ಬೆಂಗಳೂರು-ದೆಹಲಿ ಪ್ರತಿದಿನದ ರೈಲು; ವೇಳಾಪಟ್ಟಿ, ನಿಲ್ದಾಣಗಳು

ಬೆಂಗಳೂರು, ಮೇ 12 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಪ್ರಯಾಣಿಕ ರೈಲು ಸಂಚಾರ ರದ್ದಾಗಿದೆ. ಮಂಗಳವಾರದಿಂದ ದೇಶದಲ್ಲಿ ಕೆಲವು ರೈಲುಗಳ ಸಂಚಾರ ಆರಂಭವಾಗಿದೆ. ಬೆಂಗಳೂರು-ದೆಹಲಿ ನಡುವೆಯೂ ಪ್ರತಿದಿನ ರೈಲು ಸಂಚಾರ ನಡೆಸಲಿದೆ.

ನೈಋತ್ಯ ರೈಲ್ವೆ ಬೆಂಗಳೂರು-ನವದೆಹಲಿ ನಡುವೆ ಪ್ರತಿದಿನ ಎಸಿ ಸೂಪರ್ ಫಾಸ್ಟ್ ರೈಲನ್ನು ಓಡಿಸುತ್ತಿದೆ. ಮಂಗಳವಾರ ರಾತ್ರಿ ಮೊದಲ ರೈಲು ಬೆಂಗಳೂರು ಮತ್ತು ನವದೆಹಲಿಯಿಂದ ಸಂಚಾರವನ್ನು ಆರಂಭಿಸಲಿದೆ. ಈಗಾಗಲೇ ಆನ್‌ ಲೈನ್‌ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.

ರೈಲಿನಲ್ಲಿ ಸಂಚಾರ ನಡೆಸುವವರು 90 ನಿಮಿಷ ಮೊದಲು ನಿಲ್ದಾಣಕ್ಕೆ ಬರಬೇಕು. ನಿಮ್ಮ ಟಿಕೆಟ್ ಖಚಿತವಾಗಿದ್ದರೆ ಮಾತ್ರ ರೈಲು ನಿಲ್ದಾಣ ಪ್ರವೇಶ ಮಾಡಬಹುದು. ಸಾರ್ವಜನಿಕ ಸಾರಿಗೆ ಸಂಚಾರ ಇಲ್ಲದ ಕಾರಣ ಸ್ವಂತ ವಾಹನದಲ್ಲಿಯೇ ನಿಲ್ದಾಣಕ್ಕೆ ಆಗಮಿಸಬೇಕಿದೆ.

Bengaluru New Delhi Daily Train Schedule And Stations

ರೈಲು ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರಿಗೂ ಥರ್ಮಲ್ ಸ್ಕ್ಯಾನಿಂಗ್‌ ಮಾಡಲಾಗುತ್ತದೆ. ನಿಲ್ದಾಣದಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಪ್ರಯಾಣದ ಅವಧಿಯಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ರೈಲಿನಲ್ಲಿ ಸಂಚಾರ ನಡೆಸುವ ಪ್ರಯಾಣಿಕರು ಕುಡಿಯುವ ನೀರು, ಒಣಗಿದ ಹಣ್ಣು, ರೆಡಿ ಟು ಈಟ್ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿದೆ. ರೈಲಿನೊಳಗೆ ವೊಳಗೆ ಬ್ಲಾಂಕೆಟ್ ನೀಡುವುದಿಲ್ಲ.

ವೇಳಾಪಟ್ಟಿ : ಬೆಂಗಳೂರಿನಿಂದ ಪ್ರತಿದಿನ ರಾತ್ರಿ 8.30ಕ್ಕೆ ರೈಲು ನಂಬರ್ 02691 ಮೆಜೆಸ್ಟಿಕ್‌ ರೈಲು ನಿಲ್ದಾಣದಿಂದ ಹೊರಡಲಿದೆ. ನವದೆಹಲಿಯನ್ನು ಮೂರನೇ ದಿನ 5.55ಕ್ಕೆ ರೈಲು ತಲುಪಲಿದೆ.

ನವದೆಹಲಿಯಿಂದ ರೈಲು ನಂಬರ್ 02692 ಪ್ರತಿದಿನ ರಾತ್ರಿ 9.15ಕ್ಕೆ ಹೊರಡಲಿದೆ. ಮೂರನೇ ದಿನ ಬೆಳಗ್ಗೆ 6.40ಕ್ಕೆ ಬೆಂಗಳೂರನ್ನು ತಲುಪಲಿದೆ. ಈ ರೈಲಿನಲ್ಲಿ ಒಟ್ಟು 1076 ಜನರು ಸಂಚಾರ ನಡೆಸಬಹುದಾಗಿದೆ.

ದೆಹಲಿ-ಬೆಂಗಳೂರು ರೈಲಿಗೆ ಅನಂತಪುರ, ಗುಂತಕಲ್ ಜಂಕ್ಷನ್, ಸಿಕಂದರಾಬಾದ್, ನಾಗ್ಪುರ, ಭೋಪಾಲ್ ಮತ್ತು ಝಾನ್ಸಿಯಲ್ಲಿ ನಿಲುಗಡೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+