Murdeshwar Train: ಬೆಂಗಳೂರು-ಕರಾವಳಿ ಪ್ರಯಾಣಿಕರಿಗೆ ಗುಡ್ ನ್ಯೂಸ್
ಬೆಂಗಳೂರು, ಏಪ್ರಿಲ್ 21: ರಾಜಧಾನಿ ಬೆಂಗಳೂರಿನಿಂದ ಕರಾವಳಿಯ ಮಂಗಳೂರು, ಉಡುಪಿ, ಮುರಡೇಶ್ವರ ಭಾಗದ ಕರಾವಳಿ ಜನರಿಗೆ ನೈಋತ್ಯ ರೈಲ್ವೆ ಅಧಿಕಾರಿಗಳು ಸಿಹಿ ಸುದ್ದಿ ನೀಡಿದ್ದಾರೆ. ನಿಮ್ಮ ಪ್ರಯಾಣ ಮತ್ತಷ್ಟು ಆರಾಮದಾಯಕವಾಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು-ಮುರುಡೇಶ್ವರ ಮತ್ತು ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲುಗಳು ಆರಾಮದಾಯಕ ಪ್ರಯಾಣ ಮಾತ್ರವಲ್ಲದೇ ಹೆಚ್ಚಿನ ಸುರಕ್ಷತೆಯನ್ನೂ ಒದಗಿಸಲಿದೆ.
ಹೌದು ಬೆಂಗಳೂರಿನಿಂದ ಹೊರಡುವ ಬೆಂಗಳೂರು-ಮುರುಡೇಶ್ವರ ಮತ್ತು ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ ರೈಲು ಸದ್ಯ ಸಾಮಾನ್ಯ ಬೋಗಿಗಳನ್ನು ಹೊಂದಿವೆ. ಇನ್ಮುಂದೆ ರೈಲುಗಳಿಗೆ ಅತ್ಯಾಧುನಿಕ LHB (ಲಿಂಕ್ ಹಾಫ್‌ಮನ್ ಬುಶ್) ಬೋಗಿಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಹೆಚ್ಚಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆಯ ಹುಬ್ಬಳ್ಳಿ ಕಚೇರಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ಮಾಹಿತಿ ನೀಡಿದ್ದಾರೆ.

ಪರಿಷ್ಕೃತ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಕಾರ್ಯ ನಿರ್ವಹಿಸಲಿರುವ ರೈಲು (ಸಂಖ್ಯೆ 16585) ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಮೇ 5 ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚಾರ ಆರಂಭಿಸಲಿದೆ.
ಮರಳಿ ಮುರಡೇಶ್ವರದಿಂದ ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16586) ಮೇ 6 ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಸಂಚರಿಸಲಿದೆ. ಇದಲ್ಲದೆ, ಬೆಂಗಳೂರಿನಿಂದ ಕಣ್ಣೂರಿಗೆ ಸಂಪರ್ಕ ಕಲಿಸುವ ರೈಲು ಸಂಖ್ಯೆ 16511 (ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್) ಮೇ 7 ರಿಂದ ಸಂಚರಿಸಲಿದೆ. ಮರಳಿ ಅದೇ ಮಾರ್ಗದಲ್ಲಿ ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16512) ಮೇ 8 ರಿಂದ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಕಾರ್ಯ ನಿರ್ವಹಿಸಲಿವೆ ಎಂದು ತಿಳಿಸಿದರು.

