ನಿಮ್ಮ ಗಾಡಿ ಕಳ್ಳತನ ಆಗಬಾರದು ಅಂದ್ರೆ ಇದನ್ನ ಫಾಲೋ ಮಾಡಿ ಸಾಕು..!

ಬೆಂಗಳೂರಿನಲ್ಲಿ ವಾಹನಗಳ ಕಳ್ಳತನ ಮಿತಿಮೀರಿದೆ. ಪ್ರತಿ ಠಾಣಾ ವ್ಯಾಪ್ತಿಯಲ್ಲೂ ಆಗಾಗ ವಾಹನ ಕಳ್ಳರ ಬೆನ್ನುಹತ್ತಿ, ಪೊಲೀಸರು ಹಲವಾರು ವಾಹನಗಳನ್ನು ವಶಕ್ಕೆ ಪಡೆಯುತ್ತಲೇ ಇದ್ದಾರೆ. ಎಲ್ಲಿ ನಿಲ್ಲಿಸಿದರೂ ಚಾಲಾಕಿಗಳನ್ನು ವಾಹನಗಳನ್ನು ಎಗರಿಸುತ್ತಿದ್ದಾರೆ. ಹಾಗಾಗಿ ವಾಹನ ಕಳ್ಳರಿಗೆ ಬ್ರೇಕ್‌ ಹಾಕುವುದು ದೊಡ್ಡ ತಲೆನೋವಾಗಿದೆ.

ಹಾಗಾಗಿ, ವಾಹನ ಮಾಲೀಕರಿಗೆ ಪೊಲೀಸರೇ ಕೆಲವು ಟಿಪ್ಸ್‌ ನೀಡಿದ್ದು, ಇದನ್ನ ಪಾಲಿಸಿದರೆ ನಿಮ್ಮ ವಾಹನ ಕಳ್ಳತನವಾಗುವುದನ್ನು ಸುಲಭವಾಗಿ ತಪ್ಪಿಸಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಸಿಟಿ ಪೊಲೀಸ್‌ ಕಮೀಷನರ್‌ ಬಿ.ದಯಾನಂದ್‌, ವಾಹನದ ಅಂದ ಚಂದದ ಜೊತೆಗೆ ವಾಹನದ ಸುರಕ್ಷತೆಯ ಬಗ್ಗೆಯೂ ಎಚ್ಚರವಿರಲಿ. ಇಲ್ಲದಿದ್ದಲ್ಲಿ ʼಕಾಣದಂತೆ ಮಾಯವಾಯಿತೋʼ ಎಂಬಂತಾಗಬಾರದು ಎಂದಿದ್ದಾರೆ.

Bengaluru Police Has Given Tips To Vehicle Owners To Prevent Vehicle Theft

ಬೆಂಗಳೂರು ನಗರದಲ್ಲಿ ಸುಮಾರು 80 ಲಕ್ಷ ವಾಹನಗಳಿವೆ. ಪ್ರತಿದಿನವೂ ಎರಡು ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷವೂ ಸರಾಸರಿ 16 ವಾಹನಗಳು ಕಳ್ಳತನವಾಗುತ್ತಿವೆ ಎಂದು ಕಮೀಷನರ್‌ ಮಾಹಿತಿ ನೀಡಿದ್ದಾರೆ.

ಹಾಗಾಗಿ ಬೆಂಗಳೂರು ನಗರದಲ್ಲಿ ಆಗುತ್ತಿರುವ ಬೈಕ್‌ ಕಳ್ಳತನ ತಡೆಗಟ್ಟಲು ಸಾರ್ವಜನಿಕರು ಕೆಲವು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಾಗಿದೆ. ಮೊದಲಿಗೆ ನೀವು ಇಂತಹ ತಪ್ಪುಗಳನ್ನು ಮಾಡಬೇಡಿ ಎಂದು ಪಟ್ಟಿ ಮಾಡಿದ್ದಾರೆ.

