ಬೆಂಗಳೂರು ಕೇಂದ್ರಾಡಳಿತ ಪ್ರದೇಶ; ದೇಶದ 2ನೇ ರಾಜಧಾನಿ ಆಗಲಿ; ಟ್ರೆಂಡ್ ಸೃಷ್ಟಿ ಮಾಡಿದ ಆಂಧ್ರ ಜನ: ಕನ್ನಡಿಗರ ತಿರುಗೇಟು
ಭಾರತದ ಎರಡನೇ ರಾಜಧಾನಿಯನ್ನಾಗಿ ಬೆಂಗಳೂರು ನಗರವನ್ನು ಮಾಡಬೇಕು; ದೆಹಲಿಯಂತೆ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂದು ಆಂಧ್ರಾವಾಲಾಗಳು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ರೆಂಡ್ ಸೃಷ್ಟಿ ಮಾಡಲು ಪ್ರಯತ್ನಿಸಿದ್ದಾರೆ. ಈ ಟ್ರೆಂಡ್‌ಗೆ ಕನ್ನಡಿಗರು ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ. ಸ್ವಂತ ರಾಜಧಾನಿಯನ್ನು ಮಾಡಿಕೊಳ್ಳದವರು ಬೇರೆ ರಾಜ್ಯದ ಬಗ್ಗೆ ಚಿಂತೆ ಮಾಡುತ್ತಿದ್ದಾರೆಂದು ಕಿಡಿಕಾರಿದ್ದಾರೆ. ಈ ಹಿಂದೆ ತಮಿಳುನಾಡಿನವರು ಬೆಂಗಳೂರಿನ ಮೇಲೆ ಕಣ್ಣಿಟ್ಟಿದ್ದರು. ಅವರಿಗೆ ಬುದ್ಧಿ ಕಲಿಸಲಾಗಿದೆ. ಇದೀಗ ಆಂಧ್ರದವರು ಶುರು ಮಾಡಿಕೊಂಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಪ್ರಾರಂಭವಾಗಿದೆ.
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ @karthik14321 ಎನ್ನುವ ಖಾತೆಯಿಂದ ಮಾಡಲಾಗಿರುವ ಟ್ವೀಟ್ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಖಾತೆಯಿಂದ ಮಾಡಿರುವ ಟ್ವೀಟ್‌ನಲ್ಲಿ, "ಬೆಂಗಳೂರಿನಲ್ಲಿ ನಡೆಯುತ್ತಿರುವ ಭಾಷಾ ಯುದ್ಧಕ್ಕೆ ಒಂದೇ ಪರಿಹಾರವೆಂದರೆ, ಬೆಂಗಳೂರನ್ನು ಭಾರತದ ಎರಡನೇ ರಾಜಧಾನಿಯನ್ನಾಗಿ ಮಾಡುವುದು♥ ಮತ್ತು ದೆಹಲಿಯಂತೆ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವುದು. ಬೆಂಗಳೂರಿನಲ್ಲಿ ಭಾಷಾ ಯುದ್ಧವನ್ನು ತಗ್ಗಿಸಲು ಇದೊಂದೇ ಸಂಭಾವ್ಯ ಪರಿಹಾರ. #Bengaluru #SecondcapitalofIndia #Kannada #Hindi #Delhi ಅಂತ ಸೋಷಿಯಲ್ ಮೀಡಿಯಾ ಎಕ್ಸನಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಒಂದು ಕಾಲದಲ್ಲಿ ತಮಿಳರು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲು ಪ್ರಯತ್ನಿಸಿದ್ದರು. ಆದರೆ ಕನ್ನಡಿಗರು ಆ ಪ್ರಯತ್ನವನ್ನು ವಿಫಲಗೊಳಿಸಿದರು. ಹಾಗಾಗಿ, ನಿಮ್ಮ ಕನಸಿನಲ್ಲಿಯೂ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗುವುದನ್ನು ಕಲ್ಪಿಸಿಕೊಳ್ಳಬೇಡಿ ಎಂದು ಕನ್ನಡಿಗರು ಹೇಳಿದ್ದಾರೆ.
