Namma Metro-BMTC Fare: ಇಂದಿನಿಂದ ನಗರ ಸಾರಿಗೆಗಿಂತ ನಮ್ಮ ಮೆಟ್ರೋ ಪ್ರಯಾಣ ದುಬಾರಿ!

ಬೆಂಗಳೂರು, ಫೆಬ್ರವರಿ 09: ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಟಿಕೆಟ್ ಪರಿಷ್ಕೃತ ದರ ಇಂದಿನಿಂದ (ಫೆ.9) ರಿಂದ ಅನ್ವಯವಾಗಲಿದೆ. ಇದರಿಂದ ಮೆಟ್ರೋ ಪ್ರಯಾಣವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಹವಾನಿಯಂತ್ರಿತ ಬಸ್‌ ಸಂಚಾರಕ್ಕಿಂತಲೂ ದುಬಾರಿಯಾಗಿದೆ. ದರ ಪರಿಷ್ಕರಣೆಗೆ ಈಗಾಗಲೇ ವಿರೋಧ ವ್ಯಕ್ತವಾದರೂ ಹೊಸ ದರ ಜಾರಿಗೆ ತರಲಾಗಿದೆ. ಹಾಗಾದರೆ ಎಸಿ ಬಸ್ ಪ್ರಯಾಣ ಎಷ್ಟಿದೆ? ಮೆಟ್ರೋ ಪ್ರಯಾಣದ ಹೊಂದಾಣಿಕೆ ವಿವರ ಇಲ್ಲಿದೆ.

ಬೆಂಗಳೂರು ದರ ಭಾರೀ ಪ್ರಮಾಣದಲ್ಲಿ ಏರಿಕೆ ಆಗಲಿದೆ ಎಂಬ ವಿಷಯಗೊತ್ತಾಗುತ್ತಿದ್ದಂತೆ ವಿರೋಧಗಳು ಕೇಳಿ ಬಂದವು. ಈ ಮೆಟ್ರೋ ದರ ಏರಿಕೆಯಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಹೀಗೆ ಹೇಳಿದ ಎರಡೇ ದಿನಗಳಲ್ಲಿ ಬಿಎಂಆರ್‌ಸಿಎಲ್ ಪರಿಷ್ಕೃತ ದರವನ್ನು ಪ್ರಕಟಿಸಿದೆ.

Bengaluru Namma Metro Travel Very Expensive More Than BMTC AC Bus Ticket Price hike details

ಬಿಎಂಟಿಸಿ ಎಸಿ ಬಸ್ ಸ್ಥಿರ ದರ ಎಷ್ಟಿದೆ?

ಸಾರ್ವಜನಿಕರ ಆರ್ಥಿಕ ಹೊರೆ ವಿಚಾರ ಗಮನದಲ್ಲಿಟ್ಟುಕೊಂಡು ನೋಡುವುದಾದರೆ, ಸದರಿ ನಮ್ಮ ಮೆಟ್ರೋ ಈಗ 25 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕೆ 90 ರೂಪಾಯಿ ಸ್ಥಿರ ದರ ನಿಗದಿಪಡಿಸಿದೆ. ಇದೇ ಬಿಎಂಟಿಸಿ ಬಸ್‌ ಹೋಲಿಕೆ ಮಾಡಿ ನೋಡುವುದಾದರೆ, ಹವಾನಿಯಂತ್ರಿತ ಬಿಎಂಟಿಸಿ ಎಸಿ ಬಸ್ (ವಜ್ರ ಬಸ್) 50 ಕಿ.ಮೀ.ವರೆಗೆ ದೂರ ಪ್ರಯಾಣಿಕರು 65 ರೂ. ಸ್ಥಿರ ದರ ನಿಗದಿ ಮಾಡಿದೆ.

ಬಿಎಂಟಿಸಿ ಮತ್ತು ನಮ್ಮ ಮೆಟ್ರೋ ಎರಡು ಸಹ ಸಾರ್ವಜನಿಕ ಸಾರಿಗೆಗಳೆ ಆಗಿವೆ. ಆದರೆ ಬಿಎಂಟಿಸಿಗಿಂತ ಮೆಟ್ರೋ ಸೇವೆ ಭೀನ್ನವಾಗಿದೆ. ವೇಗದ, ಸಂಚಾರ ಕಿರಿ ಕಿರಿ ಇಲ್ಲದೇ ಸೇವೆ ಆಗಿದೆ. ಕಡಿಮೆ ಸಮಯದಲ್ಲಿ ನೀವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಬಹುದಾಗಿದೆ. ಹೀಗಾಗಿ ಇವೆರಡು ಬೆಲೆ ಏರಿಕೆ ಒಂದಕ್ಕೊಂದು ಸಂಬಂಧ ಪಡುವುದಿಲ್ಲ. ಆದರೆ ಮೆಟ್ರೋ ದರ ಹೆಚ್ಚಳಕ್ಕೆ ಜನರು ಮಾತ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

