Bengaluru Mysuru Expressway: ಬೆಂಗಳೂರು-ಮೈಸೂರು ಸರ್ವೀಸ್‌ ರಸ್ತೆಯಲ್ಲಿ ಹೊಸ ಸಂಕಷ್ಟ

ಬೆಂಗಳೂರು, ಮಾರ್ಚ್‌ 19: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ ಎರಡು ನಗರಗಳ ನಡುವಿನ ಸಂಚಾರದ ಅವಧಿಯನ್ನು ಕಡಿಮೆ ಮಾಡಿದೆ. ಹೆದ್ದಾರಿಯಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಬೈಕ್‌ ಮತ್ತು ಆಟೋ ನಿಷೇಧಿಸಲಾಗಿದೆ. ವಾಹನಗಳ ವೇಗಕ್ಕೆ ಸಹ ನಿಯಂತ್ರಣ ಹಾಕಲಾಗಿದೆ. ಆದರೆ ಈಗ ವಾಹನ ಸವಾರರಿಗೆ, ಪಾದಚಾರಿಗಳಿಗೆ ಸರ್ವೀಸ್ ರಸ್ತೆಯಲ್ಲಿ ಹೊಸ ಸಂಕಷ್ಟ ಎದುರಾಗಿದೆ. ಟೋಲ್ ತಪ್ಪಿಸಲು ಕೆಲವು ವಾಹನ ಸವಾರರು ಮಾಡುವ ತಂತ್ರ ಸರ್ವೀಸ್ ರಸ್ತೆಯ ಸವಾರರಿಗೆ ಸಂಕಟ ತಂದಿದೆ.

ಬೃಹತ್ ಲಾರಿಗಳು, ಹಲವು ವಾಣಿಜ್ಯ ವಾಹನಗಳು ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಟೋಲ್ ಕಟ್ಟುವುದು ತಪ್ಪಿಸಿಕೊಳ್ಳಲು ಸರ್ವೀಸ್ ರಸ್ತೆಯನ್ನು ಬಳಕೆ ಮಾಡುತ್ತಿವೆ. ಇದರಿಂದಾಗಿ ಸರ್ವೀಸ್ ರಸ್ತೆಯಲ್ಲಿ ಸಂಚಾರ ನಡೆಸುವ ಆಟೋ, ಬೈಕ್ ಮತ್ತು ಇತರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

Bengaluru Mysuru Expressway Safety Risks On Service Road

ಸರ್ವೀಸ್ ರಸ್ತೆಯ ವಾಹನ ಸವಾರರು ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್ಐ) ಅಧಿಕಾರಿಗಳಿಗೆ ದೂರು ನೀಡಿದ್ದರು. ಆದ್ದರಿಂದ ಈಗ ಅಧಿಕಾರಿಗಳು ಬಿಡದಿ ಮತ್ತು ತೂಬಿನಕೆರೆಯ ಬಳಿ ಬೃಹತ್ ಲಾರಿಗಳು, ವಾಣಿಜ್ಯ ವಾಹನಗಳು ಸರ್ವೀಸ್‌ ರಸ್ತೆಗೆ ಬರದಂತೆ ನಿರ್ಬಂಧಿಸಿದ್ದಾರೆ. ದೊಡ್ಡ ವಾಹನಗಳು ಸರ್ವೀಸ್ ರಸ್ತೆ ಬಳಕೆ ಮಾಡದಂತೆ ತಡೆಯಬೇಕು ಎಂದು ಕೆಲವು ದಿನಗಳ ಹಿಂದೆ ತೂಬಿನಕೆರೆ ಬಳಿ ಜನರು ಪ್ರತಿಭಟನೆ ಮಾಡಿದ್ದರು.

ಸರ್ವೀಸ್ ರಸ್ತೆಯಲ್ಲಿ ಸಂಕಟ: ಎನ್‌ಹೆಚ್ಐ ಅಧಿಕಾರಿಗಳ ಮಾಹಿತಿ ಪ್ರಕಾರ 119 ಕಿ. ಮೀ. ರಸ್ತೆ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾದ ಬಳಿಕ ಶೇ 30 ರಿಂದ 40ರಷ್ಟು ವಾಹನಗಳು ಟೋಲ್ ಶುಲ್ಕವನ್ನು ಪಾವತಿ ಮಾಡಿ ಮುಖ್ಯ ರಸ್ತೆಯನ್ನು ಬಳಕೆ ಮಾಡುತ್ತಿವೆ. ಆದರೆ ಉಳಿ ದ ವಾಹನಗಳು ಸರ್ವೀಸ್ ರಸ್ತೆಯನ್ನು ಬಳಕೆ ಮಾಡುತ್ತಿವೆ.

