Get Updates
Get notified of breaking news, exclusive insights, and must-see stories!

ಬೆಂಗಳೂರು ಪೊಲೀಸ್ ಕಮೀಷನರ್ ಬುಲೆಟ್ ಸವಾರಿ!

ಬೆಂಗಳೂರು, ಜನವರಿ 18: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಉತ್ಸಾಹಿ ಪೊಲೀಸ್ ಅಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಇಲಾಖೆಯ ದಕ್ಷತೆ ಹೆಚ್ಚಿಸಲು ತಮ್ಮ ಅಧೀನ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಯಾವಾಗಲೂ ಮಾದರಿಯಾಗಿರುವಂತೆ ನಡೆದುಕೊಳ್ಳುತ್ತಾರೆ.

ಭಾಸ್ಕರ್ ರಾವ್ ಅವರು ಬುಲೆಟ್ ಬೈಕ್ ಸವಾರಿ ಮಾಡುತ್ತಿರುವುದನ್ನು ಅವರು ಶನಿವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಚಾರ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರನ್ನು ಹಿಂದೆ ಕೂರಿಸಿಕೊಂಡು, ಯುವಕರನ್ನೂ ನಾಚಿಸುವಂತೆ ಕಮೀಷನರ್ ಬುಲೆಟ್ ಚಲಾಯಿಸಿದ್ದಾರೆ.

Bengaluru Police Commissioner Riding Bullet Bike

'ರಾಯಲ್ ಎನ್‌ಫಿಲ್ಡ್ 650 ಸಿಸಿ ಹಿಮಾಲಯನ್ ಬೈಕ್‌ನೊಂದಿಗೆ ನನ್ನ ಒಂದು ಸೊಗಸಾದ ಪಯಣ' ಎಂದು ಟ್ವಿಟರ್‌ನಲ್ಲಿ ತಮ್ಮ ಬುಲೆಟ್‌ ರೈಡ್‌ ಬಗ್ಗೆ ಬರೆದುಕೊಂಡಿದ್ದಾರೆ. ಕೇವಲ ಒಂದೇ ಗಂಟೆಯಲ್ಲಿ 35 ಜನ ವಿಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ. 411 ಜನ ಲೈಕ್ ಮಾಡಿದ್ದಾರೆ.

ಇತ್ತೀಚೆಗೆ ಮಹಿಳಾ ಸುರಕ್ಷತೆ ಬಗ್ಗೆ ಆಯೋಜಿಸಿದ್ದ ಬುಲೆಟ್ ರೈಡ್‌ನಲ್ಲಿ ಇಲಾಖೆಯ ಪೊಲೀಸ್ ಇನ್ಸಪೆಕ್ಟರ್‌ಗಳ ಜೊತೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರೂ ಭಾಗಿಯಾಗಿದ್ದರು. ಉತ್ಸಾಹದಿಂದ ಬೈಕ್ ಚಲಾಯಿಸಿ, ತಮ್ಮ ಸಹೋದ್ಯೋಗಿಗಳನ್ನು ಹುರಿದುಂಬಿಸಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+