ಬೆಂಗಳೂರಿಗೆ ಹೋಲಿಸಿದರೆ ಹೈದರಾಬಾದ್‌ನಲ್ಲಿ ಉರ್ದು ಮತ್ತು ಹಿಂದಿ ಮಾತನಾಡುವ ಜನರ ಸಂಖ್ಯೆ ಹೆಚ್ಚು.. ಹೈದರಾಬಾದ್ ಅನ್ನು ಭಾರತದ ಎರಡನೇ ರಾಜಧಾನಿಯನ್ನಾಗಿ ಮಾಡಬಹುದು ಇದರಿಂದ ಹಿಂದಿ ವ್ಯಾಪಾರಿಗಳಿಗೆ ಕೆಲಸ ಸುಲಭವಾಗುತ್ತದೆ.. ತೆಲುಗು ಜನರು ಉರ್ದು ಮತ್ತು ಹಿಂದಿಯನ್ನು ವಿರೋಧಿಸುವುದಿಲ್ಲ ಅಂತ ಡಾ. ಮುನೇಶ್ ಲಾಖಾ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಮಾಡಿದರೆ ನಾವು ನಮ್ಮ ಭಾಷೆಗಾಗಿ ಹೋರಾಡುವುದಿಲ್ಲ ಎಂದು ಯಾರು ಹೇಳಿದರು? ಆದರೂ ಅದು ಕನ್ನಡ ರಾಜರು ನಿರ್ಮಿಸಿದ ಕನ್ನಡ ನಗರ. ಇತಿಹಾಸ ಬದಲಾಗುವುದಿಲ್ಲ. ಆದರೆ ನೀವು ಅಮರಾವತಿಯಲ್ಲಿ ಎರಡನೇ ರಾಜಧಾನಿಯನ್ನು ಹೊಂದಬಹುದು ಅಂತಲೂ ಕನ್ನಡಿಗರು ಹೇಳಿದ್ದಾರೆ. ಒಟ್ಟಾರೆ ಬೆಂಗಳೂರು - ಕನ್ನಡಿಗರನ್ನು ಕೆಣಕಲು ಬಂದ ಆಂಧ್ರಪ್ರದೇಶದವರಿಗೆ ಕನ್ನಡಿಗರು ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.
ಈ ರೀತಿ ಏನಾದರೂ ನಡೆದರೆ ನಾವು ಕರ್ನಾಟಕವನ್ನು ದೇಶವನ್ನಾಗಿ ಮಾಡುತ್ತೇವೆ, ನಮ್ಮ ಪೂರ್ವಜರು ನಗರವನ್ನು ನಿರ್ಮಿಸಿದರು, ನಾವು ಕನ್ನಡಿಗರು ಮತ್ತು ನಮ್ಮ ಪೂರ್ವಜರು ಅದಕ್ಕಾಗಿ ಭೂಮಿಯನ್ನು ಕೊಟ್ಟಿದ್ದೇವೆ, ಇದನ್ನು ಹೇಳಲು ನೀವು ಯಾರು ಎಂದೂ ಆಕ್ರೋಶ ಹೊರ ಹಾಕಿದ್ದಾರೆ.
ನಮ್ಮಲ್ಲಿ ಭಾಷಾ ಯುದ್ಧವಿಲ್ಲ.. ಬೆಂಗಳೂರು ಕರ್ನಾಟಕ - ಕನ್ನಡದ ಭಾಗ ಎಂದೂ ಕೆಲವರು ಹೇಳಿದ್ದಾರೆ. ಅಚ್ಚರಿಯೆಂದರೆ ಈ ವಿಷಯದಲ್ಲಿ ಕೆಲವು ತೆಲುಗು ಭಾಷಿಕರು ಸಹ ಕನ್ನಡಿಗರ ಪರವಾಗಿ ಮಾತನಾಡಿದ್ದಾರೆ. ಇದು ನಮಗೆ ಬೇಡದೆ ಇರುವ ವಿಚಾರ ಅಂತ ಹೇಳಿದ್ದಾರೆ. ಸಂಪೂರ್ಣವಾಗಿ ಅನಗತ್ಯವಾದ ವಿಚಾರವಾಗಿದೆ. ಕನ್ನಡಿಗರು ನೀವು ಕಾಣುವ ಅತ್ಯಂತ ಆತಿಥ್ಯಕಾರಿ ಜನರು ಬೆಂಗಳೂರು ಕನ್ನಡ ಮತ್ತು ಕರ್ನಾಟಕದ ಅವಿಭಾಜ್ಯ ಅಂಗವಾಗಿ ಉಳಿಯಬೇಕು ಎಂದಿದ್ದಾರೆ.
The only solution for the language war in Bangalore is, make Bengaluru♥️ as a second capital of India and make it an Union territory like Delhi.This is only the possible solution to mitigate the language war in Bengaluru. #Bengaluru #SecondcapitalofIndia #Kannada #Hindi #Delhi https://t.co/WI2YZbvxJd
— పోరా కుయ్యా (@karthik14321) October 19, 2026


Click it and Unblock the Notifications