ನವೀಕರಿಸಲಾದ ಎಲ್‌ಎಚ್‌ಬಿ ರೇಕ್ ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ ಫಸ್ಟ್ ಕ್ಲಾಸ್ ಎಸಿ (1), ಎಸಿ 2-ಟೈರ್ (2), ಎಸಿ 3-ಟೈರ್ (4), ಸ್ವೀಪರ್ ಕ್ಲಾಸ್ (7), ಜನರಲ್ ಸೆಕೆಂಡ್ ಕ್ಲಾಸ್ (4), ಲಗೇಜ್/ಜನರೇಟರ್ ಕಾರ್‌ಗಳು (2). ಇರಲಿವೆ. ಈ ಹಿಂದೆ 22 ಬೋಗಿಗಳನ್ನು ಹೊಂದಿದ್ದ ಐಸಿಎಫ್ ರೇಕ್‌ನ ಬದಲಿಗೆ ಈಗ 20 ಹೊಸ ಎಲ್‌ಎಚ್‌ಬಿ ಬೋಗಿಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿವಿಧ ರೈಲುಗಳ ಸಂಚಾರ ರದ್ದು, ಪಟ್ಟಿ
ಬೆಳಗಾವಿ ಜಿಲ್ಲೆಯ ಗೋಕಾಕ್ ರಸ್ತೆ-ಘಟಪ್ರಭಾ ಮತ್ತು ಕುಡಚಿ-ಉಗಾರ್ ಖುರ್ದ್ ರೈಲು ಮಾರ್ಗಗಳ ನಡುವಿನ ಓವರ್‌ಹೆಡ್ ಸಲಕರಣೆ (OHE) ಕಾಮಗಾರಿ ನಡೆಸಲಾಗುತ್ತದೆ. ಈ ಸಂಬಂಧ ಈ ಮಾರ್ಗಗಳಲ್ಲಿ ಓಡಾಡುವ ರೈಲುಗಳ ಸಂಚಾ ಭಾಗಶಃ ರದ್ದುಗೊಳಿಸಲಾಗಿದೆ.
* ರೈಲು ಸಂಖ್ಯೆ 07303 ಬೆಳಗಾವಿ-ಮಿರಜ್ ವಿಶೇಷ ರೈಲು ಏಪ್ರಿಲ್ 21 ರಂದು ಭಾಗಶಃ ರದ್ದಾಗಿದೆ.
* ರೈಲು ಸಂಖ್ಯೆ 07304 ಮೀರಜ್-ಬೆಳಗಾವಿ ವಿಶೇಷ ರೈಲು ಏಪ್ರಿಲ್ 21 ರಂದು ಭಾಗಶಃ ರದ್ದಾಗಿದೆ.
* ರೈಲು ಸಂಖ್ಯೆ 07303 ಬೆಳಗಾವಿ-ಮಿರಜ್ ವಿಶೇಷ ರೈಲು ಕುಡಚಿ-ಮಿರಜ್ ನಡುವೆ ಏಪ್ರಿಲ್ 22 ರಂದು ಭಾಗಶಃ ಸಂಚಾರ ಸ್ಥಗಿತಗೊಳಿಸಿದೆ. ಕುಡಚಿಯಲ್ಲಿ ಕೊನೆಗೊಳ್ಳಲಿದೆ.
* ರೈಲು ಸಂಖ್ಯೆ 07304 ಮೀರಜ್-ಬೆಳಗಾವಿ ವಿಶೇಷ ರೈಲು ಮಿರಜ್-ಕುಡಚಿ ನಡುವೆ ಭಾಗಶಃ ರದ್ದಾಗಲಿದೆ. ಇನ್ನೂ ನಿಗದಿತ ಸಮಯದಲ್ಲಿ ಮಿರಜ್ ಬದಲಿಗೆ ಕುಡಚಿಯಿಂದ ರೈಲು ಸಂಚಾರ ಆರಂಭಿಸುತ್ತದೆ.
* ರೈಲು ಸಂಖ್ಯೆ 07301 ಬೆಳಗಾವಿ-ಮಿರಜ್ ವಿಶೇಷ ರೈಲು ಕುಡಚಿ-ಮಿರಜ್ ನಡುವೆ ಭಾಗಶಃ ಏಪ್ರಿಲ್ 23 ಮತ್ತು 24, ರಂದು ಆರಂಭವಾಗಲಿದ್ದು, ಕುಡಚಿಯಲ್ಲಿ ಸ್ವಲ್ಪ ಸಮಯಕ್ಕೆ ಕೊನೆಗೊಳ್ಳಲಿದೆ.
* ರೈಲು ಸಂಖ್ಯೆ 07302 ಮಿರಜ್-ಬೆಳಗಾವಿ ವಿಶೇಷ ರೈಲು ಮಿರಜ್-ಕುಡಚಿ ನಡುವೆ ಭಾಗಶಃ ರದ್ದಾಗಲಿದೆ. ಸೂಕ್ತ ಸಮಯದಲ್ಲಿ ಮಿರಜ್ ಬದಲಿಗೆ ಕುಡಚಿಯಿಂದ ಸಂಚಾರ ಆರಂಭಿಸಲಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.












Click it and Unblock the Notifications