BMRCL ಟಿಕೆಟ್ ದರ ಹೆಚ್ಚಿಸಿತಲ್ಲದೇ ಹಾಲಿ ಸ್ಮಾರ್ಟ್ ಕಾರ್ಡ್ ಮೇಲಿನ ಶೇಕಡಾ 5 ರಿಯಾಯಿತಿ ಮುಂದುವರಿಸಲಾಗುವುದು ಎಂದು ತಿಳಿಸಿದೆ. ಅಂದರೆ ಪೀಕ್ ಸಮಯದಲ್ಲಿ ಸ್ಮಾರ್ಟ್ ಕಾರ್ಡ್ ಸಹಿತ ಪ್ರಯಾಣಿಕರಿಗೆ ಮೊದಲಿನಂತೆ ಹೆಚ್ಚುವರಿ 5% ರಿಯಾಯಿತಿ ಸಿಗುತ್ತದೆ. ಅದೇ ನೀವು ಭಾನುವಾರ, ಇನ್ನಿತರ ಸಾರ್ವತ್ರಿಕ ರಜಾದಿನಗಳಂದು ಓಡಾಡುವಾಗ ಸ್ಮಾರ್ಟ್ ಕಾರ್ಡ್ ಸಹಿತ ಪ್ರಯಾಣಿಕರಿಗೆ ಶೇಕಡಾ 10ರಷ್ಟು ಸ್ಥಿರ ರಿಯಾಯಿತಿ ಮುಂದುವರಿಸಲಿದೆ.

ಆದಾಗ್ಯೂ, ಸ್ಮಾರ್ಟ್ ಕಾರ್ಡ್ ಹೊಂದಿರುವವರು ತಮ್ಮ ಕಾರ್ಡ್ ಖಾತೆಗಳಲ್ಲಿ ಕನಿಷ್ಠ 90 ರೂ.ಗಳ ಕನಿಷ್ಠ ಬಾಕಿ ಹಣವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಮೆಟ್ರೋ ಪ್ರಯಾಣಿಕರಲ್ಲಿ ಸುಮಾರು ಶೇ. 50 ರಷ್ಟು ಜನರು ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುತ್ತಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಕ್ಯೂಆರ್ ಕೋಡ್-ಸಕ್ರಿಯಗೊಳಿಸಿದ ಟಿಕೆಟ್‌ಗಳನ್ನು ಬಳಸುವ ಪ್ರಯಾಣಿಕರಿಗೆ ಯಾವುದೇ ರಿಯಾಯಿತಿ ಇರುವುದಿಲ್ಲ ಮತ್ತು ಅವರು ಸಾಮಾನ್ಯ ಟೋಕನ್ ಬಳಕೆದಾರರಂತೆಯೇ ಅದೇ ದರಗಳನ್ನು ಪಾವತಿಸಬೇಕಾಗುತ್ತದೆ.

BMRCL ಎಂಡಿ ಹೇಳಿದ್ದೇನು?

ಮೆಟ್ರೋ ನಿಗಮವು ತನ್ನ ಮೆಟ್ರೋ ಕಾರ್ಯಾಚರಣೆಗೆ ಅಧಿಕ ವೆಚ್ಚ ಮಾಡುತ್ತಿದೆ. ಬೆಲೆ ಏರಿಕೆ ಸನ್ನಿವೇಶದಲ್ಲಿ ಹೊಸ ಮಾರ್ಗಗಳು, ವಿಸ್ತರಣೆ ಮಾರ್ಗಗಳು ಕಾಮಗಾರಿ ನಡೆಯುತ್ತಿದೆ. ಇಂದಿನ ಸನ್ನಿವೇಶಕ್ಕೆ ತಕ್ಕಂತೆ ಬೆಲೆ ಏರಿಕೆ ಅಗತ್ಯತೆ ಇದೆ ಎಂದು ಹೇಳಿತ್ತು. ಇದೀಗ ಮುಂದಿನ ಸುರಕ್ಷತಾ ಮಾನದಂಡ ಜಾರಿಗೆ ತರಲು ಮೆಟ್ರೋ ದರ ಪರಿಷ್ಕರಣೆ ಮಾಡಿದ್ದಾಗಿ BMRCL ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ತಿಳಿಸಿದ್ದಾರೆ. ಪ್ರಯಾಣಿಕರಿಗೆ ಸುರಕ್ಷತೆ ಭರವಸೆ ನೀಡಿದ್ದಾರೆ.

ಹೊಸ ದರದಿಂದ ನಿಗಮಕ್ಕೆ ಹೆಚ್ಚಿನ ಆದಾಯ ಬರಲಿದೆ. ಸುಮಾರು ಶೇ.40 ರಷ್ಟು ಅಧಿಕ ಆದಾಯ ಬರಲಿದ್ದು, ಹೂಡಿಕೆ ಮತ್ತು ಮರು ಪಾವತಿಗೆ ಆದ್ಯತೆ ನೀಡಲಾಗುತ್ತದೆ. ಪ್ರಯಾಣಿಕರಿಗೆ ನೀಡುವ ದಕ್ಷ ಸೇವೆ ಮುಂದುವರಿಯಲಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+