10 ಚಕ್ರದ ಬೃಹತ್ ಲಾರಿ ಟೋಲ್ ಹಣ ಉಳಿಸಲು 7 ಮೀಟರ್‌ನ ಸರ್ವೀಸ್ ರಸ್ತೆ ಬಳಕೆ ಮಾಡುತ್ತಿದೆ. ಇದರಿಂದಾಗಿ ಸರ್ವೀಸ್ ರಸ್ತೆಯಲ್ಲಿ ಇತರ ವಾಹನಗಳ ಸಂಚಾರಕ್ಕೆ ತೊಂದರೆ ಆಗುವ ಜೊತೆಗೆ ಅಪಘಾತಗಳು ಆಗುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಖ್ಯ ರಸ್ತೆಯಲ್ಲಿ ಅಪಘಾತ ಕಡಿಮೆ ಮಾಡಲು ಆಟೋ, ಬೈಕ್ ನಿಷೇಧಿಸಲಾಗಿದೆ. ಅವುಗಳು ಸರ್ವೀಸ್ ರಸ್ತೆಯಲ್ಲಿ ಸಂಚಾರ ನಡೆಸುತ್ತಿವೆ. ಆದರೆ ಈಗ ಬೃಹತ್ ಲಾರಿಗಳು ಸರ್ವೀಸ್ ರಸ್ತೆ ಬಳಕೆ ಮಾಡುತ್ತಿದ್ದು, ಇದನ್ನು ತಡೆಯಲು ಸ್ಥಳೀಯ ಪೊಲೀಸರ ಸಹಕಾರ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಟೋಲ್ ತಪ್ಪಿಸಲು ವಾಹನ ಸವಾರರು ಸರ್ವೀಸ್ ರಸ್ತೆಯನ್ನು ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ ಪ್ರವೇಶ/ ನಿರ್ಗಮನದಲ್ಲಿ ಇನ್ನೂ 28 ಕಡೆ ಟೋಲ್ ಬೂತ್ ನಿರ್ಮಾಣ ಮಾಡಲು ಚಿಂತನೆ ನಡೆದಿದೆ ಎಂದು ಎನ್‌ಹೆಚ್‌ಎಐ ಹೇಳಿದೆ. ಅಲ್ಲದೇ ಸರ್ವೀಸ್ ರಸ್ತೆಯನ್ನು ಅಗಲೀಕರಣ ಮಾಡಲು, ಟೋಲ್ ಬೂತ್ ಸ್ಥಾಪನೆ ಮಾಡಲು ಭೂ ಸ್ವಾಧೀನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯ ರಸ್ತೆಯಲ್ಲಿ ಗಂಟೆಗೆ 100 ಕಿ. ಮೀ. ವೇಗದಲ್ಲಿ ಸಂಚಾರ ನಡೆಸುವ ವಾಹನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಕೆಲವು ವಾಹನಗಳು ಟೋಲ್ ಬೂತ್ ಸಮೀಪ ನಿರ್ಗಮನವಾಗಿ, ಟೋಲ್ ಮುಗಿಯುತ್ತಿದ್ದಂತೆಯೇ ಮತ್ತೆ ಮುಖ್ಯ ರಸ್ತೆಗೆ ಸೇರಿಕೊಳ್ಳುತ್ತಿವೆ. ಇದರಿಂದ ಸರ್ವೀಸ್ ರಸ್ತೆ ಬಳಕೆ ಮಾಡುವವರಿಗೆ ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎನ್‌ಹೆಚ್‌ಎಐ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ ನಲ್ಲಿ ಇನ್ನೂ 711 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಯನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಮೈಸೂರಿನ ಕೊಲಂಬಿಯಾ ಏಷಿಯಾ ಜಂಕ್ಷನ್ ಬಳಿ ಫ್ಲೈ ಓವರ್. ಬಿಡದಿ, ಚನ್ನಪಟ್ಟಣ, ಇಂಡವಾಳು ಬಳಿ ರೈಲ್ವೆ ಮೇಲ್ಸೇತುವೆ. ಸರ್ವೀಸ್ ರಸ್ತೆ ಅಗಲೀಕರಣ, ಬಸ್ ನಿಲ್ದಾಣ ನಿರ್ಮಾಣ ಇತರ ಕಾಮಗಾರಿಗಳು ಸೇರಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇವುಗಳು ಪೂರ್ಣಗೊಳ್ಳಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+