತ್ತು ಲಿನೋ ಅವರು ಏನು ತಿಳಿಯದವರಂತೆ ವರ್ತಿಸಿದ್ದು, ನಂತರ ತೀವ್ರ ವಿಚಾರಣೆಯಲ್ಲಿ ಸೋಮು ಸತ್ಯವನ್ನು ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.[video: ಬೆಂಗಳೂರಿನಲ್ಲಿ ಮತ್ತೊಬ್ಬ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ]

ಸಿಸಿಟಿವಿ ದೃಶ್ಯದ ತುಣುಕು, ವ್ಯಕ್ತಿಗಳ ಮುಖ ಚಹರೆ, ಹೋಂಡಾ ಆ್ಯಕ್ಟಿವಾ ವಾಹನದ ನಂಬರ್ ಮತ್ತು ಟವರ್ ಲೋಕೆಶನ್ ನಲ್ಲಿ ಜನವರಿ 1 ರಂದು ರಾತ್ರಿ 12 ರಿಂದ ರಾತ್ರಿ 4ರ ವರೆಗೆ ಯಾವ ಯಾವ ವಾಹನಗಳು ಸಂಚರಿಸಿರುವುದನ್ನು ಪರಿಶೀಲಿಸಿ ನಾಲ್ಕು ಜನರನ್ನು ಬಂಧಿಸಿದ್ದಾರೆ. ಈ ಹಿನ್ನೆಲೆ ಬುಧವಾರ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+