Get Updates
Get notified of breaking news, exclusive insights, and must-see stories!

Price Hike: ದೆಹಲಿ, ಮುಂಬೈಗಿಂತ ಬೆಂಗಳೂರು ಮೆಟ್ರೋ ಪ್ರಯಾಣ ಬಲು ದುಬಾರಿ, ವಿವಿಧ ನಗರಗಳ ಮೆಟ್ರೋ ದರ ಪಟ್ಟಿ

ಬೆಂಗಳೂರು: ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಾಕಷ್ಟು ಆಕ್ರೋಶದ ಹೊರತಾಗಿಯು ದರ ಏರಿಕೆ ಸಮಿತಿ ಶಿಫಾರಸಿನಂತೆ ವಾರ್ಷಿಕವಾಗಿ ಶೇ.5ರಷ್ಟು ದರ ಏರಿಕೆ ಮಾಡುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಘೋಷಿಸಿದೆ. ಹೊಸ ದರವು ಫೆಬ್ರವರಿ 9ರಿಂದ ಜಾರಿಗೆ ಬರಲಿದೆ. ಈ ಹೆಚ್ಚಳ ಮೂಲಕ ದೇಶದಲ್ಲೇ ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣವು ಅತ್ಯಂತ ದುಬಾರಿ ಆಗಲಿದೆ. ಹಾಗಾದರೆ ದೇಶದ ಬೇರೆ ಬೇರೆ ನಗರಗಳಲ್ಲಿ ಮೆಟ್ರೋ ಟಿಕೆಟ್ ದರ ಎಷ್ಟಿದೆ?, ಅತೀ ಕಡಿಮೆ ಮೆಟ್ರೋ ಟಿಕೆಟ್ ಬೆಲೆ ಹೊಂದಿರು ನಗರ ಯಾವುದು? ಇಲ್ಲಿ ತಿಳಿಯಿರಿ.

ದೇಶದ ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ 'ನಮ್ಮ ಮೆಟ್ರೋ' ದರವು ಫೆಬ್ರವರಿ 9 ರಿಂದ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಒಂದು ವರ್ಷದ ಹಿಂದೆಯೇ ದರ ಶೇಕಡ 51ರಷ್ಟು ಏರಿಕೆ ಮಾಡಲಾಗಿತ್ತು. ಅದಾಗಲೇ ವಿವಿಧ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ತತ್ತರಿಸಿದ್ದ ಜನರಿಗೆ ಈ ಮೆಟ್ರೋ ದರವು ಸಹ ಮತ್ತೊಂದು ದೊಡ್ಡ ಆರ್ಥಿಕ ಬರೆ ನೀಡಿತ್ತು. ಈ ವರ್ಷ ಮತ್ತೆ ಶೇ.5ರಷ್ಟು ದರ ಹೆಚ್ಚಳ ಜಾರಿ ಆಗುತ್ತಿದೆ. ಮೆಟ್ರೋ ಪ್ರಯಾಣ ಗರಿಷ್ಠ ದರದಲ್ಲಿ ಬೆಂಗಳೂರು ಮೊದಲಿದೆ. ನಂತರದ ಸ್ಥಾನದಲ್ಲಿ ಯಾವೆಲ್ಲ ನಗರಗಳಿವೆ ಎಂದು 'ಮನಿ ಕಂಟ್ರೋಲ್' ವರದಿ ಮಾಡಿದೆ.

Bengaluru Namma Metro

ಬೆಂಗಳೂರು ಮೆಟ್ರೋ ದರ ಎಷ್ಟಿದೆ?

ಮೊದಲಿಗೆ ಬೆಂಗಳೂರು ಮೆಟ್ರೋ ದರ ಹೆಚ್ಚಳ ತಿಳಿಯುವುದಾದರೆ, ನಮ್ಮ ಮೆಟ್ರೋ 0-2 ಕಿ.ಮೀ. 10 ರೂ. ಇದ್ದ ದರವು 11 ರೂ.ಗೆ ಹೆಚ್ಚಿಸಲಾಗಿದೆ. ಅದೇ ರೀತಿ 2-4 ಕಿ.ಮೀ.:ದರವನ್ನು ರೂ.20 ರಿಂದ ರೂ.21ಕ್ಕೆ ಏರಿಕೆ, 4-6 ಕಿ.ಮೀ. ದರವು 30 ರೂ.ನಿಂದ 32 ರೂಪಾಯಿಗೆ ಹೆಚ್ಚಳ, 6-8 ಕಿ.ಮೀ. 40 ರೂ.ನಿಂದ 42 ರೂಪಾಯಿಗೆ ಹೆಚ್ಚಳ, 8-10 ಕಿ.ಮೀ.ಗೆ ರೂ.50 ಇದ್ದದ್ದು 53 ರೂಪಾಯಿಗೆ ಏರಿಸಲಾಗಿದೆ. 10-15 ಕಿ.ಮೀ ದೂರದ ಪ್ರಯಾಣವು ರೂ.60 ರಿಂದ ರೂ.63ಕ್ಕೆ ಹೆಚ್ಚಾಗಿದ್ದು, 15-20 ಕಿ.ಮೀ. ರೂ.70 ರಿಂದ ರೂ.74ಕ್ಕೆ ಏರಿಕೆ ಆಗಿದೆ. ಗರಿಷ್ಠ ಪ್ರಯಾಣದ ದರ 90ರೂಪಾಯಿ ಇದೆ. ಇದು ಫೆಬ್ರವರಿ 9ರಿಂದ 95 ರೂಪಾಯಿಗೆ ಏರಲಿದೆ. ಇಷ್ಟು ಹಣ ಬೇರಾವ ನಗರಗಳ ಮೆಟ್ರೋಗೆ ಇಲ್ಲ.

