ಪ್ಲೇಸ್ಕೂಲ್ ಲೈಂಗಿಕ ದೌರ್ಜನ್ಯ, ತನಿಖೆಗೆ ಸಿದ್ಧರಾಮಯ್ಯ ಆದೇಶ
ಬೆಂಗಳೂರಿನ ಪ್ಲೇಸ್ಕೂಲ್ ಒಂದರಲ್ಲಿ ಮಕ್ಕಳ ಮೇಲೆ ನಡೆದ ಹಲವು ಲೈಂಗಿಕ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ವಿಸ್ತೃತ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.
ಬೆಂಗಳೂರು, ಫೆಬ್ರವರಿ 25: ಬೆಂಗಳೂರಿನ ಪ್ಲೇಸ್ಕೂಲ್ ಒಂದರಲ್ಲಿ ಮಕ್ಕಳ ಮೇಲೆ ನಡೆದ ಹಲವು ಲೈಂಗಿಕ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ವಿಸ್ತೃತ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಗೆ ಈ ಸಂಬಂಧ ವಿವರವಾದ ತನಿಖೆ ನಡೆಸುವಂತೆ ಹೇಳಿದ್ದೇನೆ. ಅಪರಾಧಿಗಳನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.[ಬೆಂಗಳೂರಿನ ಶಾಲೆಯೊಂದರಲ್ಲಿ ಹಲವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ]

ಬೆಂಗಳೂರಿನ ಮಾರತಹಳ್ಳಿ ಪ್ಲೇಸ್ಕೂಲ್ ಒಂದರಲ್ಲಿ ಮಗುವೊಂದರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಇದೇ ಶಾಲೆಯಲ್ಲಿ ನಡೆದ ಇಂಥಹ ಹಲವು ದೌರ್ಜನ್ಯ ಪ್ರಕರಣಗಳ ಬಗ್ಗೆ ಪೋಷಕರು ಸರಣಿ ದೂರುಗಳನ್ನು ನೀಡಿದ್ದರು.[ಬೆಂಗಳೂರಿನಲ್ಲಿ ಗಗನಸಖಿ ಮೇಲುಡುಪು ಹರಿದು ದುರುಳ ಪರಾರಿ]
ಈ ಸಂಬಂಧ ಈಗಾಗಲೇ ಮಾರತಹಳ್ಳಿ ಪೊಲೀಸರು ಶಾಲೆಯ ಪ್ರಾಂಶುಪಾಲ ಸೇರಿದಂತೆ ಇತರ ಇಬ್ಬರನ್ನು ಬಂಧಿಸಿದ್ದಾರೆ. ಮೂವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದೆ.












Click it and Unblock the Notifications