Bengaluru Police Has Given Tips To Vehicle Owners To Prevent Vehicle Theft

ವಾಹನಗಳನ್ನು ಸೂಕ್ತ ಎಚ್ಚರಿಕೆ ಇಲ್ಲದೆ ನಿಲ್ಲಿಸುವುದು. ವಾಹನ ನಿಲ್ಲಿಸಿದಾಗ ಅದರಲ್ಲೇ ಕೀ ಬಿಟ್ಟು ಹೋಗುವುದು. ಸುಲಭವಾಗಿ ಹ್ಯಾಂಡಲ್‌ ಲಾಕ್‌ ಮುರಿಯುವಂತಹ ವಾಹನ ಬಳಸದಿರುವುದು. ಸೂಕ್ತ ಸುರಕ್ಷತಾ ಕ್ರಮಗಳಿಲ್ಲದ ಹಳೆಯ ವಾಹನಗಳನ್ನು ಬಳಸಬೇಡಿ ಎಂದು ಸಲಹೆ ನೀಡಿದ್ದಾರೆ.

ಸಿಸಿಟಿವಿ ಕವರೇಜ್‌ ಇಲ್ಲದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಬೇಡಿ. ಸಾರ್ವಜನಿಕರಿಗೆ ಕಾಣಿಸದಂತೆ ನಿರ್ಜನ ಹಾಗೂ ಕತ್ತಲಿರುವ ಪ್ರದೇಶಗಳಲ್ಲಿ ವಾಹನ ನಿಲ್ಲಿಸಬೇಡಿ ಎಂದಿದ್ದಾರೆ.

ಏನು ಮಾಡಬೇಕು?: ವಾಹನ ಕಳ್ಳತನವಾಗದಂತೆ ತಡೆಯಲು ಕೆಲವು ಟಿಪ್ಸ್‌ ಪೊಲೀಸರೇ ನೀಡಿದ್ದಾರೆ. ಅದರಂತೆ ವಾಹನಗಳಿಗೆ GPS ಸಿಸ್ಟಂ ಅನ್ನು ಅಳವಡಿಸಬೇಕು. ವ್ಹೀಲ್‌ ಲಾಕಿಂಗ್‌ ಸಿಸ್ಟಂ ಅಳವಡಿಸಿಕೊಳ್ಳಿ. ಹ್ಯಾಂಡಲ್‌ ಲಾಕ್‌ಗಳು ಭದ್ರವಾಗಿದೆಯೇ ಎಂಬುದು ಖಾತ್ರಿಪಡಿಸಿಕೊಳ್ಳಬೇಕು. ಸಿಸಿಟಿವಿ ಇರುವ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸಿ ಎಂದು ಕಮೀಷನರ್‌ ದಯಾನಂದ್‌ ಸಲಹೆ ಕೊಟ್ಟಿದ್ದಾರೆ.

Bengaluru Police Has Given Tips To Vehicle Owners To Prevent Vehicle Theft

ವಾಹನ ನಿಲ್ಲಿಸಿದಾಗ ಯಾವ ಕಾರಣಕ್ಕೂ ಅದರಲ್ಲೇ ಕೀ ಇಟ್ಟು ಹೋಗಬೇಡಿ. ನಕಲಿ ಕೀ ಬಳಸಿ ಅಥವಾ ಸರ್ಕ್ಯುಟ್‌ ಬ್ರೇಕ್‌ ಮಾಡಿ ವಾಹನ ಕಳ್ಳತನಕ್ಕೆ ಪ್ರಯತ್ನಿಸಿದರೆ ಸೈರನ್‌ ಬಡಿದುಕೊಳ್ಳುವ ವ್ಯವಸ್ಥೆ ಅಥವಾ ನಿಮ್ಮ ಮೊಬೈಲ್‌ಗೆ ಅಲರ್ಟ್‌ ಬರುವ ತಂತ್ರಜ್ಞಾನವನ್ನು ಬಳಸಿಕೊಳ್ಳಿ. ಈ ಎಲ್ಲ ಅಂಶಗಳನ್ನು ನೀವು ಪಾಲಿಸಿದರೆ ನಿಮ್ಮ ವಾಹನ ಕಳ್ಳತನ ಆಗದಂತೆ ತಡೆಯಬಹುದು ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+