Ola parcel services: ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕ ಬೆಂಗಳೂರಿನಲ್ಲಿ ಪಾರ್ಸಲ್ ಸರ್ವೀಸ್ ಆರಂಭಿಸಿದ ಓಲಾ- ದರ, ವಿವರ
ಬೆಂಗಳೂರು, ಅಕ್ಟೋಬರ್ 07: ಓಲಾ ಕಂಪನಿಯು ಬೆಂಗಳೂರಿನಲ್ಲಿ ಹೊಸ ಸೇವೆಯೊಂದನ್ನು ಆರಂಭಿಸಿದೆ. ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕ ನಗರದಲ್ಲಿ ಪಾರ್ಸಲ್ ಸರ್ವೀಸ್ ನೀಡಲು ಮುಂದಾಗಿದೆ. ಪಾರ್ಸ್‌ಲ್ ಸರ್ವೀಸ್‌ಗಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಳಸುವ ಮೂಲಕ ಪರಿಸರ ಸ್ನೇಹಿಯಾಗಲು ನಾವು ಬಯಸಿದ್ದೇವೆ ಎಂದು ಓಲಾ ಅಧಿಕಾರಿಗಳು ತಿಳಿಸಿದ್ದಾರೆ.
ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂಲಕ ಪಾರ್ಸೆಲ್‌ಗಳನ್ನು ತಲುಪಿಸುತ್ತದೆ. ರೈಡ್-ಹೇಲಿಂಗ್ ಅಪ್ಲಿಕೇಶನ್ ಮೂಲಕ ಈ ಸೇವೆಯನ್ನು ನೀಡಲಾಗುತ್ತದೆ. ಈ ಸೇವಾಯೋಜನೆಯನ್ನು 'ಸ್ಟಾರ್ಟ್ ಟಿ ಆಲ್-ಎಲೆಕ್ಟ್ರಿಕ್ ಲಾಜಿಸ್ಟಿಕ್ಸ್ ಇಕೋ ಸಿಸ್ಟಮ್ ಇನ್ ಇಂಡಿಯಾ' ಎಂದು ಕರೆಲಾಗುತ್ತದೆ. ಸೇವೆಗಳು ಶುಕ್ರವಾರ ರಾತ್ರಿಯಿಂದ ಪ್ರಾರಂಭವಾಗಿವೆ ಎಂದು ಓಲಾ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

5 ಕಿ.ಮೀ.ಗೆ ₹25, 10 ಕಿ.ಮೀ.ಗೆ ₹50, 15 ಕಿ.ಮೀ.ಗೆ ₹75 ಮತ್ತು 20 ಕಿ.ಮೀಗೆ ₹100 ವಿತರಣಾ ಶುಲ್ಕ ನಿಗದಿಪಡಿಸಲಾಗಿದೆ ಎಂಬ ಮಾಹಿತಿಯನ್ನು ಓಲಾ ನೀಡಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್, 'ಇಂದು ಬೆಂಗಳೂರಿನಲ್ಲಿ ಓಲಾ ಪಾರ್ಸೆಲ್ ಅನ್ನು ಪ್ರಾರಂಭಿಸಲಾಗುತ್ತಿದೆ. 5 ಕಿ.ಮೀಗೆ ₹25, 10 ಕಿ.ಮೀಗೆ ₹50, 15 ಕಿ.ಮೀಗೆ ₹75, 20 ಕಿ.ಮೀಗೆ ₹100 ಪಾರ್ಸಲ್ ಚಾರ್ಚ್ ಅನ್ನು ನಿಗದಿಪಡಿಸಲಾಗಿದೆ. ನೀವು ಇಂದು ( ಶುಕ್ರವಾರ ) ರಾತ್ರಿಯಿಂದಲೇ ಇದನ್ನು ಬಳಸಬಹುದು. ಈ ಯೋಜನೆಯನ್ನು ಶೀಘ್ರದಲ್ಲೇ ಭಾರತದಾದ್ಯಂತ ವಿಸ್ತರಿಸಲಾಗುವುದು' ಎಂದು ತಿಳಿಸಿದ್ದಾರೆ.

ಪ್ರಸ್ತುತ, ಸ್ವಿಗ್ಗಿ, ಡುಂಜೋ, ಪೋರ್ಟರ್ ಮತ್ತು ಉಬರ್ ಕಂಪನಿಗಳು ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಇಂಟ್ರಾ-ಸಿಟಿ ಪಾರ್ಸೆಲ್ ಸೇವೆಗಳನ್ನು ನೀಡುತ್ತಿವೆ. ಪಾರ್ಸೆಲ್ ನೆಟ್‌ವರ್ಕ್ ಅನ್ನು ಇತರ ನಗರಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದು ಓಲಾ ಹೇಳಿದೆ.
ಓಲಾ ಕಂಪನಿಯು ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಾದ್ಯಂತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಓಲಾ ಈ ಹಿಂದೆ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸಿದೆ. ಆದರೆ, ಭಾರತೀಯ ಕ್ಯಾಬ್ ಅಗ್ರಿಗೇಟರ್ ಕಂಪನಿಯು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸುವುದು ಇದೇ ಮೊದಲು. ಓಲಾದ ಎಸ್1 ಎಲೆಕ್ಟ್ರಿಕ್ ಸ್ಕೂಟರ್‌ಗಳು ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳಾಗಿ ಕಾರ್ಯನಿರ್ವಹಿಸುತ್ತಿದೆ.
ಬೈಕ್ ಟ್ಯಾಕ್ಸಿಗಳ ದರವನ್ನು 5 ಕಿಲೋಮೀಟರ್‌ಗೆ ₹25 ಮತ್ತು 10 ಕಿಲೋಮೀಟರ್‌ಗೆ ₹50 ಎಂದು ನಿಗದಿಪಡಿಸಲಾಗಿದೆ. ಇದು ಅತ್ಯಂತ ಆರಾಮದಾಯಕ ಮತ್ತು ಪರಿಸರ ಸ್ನೇಹಿಯಾಗಿದೆ ಎಂದು ಓಲಾ ಹೇಳಿಕೊಂಡಿದೆ. ಇದು ಮುಂದಿನ ಕೆಲವು ತಿಂಗಳುಗಳಲ್ಲಿ ಭಾರತದಾದ್ಯಂತ ಬರಲಿದೆ ಎಂದು ಭವಿಶ್ ಅಗರ್ವಾಲ್ ಹೇಳಿದ್ದಾರೆ.












Click it and Unblock the Notifications