Namma Metro: ನೀಲಿ ಮಾರ್ಗ ನಿರ್ಮಾಣದಲ್ಲಿ ಶೇ.52 ಪ್ರಗತಿ, ಕಾಮಗಾರಿ ಗಡುವು ವಿಸ್ತರಣೆ!
ಬೆಂಗಳೂರು, ಸೆಪ್ಟಂಬರ್ 09: ಬೆಂಗಳೂರು ನಮ್ಮ ಮೆಟ್ರೋ ಹೊಸ ಮಾರ್ಗಗಳ ನಿರ್ಮಾಣದಲ್ಲಿ ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ. ಆದರೆ ಮಾರ್ಗ ಪೂರ್ಣಗೊಳಿಸುವುದು ಹಾಗೂ ಆ ಮಾರ್ಗದಲ್ಲಿ ರೈಲು ಸಂಚಾರ ಮಾತ್ರ ವಿಳಂಬವಾಗುತ್ತಿದೆ. ಇದೀಗ ಬಹುನಿರೀಕ್ಷೆ ಸಿಲ್ಕ್‌ಬೋರ್ಡ್-ಬೆಂಗಳೂರು ಏರ್‌ಪೋರ್ಟ್ ವರೆಗಿನ ನೀಲಿ ಮಾರ್ಗ ಕಾಮಗಾರಿಗೆ ಗಡುವು ವಿಸ್ತರಣೆ ಆಗಿದೆ.
ಹೌದು, ಎರಡು ಹಂತಗಳಲ್ಲಿ ನಿರ್ಮಾಣವಾಗುತ್ತಿರುವ 58.19 ಕಿಲೋ ಮೀಟರ್ ಉದ್ದದ ನಮ್ಮ ಮೆಟ್ರೋ ನೀಲಿ ಮಾರ್ಗದಲ್ಲಿ ವಿಳಂಬದ ಬಳಿಕವು ಬರದಿಂದ ಕಾಮಗಾರಿ ನಡೆಯುತ್ತಿದೆ. ಹೊರ ವರ್ತುಲ ರಸ್ತೆ (ORR) ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ ಕಾಮಗಾರಿ ನಡೆಯುತ್ತಿದೆ. ಈ ಮಾರ್ಗದ ಗುಡುವು ಮತ್ತೆ ಮುಂದಕ್ಕೆ ಹೋಗಿದೆ ಎಂದು 'ದಿ ಹಿಂದೂ' ವರದಿ ಮಾಡಿದೆ.

ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೃಷ್ಣರಾಜಪುರ (ಕೆ.ಆರ್. ಪುರ) ವರೆಗೆ ಹಂತ 2A ಮಾರ್ಗ ಹಾಗೂ ಕೆ.ಆರ್. ಪುರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ವರೆಗೆ ಹಂತ 2B ಎಂದು ಎರಡ ವಿಭಾಗಗಳಲ್ಲಿ ನೀಲಿ ಮಾರ್ಗ ಸಿದ್ದವಾಗುತ್ತಿದೆ. ಸ್ಥಿರವಾಗಿ ಕಾಮಗಾರಿ ನಡೆಯುತ್ತಿದೆ. ಇದು ಮೊದಲು 2026ರ ಜೂನ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ವರ್ಷಾಂತ್ಯಕ್ಕೆ ಕಾರ್ಯಾಚರಣೆ ಆರಂಭಿಸಲಿದೆ ಎನ್ನಲಾಗಿತ್ತು. ಇದೀಗ 2027ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ ಎಂದು BMRCL ಮೂಲಗಳು ಮಾಹಿತಿ ನೀಡಿವೆ.
ಈವರೆಗೆ ಕಾಮಗಾರಿ ಪ್ರಗತಿ ಎಷ್ಟಾಗಿದೆ?
