ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ಮೆಮು ರೈಲಿನ ವೇಳಾಪಟ್ಟಿ ಬದಲು

|
Google Oneindia Kannada News

ಬೆಂಗಳೂರು, ಮಾರ್ಚ್ 15 : ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸುವ ಮೆಮು ರೈಲಿನ ವೇಳಾಪಟ್ಟಿ ಬದಲಾಗಲಿದೆ. ಇನ್ನು ಮುಂದೆ ವಾರದಲ್ಲಿ 6 ದಿನಗಳ ಕಾಲ ಉಭಯ ನಗರಗಳ ನಡುವೆ ರೈಲು ಸಂಚಾರ ನಡೆಸಲಿದೆ.

ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಮೆಮು ರೈಲು 06575/06576 ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಮಾರ್ಚ್ 18ರಿಂದ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ. ಸೋಮವಾರದಿಂದ ಶನಿವಾರದ ತನಕ ಇನ್ನು ಮುಂದೆ ರೈಲು ಸಂಚರಿಸಲಿದೆ.

ಹೊಸ ವೇಳಾಪಟ್ಟಿ ಅನ್ವಯ ಬೆಂಗಳೂರಿನಿಂದ ರೈಲು 8.20ರ ಬದಲು ಸಂಜೆ 5.20ಕ್ಕೆ ರೈಲು ಹೊರಡಲಿದೆ. ರಾತ್ರಿ 10.40ರ ಬದಲು 7.50ಕ್ಕೆ ಮೈಸೂರು ನಗರವನ್ನು ತಲುಪಲಿದೆ.

Bengaluru-Mysuru MEMU train schedule changed

ಮೈಸೂರಿನಿಂದ ಬೆಂಗಳೂರಿಗೆ ಬರುವ ರೈಲು ರಾತ್ರಿ 8.30ಕ್ಕೆ ಹೊರಡಲಿದ್ದು, 11.35ಕ್ಕೆ ಬೆಂಗಳೂರು ತಲುಪಲಿದೆ. ಸದ್ಯ 11.05ಕ್ಕೆ ರೈಲು ಮೈಸೂರಿನಿಂದ ಹೊರಡುತ್ತಿದೆ.

ಬೆಂಗಳೂರು ಮತ್ತು ರಾಮನಗರ ಸಂಚಾರ ನಡೆಸುತ್ತಿದ್ದ 66539/66540 ರೈಲುಗಳನ್ನು ಮಾರ್ಚ್ 18ರಿಂದ ತಾತ್ಕಾಲಿಕವಾಗಿ ರದ್ದುಗೊಳಿಸಲಾಗುತ್ತಿದೆ.

English summary
Bengaluru–Mysuru MEMU train schedule changed. Train will run in 6 days in a week after March 18, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X