ದೆಹಲಿ ಮತ್ತು ಕೊಲ್ಕತ್ತ ಮೆಟ್ರೋ ಟಿಕೆಟ್ ದರ

1. ದೆಹಲಿ ಮೆಟ್ರೋ ದರ: ವೇಗವಾಗಿ ಜಾಲ ವಿಸ್ತರಿಸಿಕೊಳ್ಳುತ್ತಿರುವ ದೆಹಲಿ ಮೆಟ್ರೋ 394 ಕಿಲೋ ಮೀಟರ್ ನೆಟ್‌ವರ್ಕ್ ಹೊಂದಿದೆ. ಅದರ ಗರಿಷ್ಠ ದರ 64 ರೂಪಾಯಿ ಇದೆ. ಈ ಹಣದಲ್ಲಿ 32 ಕಿ.ಮೀ ಗಿಂತ ಹೆಚ್ಚು ದೂರಕ್ಕೆ ಪ್ರಯಾಣ ಮಾಡಬಹುದಾಗಿದೆ.

2. ಮುಂಬೈ ಮೆಟ್ರೋ ಪ್ರಯಾಣ ದರ: 80 ಕಿ.ಮೀ ಜಾಲ ಹೊಂದಿರುವ ಮುಂಬೈ ಮಹಾನಗರದ ಜನರು ಗರಿಷ್ಠ 80 ರೂಪಾಯಿ (42 ಕಿ.ಮೀ ಗಿಂತ ಹೆಚ್ಚು) ನೀಡಿ ಪ್ರಯಾಣ ಮಾಡುತ್ತಾರೆ.

3. ಹೈದರಾಬಾದ್ ಮತ್ತು ಚೆನ್ನೈ: ಈ ನಗರಗಳಲ್ಲಿ ಗರಿಷ್ಠ ದರ ಕ್ರಮವಾಗಿ 69 ರೂಪಾಯಿ ಮತ್ತು 50 ರೂಪಾಯಿ ಇದೆ.

4. ಕೋಲ್ಕತ್ತಾ ಮೆಟ್ರೋ: ದೇಶದಲ್ಲೇ ಅತಿ ಕಡಿಮೆ ಮೆಟ್ರೋ ದರ ಹೊಂದಿರುವ ನಗರ ಕಲ್ಕತ್ತಾ. ಇಲ್ಲಿ ಕನಿಷ್ಠ ಬೆಲೆ 5ರೂಪಾಯಿಯಿಂದ ಗರಿಷ್ಠ 50 ರೂ.ವರೆಗೆ ಇದೆ.

5. ದೇಶದ ಮೆಟ್ರೋ ನಗರಗಳ ಪೈಕಿ ಸಣ್ಣದಾದ (ಕಡಿಮೆ ಜಾಲ ಹೊಂದಿರುವ) ಲಕ್ನೋ, ಕೊಚ್ಚಿ ಮತ್ತು ಜೈಪುರದಂತಹ ನಗರಗಳಲ್ಲಿ ಮೆಟ್ರೋ ದರವು ಬೆಂಗಳೂರಿಗಿಂತ ಸಾಕಷ್ಟು ಕಡಿಮೆ ಇದೆ. ಜೈಪುರದಲ್ಲಿ ಗರಿಷ್ಠ ದರ 30 ರೂಪಾಯಿ ಇದೆ. ಲಕ್ನೋ ಮತ್ತು ಕೊಚ್ಚಿಯಲ್ಲಿ ಗರಿಷ್ಠ ದರ 60 ರೂಪಾಯಿ ನಿಗದಿಯಾಗಿದೆ.

ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆ ನಿರೀಕ್ಷೆ

ಕರ್ನಾಟಕ ರಾಜಧಾನಿ ಬೆಂಗಳೂರು 2026ರಲ್ಲಿ ಒಟ್ಟು 96 ಕಿಲೋ ಮೀಟರ್ ಜಾಲ ಹೊಂದಿದೆ. ಹೊಸ ದರ ಜಾರಿಗೆ ಬಂದ ನಂತರ ನಗರ ಪ್ರಯಾಣಿಕರಿಗೆ ಆರ್ಥಿಕ ಹೊರೆ ಆಗಿ ಪರಿಣಮಿಸಲಿದೆ. ಆದ್ದರಿಂದ ದರ ಕಡಿಮೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮೆಟ್ರೋ ಬಹಿಷ್ಕಾರ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಜರುಗಲಿದೆ. ದರ ಹೆಚ್ಚಿಸಿದ್ದೇ ಆದಲ್ಲಿ 10 ಲಕ್ಷ ತಲುಪಿದ್ದ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಆಗುವ ಸಾಧ್ಯತೆ ಇದೆ.

---------

ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್‌' ವೆಬ್‌ಸೈಟ್‌ನಲ್ಲಿದೆ

ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್‌ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್‌ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್‌, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್‌, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್‌, 'ಮೈಖೇಲ್' ವೆಬ್‌ಸೈಟ್ ಬೆಸ್ಟ್‌.

ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್‌ ಫಾಲೊ ಮಾಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+