ನೀಲಿ ಮಾರ್ಗದ ಒಟ್ಟು 58.19 ಕಿ.ಮೀ.ಯಲ್ಲಿ 19.75 ಕಿಮೀ ಹಂತ 2A (ಸಿಲ್ಕ್ ಬೋರ್ಡ್-ಕೆ.ಆರ್.ಪುರ) ಅಡಿಯಲ್ಲಿ ಬರುತ್ತದೆ. 38.44 ಕಿ.ಮೀ. ಹಂತ 2B ವ್ಯಾಪ್ತಿಗೆ (ಕೆ.ಆರ್.ಪುರಂ-ವಿಮಾನ ನಿಲ್ದಾಣ) ಬರುತ್ತದೆ. ಇದೇ ವರ್ಷ 2025 ಜೂನ್ 30 ವೇಳೆಗೆ ಈ ಮಾರ್ಗದಲ್ಲಿ ಬಹುತೇಕ 52.5 ಪ್ರಗತಿ ಸಾಧಿಸಲಾಗಿದೆ.
ಎಚ್‌ಬಿಆರ್ ಬಡಾವಣೆಯಲ್ಲಿ 2023 ರಲ್ಲಿ ನಡೆದ ಅಪಘಾತದ ಬಳಿಕ ಎಂಟತ್ತು ತಿಂಗಳು ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕೆ.ಆರ್.ಪುರ, ಬೆಂಗಳೂರು ಏರ್‌ಪೋರ್ಟ್ ವರೆಗಿನ ಕಾಮಗಾರಿ, ಏರ್‌ಪೋರ್ಟ್‌ನಲ್ಲಿನ ನಿಲ್ದಾಣ ನಿರ್ಮಾಣಕ್ಕೆ ವೇಗ ದೊರೆತಿದೆ. BIAL ಮೆಟ್ರೋ ನಿಲ್ದಾಣಗಳನ್ನು ತನ್ನದೇ ಆದ ವಿನ್ಯಾಸದಡಿ ನಿರ್ಮಿಸುತ್ತಿದೆ. ಏರ್‌ಪೋರ್ಟ್ ನಗರ ನಿಲ್ದಾಣವನ್ನು ನೆಲದ ಮಟ್ಟದಲ್ಲಿ ನಿರ್ಮಿಸಲಾಗುತ್ತದೆ.
ನೀಲಿ ಮಾರ್ಗ ಯೋಜನೆ ಕುರಿತು..
ಈ ನೀಲಿ ಮಾರ್ಗದ ಯೋಜನೆಯು ಒಂದು ದಶಕದ ಹಿಂದೆ ಆರಂಭವಾಯಿತು. ಮೊದಲು ಹಂತ 2A ಗಾಗಿ ಡಿಪಿಆರ್ ಸಿದ್ದಪಡಿಸಲಾಯಿತು. ಅದನ್ನು 2016 ರಲ್ಲಿ ಸರ್ಕಾರಕ್ಕೆ ಸಲ್ಲಿಸಲಾಯಿತು. ನಂತರದ ವರ್ಷದಲ್ಲಿ (2017 ಸೆಪ್ಟೆಂಬರ್) ಈ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿತು. ನಂತರ ಕೆ.ಆರ್.ಪುರ-ಕೆಇಎ 2B ಮಾರ್ಗದ ಪ್ರಸ್ತಾವನೆಗೆ ಜನವರಿ 2019 ರಲ್ಲಿ ಸರ್ಕಾರದ ಅನುಮತಿ ನೀಡಿತು. ಅಲ್ಲಿಂದ ಈವರೆಗೆ ಕಾಮಗಾರಿ ನಡೆದುಕೊಂಡು ಬಂದಿದೆ. ಈ ಮಾರ್ಗವು ಸಹ ನಗರದ ಸಂಚಾರ ದಟ್ಟಣೆಗೆ ಕಡಿವಾಣ ಹಾಕಲು, ನಗರದ ಸೂಕ್ತ ಸಾರಿಗೆ ಒದಗಿಸುವಲ್ಲಿ ನೀರ್ಣಾಯಕವಾಗಿದೆ.












Click it and Unblock the Notifications